ಗೋಣಿಕೊಪ್ಪ ವರದಿ, ಜು. ೮: ಡಾ. ಎಂ.ಪಿ. ಗಣೇಶ್ ಮಾಯಮುಡಿ ಅಭಿಮಾನಿಗಳ ಬಳಗದ ವತಿಯಿಂದ ಎಂ.ಪಿ. ಗಣೇಶ್ ಅವರ ೭೫ನೇ ಹುಟ್ಟುಹಬ್ಬ ಅಂಗವಾಗಿ ಭಾರತ ಹಾಕಿ ತಂಡದ ಮಾಜಿ ನಾಯಕ, ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಡಾ. ಮೊಳ್ಳೇರ ಪಿ. ಗಣೇಶ್ ಅವರ ಆತ್ಮಚರಿತ್ರೆ ‘ಲಿವಿಂಗ್ ದ ಡ್ರೀಮ್’ ಪುಸ್ತಕವನ್ನು ಧನುಗಾಲ ಮುರುಡೇಶ್ವರ ದೇವಸ್ಥಾನ ಸಭಾಂಗಣದಲ್ಲಿ ಲೋಕಾರ್ಪಣೆ ಗೊಳಿಸಲಾಯಿತು.

ಅಂರ‍್ರಾಷ್ಟಿçÃಯ ಹಿರಿಯ ಕ್ರೀಡಾಪುಟುಗಳ ಸಮ್ಮುಖದಲ್ಲಿ ಅರಮೇರಿ ಕಳಂಚೇರಿಮಠ ಅಧ್ಯಕ್ಷ ಶಾಂತಮಲ್ಲಿಕಾರ್ಜುನ ಸ್ವಾಮೀಜಿ, ಹಿರಿಯ ಹಾಕಿ ಪಟು ನಾಯಡ ವಾಸು ನಂಜಪ್ಪ, ಅಂರ‍್ರಾಷ್ಟಿçÃಯ ಮಾಜಿ ಓಟಗಾರ್ತಿ ಅಶ್ವಿನಿ ನಾಚಪ್ಪ, ಅಂರ‍್ರಾಷ್ಟಿçÃಯ ಕರಾಟೆಪಟು ಚೆಪ್ಪುಡೀರ ಅರುಣ್ ಮಾಚಯ್ಯ, ಲೇಖಕಿ ಪಾರುವಂಗಡ ಶ್ರೀವಿದ್ಯಾ ಸೋಮಣ್ಣ ಬಿಡುಗಡೆಗೊಳಿಸಿದರು.

ಅಂರ‍್ರಾಷ್ಟಿçÃಯ ಕರಾಟೆಪಟು ಚೆಪ್ಪುಡೀರ ಅರುಣ್ ಮಾಚಯ್ಯ ಮಾತನಾಡಿ, ಜಿಲ್ಲೆಯಿಂದ ಅಂರ‍್ರಾಷ್ಟಿçÃಯ ಮಟ್ಟಕ್ಕೆ ವಿವಿಧ ಕ್ರೀಡೆಯಲ್ಲಿ ಪಾಲ್ಗೊಳ್ಳುವವರ ಸಂಖ್ಯೆ ಕಡಿಮೆಯಾಗುತ್ತಿರುವುದು ಆತಂಕವಾಗುತ್ತಿದೆ. ಕಿರಿಯರ ಪ್ರತಿಭೆಗೆ ಅನುಗುಣವಾಗಿ ಪ್ರೋತ್ಸಾಹಿಸಿ ದೇಶ ಪ್ರತಿನಿಧಿಸುವ ಕಾರ್ಯ ನಡೆಯಬೇಕಿದೆ ಎಂದರು.

ಅರಮೇರಿ ಕಳಂಚೇರಿಮಠ ಅಧ್ಯಕ್ಷ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಮಾತನಾಡಿ, ದೇಶ ಮಟ್ಟಕ್ಕೆ ಕ್ರೀಡಾಪಟುಗಳನ್ನು ಪ್ರೋತ್ಸಾಹಿಸುವ ಅನಿವಾರ್ಯತೆ ಇದೆ ಎಂಬ ಕಳವಳವನ್ನು ಗಂಭೀರವಾಗಿ ಪರಿಗಣಿಸಬೇಕಿದೆ. ಈ ಬಗ್ಗೆ ದೃಢಸಂಕಲ್ಪ ಮಾಡಿಕೊಂಡು ಮುಂದುವರಿಯಬೇಕು ಎಂದರು. ಹಿರಿಯ ಓಟಗಾರ್ತಿ ಅಶ್ವಿನಿ ನಾಚಪ್ಪ ಎಂ.ಪಿ. ಗಣೇಶ್ ಅವರಿಂದ ವೈಯಕ್ತಿಕವಾಗಿ ಕ್ರೀಡೆಗೆ ದೊರೆತ ಪ್ರೋತ್ಸಾಹ ನೆನಪಿಸಿಕೊಂಡರು. ವೀರಾಜಪೇಟೆ ತಹಶೀಲ್ದಾರ್ ಯೋಗಾನಂದ ಮಾತನಾಡಿ, ಅಪರೂಪದ ವ್ಯಕ್ತಿತ್ವದ ಗಣೇಶ್ ಅವರ ಸಾಧನೆ ಎಲ್ಲರಿಗೂ ಸ್ಪೂರ್ತಿ. ನಮಗೆ ಅವರೊಂದಿಗೆ ಪಾಲ್ಗೊಳ್ಳಲು ಈ ಮೂಲಕ ಅವಕಾಶ ದೊರೆತಿದೆ ಎಂದರು.

ಡಾ. ಮೊಳ್ಳೇರ ಪಿ. ಗಣೇಶ್ ಅವರ ಹೆಸರಿನಲ್ಲಿ ಕಿರಿಯರಿಗೆ ಕ್ರೀಡಾಕೂಟ ಆಯೋಜಿಸುವುದರಿಂದ ಅವರಿಗೆ ಮತ್ತಷ್ಟು ಗೌರವ ನೀಡಿದಂತಾಗುತ್ತದೆ ಎಂಬ ಅಭಿಪ್ರಾಯ ವ್ಯಕ್ತವಾಯಿತು. ದೇಶಕ್ಕೆ ಹಾಕಿ ಕ್ರೀಡೆ ಮೂಲಕ ನೀಡಿರುವ ಕೊಡುಗೆ ಅಪಾರ, ಇದನ್ನು ಗಂಭೀರವಾಗಿ ಪರಿಗಣಿಸಬೇಕಿದೆ ಎಂಬ ಒತ್ತಾಯ ಕೇಳಿಬಂತು.

ಲೇಖಕಿ ಪಾರುವಂಗಡ ಶ್ರೀವಿದ್ಯಾ ಸೋಮಣ್ಣ, ಡಾ. ಮೊಳ್ಳೇರ ಪಿ. ಗಣೇಶ್, ಪ್ರೇಮ ದಂಪತಿಯನ್ನು ಸನ್ಮಾನಿಸಲಾಯಿತು. ಕೊರೊನಾ ತಡೆಗಟ್ಟಲು ಮಾಸ್ಕ್ ವಿತರಿಸಲಾಯಿತು.

ಚೆಪ್ಪುಡೀರ ಕಾರ್ಯಪ್ಪ ತಮ್ಮ ನಿರೂಪಣೆಯಲ್ಲಿ ಎಂ.ಪಿ. ಗಣೇಶ್ ಅವರ ಸಾಧನೆಯನ್ನು ಮೆಲುಕು ಹಾಕಿದರು. ೧೯೭೩ ರಲ್ಲಿ ಭಾರತ ವಿಶ್ವಕಪ್ ಬೆಳ್ಳಿ ಗೆಲ್ಲುವಲ್ಲಿ ನಾಯಕರಾಗಿ ಎಂ.ಪಿ. ಗಣೇಶ್ ಸಾಧನೆ ತೋರಿದ್ದರು. ೧೯೭೧ ವಿಶ್ವಕಪ್‌ನಲ್ಲಿ ಕಂಚು, ೧೯೭೨ ನ್ಯೂನಿಚ್ ಒಲಿಂಪಿಕ್ಸ್ನಲ್ಲಿ ಕಂಚು ಗೆಲ್ಲುವಾಗ ಕೂಡ ಇವರು ತಂಡದಲ್ಲಿದ್ದರು. ನಂತರ ವರ್ಷಗಳಲ್ಲಿ ತರಬೇತುದಾರನಾಗಿ ದೇಶಕ್ಕೆ ಕೊಡಗು ನೀಡಿದ್ದಾರೆ. ೧೯೮೦ ರ ಮಾಸ್ಕೋ ಟೂರ್ನಿಯಲ್ಲಿ ಚಿನ್ನ ಪದಕ ಗೆಲ್ಲುವಾಗ ಸಹಾಯಕ ತರಬೇತುದಾರರಾಗಿದ್ದರು. ೧೯೮೮ರಲ್ಲಿ ಮುಖ್ಯ ತರಬೇತುದಾರನಾಗಿ ಕೂಡ ಸಾಧನೆ ಮಾಡಿದರು. ಇವರ ಸಾಧನೆಗೆ ೧೯೭೪ ರಲ್ಲಿ ಅರ್ಜುನ ಪ್ರಶಸ್ತಿ, ನಂತರ ದ್ರೋಣಾಚಾರ್ಯ, ರಾಜೀವ್‌ಗಾಂಧಿ ಖೇಲ್‌ರತ್ನ ಪ್ರಶಸ್ತಿ, ದ್ಯಾನ್‌ಚಂದ್ ಪ್ರಶಸ್ತಿ, ಏಕಲವ್ಯ ಪ್ರಶಸ್ತಿ, ೨೦೨೦ ರಲ್ಲಿ ಪದ್ಮಶ್ರೀ ದೊರೆತ್ತಿರುವುದು ಇವರ ಕ್ರೀಡೆಯಲ್ಲಿನ ಬದ್ಧತೆಗೆ ದೊರೆತ ಗೌರವ ಎಂದರು. ೧೯೮೨ ರಲ್ಲಿ ಮುಖ್ಯಮಂತ್ರಿ ಗುಂಡೂರಾವ್ ಕ್ರೀಡಾ ವಸತಿ ಶಾಲೆ ಆರಂಭಿಸಲು ಇವರ ಸಲಹೆ ಪ್ರಾಮುಖ್ಯತೆ ಪಡೆದುಕೊಂಡಿತ್ತು. ಇದರಿಂದ ಸಾಕಷ್ಟು ಪ್ರತಿಭೆಗಳಿಗೆ ತರಬೇತಿ ಪಡೆಯಲು ಅನುಕೂಲವಾಗಿದೆ ಎಂದು ತಿಳಿಸಿದರು.

ಅಂರ‍್ರಾಷ್ಟಿçÃಯ ಮಟ್ಟದ ಹಿರಿಯ, ಕಿರಿಯ ಆಟಗಾರರು ಪಾಲ್ಗೊಂಡು ಗಣೇಶ್‌ರವರಿಗೆ ಶುಭ ಹಾರೈಸಿದರು. ಡಾ. ಮೊಳ್ಳೇರ ಪಿ. ಗಣೇಶ್ ಸರಳ ಜೀವನ, ಕ್ರೀಡೆಯಲ್ಲಿದ್ದ ಬದ್ಧತೆ ಬಗ್ಗೆ ಹಿರಿಯ ಆಟಗಾರರು ಗುಣಗಾನ ಮಾಡಿದರು. ಅಂರ‍್ರಾಷ್ಟಿçÃಯ ಮಾಜಿ ಆಟಗಾರರಾದ ಪೈಕೇರ ಕಾಳಯ್ಯ, ಮಾಳೆಯಂಡ ಮುತ್ತಪ್ಪ, ಮಂಡೇಪAಡ ಎಸ್. ಮೊಣ್ಣಪ್ಪ, ಬೊವ್ವೇರಿಯಂಡ ಕುಟ್ಟಪ್ಪ, ಕರ್ನಲ್ ಬಾಳೆಯಡ ಸುಬ್ರಮಣಿ, ಪಾರುವಂಗಡ ಪೊನ್ನಪ್ಪ, ಪೆಮ್ಮಂಡ ಅಪ್ಪಯ್ಯ, ಭಾನುಮತಿ ಸುಬ್ಬಯ್ಯ, ಹಾಕಿ ತೀರ್ಪುಗಾರ ಅಚ್ಚಕಾಳೇರ ಪಳಂಗಪ್ಪ, ಭಾರತದ ಹಾಲಿ ಗಾಲ್ಫ್ ಆಟಗಾರ ಅಜ್ಜಿಕುಟ್ಟೀರ ತ್ರಿಶೂಲ್ ಚಿಣ್ಣಪ್ಪ, ಎಂ.ಪಿ. ಗಣೇಶ್ ಅವರ ಗುರು ಮುಂಡುಮಾಡ ರಾಮು ಪಾಲ್ಗೊಂಡು ವಿಶೇಷತೆ ಮೂಡಿಸಿದರು.

ಬಳಗದ ಸಂಚಾಲಕ ಬಾನಂಡ ಪ್ರಥ್ಯು, ಸದಸ್ಯರಾರ ಚೆಪ್ಪುಡೀರ ಕಿಟ್ಟು ಅಯ್ಯಪ್ಪ, ಕಾಳಪಂಡ ಸುಧೀರ್, ಕೀತಿಯಂಡ ದಿಲೀಪ್ ಇದ್ದರು. ಹೇಮ ಪ್ರಾರ್ಥಿಸಿದರು.