*ಗೋಣಿಕೊಪ್ಪ, ಜು. ೯: ಅಪಘಾತಕ್ಕೀಡಾದ ವ್ಯಕ್ತಿಯ ತಂದೆಗೆ ಟಿ. ಶೆಟ್ಟಿಗೇರಿ ಮಾಜಿ ಸೈನಿಕರ ಸಂಘದ ಸದಸ್ಯರು ಹತ್ತು ಸಾವಿರ ರೂಪಾಯಿಗಳ ಆರ್ಥಿಕ ನೆರವು ನೀಡಿ ಮಾನವೀಯತೆ ಮೆರೆದಿದ್ದಾರೆ.
ನೆಮ್ಮಲೆ ಗ್ರಾಮದ ನಿವಾಸಿ ಮಾಜಿ ಸೈನಿಕರಾದ ಚೊಟ್ಟೆಯಾಂಡಮಾಡ ಟಿ. ಪೂಣಚ್ಚ ಅವರ ಮಗ ಇತ್ತೀಚೆಗೆ ವಾಹನ ಅಪಘಾತಕ್ಕೀಡಾಗಿ ತೀವ್ರ ಸಂಕಷ್ಟ ಎದುರಿಸುತ್ತಿದ್ದು, ಸಂಘದಿAದ ಸಿ.ಟಿ. ಪೂಣಚ್ಚ ಆರ್ಥಿಕ ನೆರವು ಕೋರಿದ್ದ ಹಿನ್ನೆಲೆ ಟಿ. ಶೆಟ್ಟಿಗೇರಿ ಮಾಜಿ ಸೈನಿಕರ ಸಂಘದ ವತಿಯಿಂದ ಹತ್ತು ಸಾವಿರ ರೂಪಾಯಿಗಳ ಆರ್ಥಿಕ ನೆರವು ನೀಡಲಾಗಿದೆ.
ಈ ಸಂದರ್ಭ ಸಂಘದ ಅಧ್ಯಕ್ಷ ಕಟ್ಟೇರ ವಿಶ್ವನಾಥ್, ಉಪಾಧ್ಯಕ್ಷ ಮನ್ನೆರ ರಮೇಶ್, ಕಾರ್ಯದರ್ಶಿ ಉಳುವಂಗಡ ಗಣಪತಿ ಹಾಗೂ ಆಡಳಿತ ಮಂಡಳಿ ಸದಸ್ಯರು ಹಾಜರಿದ್ದು ಮಾಜಿ ಸೈನಿಕರ ಸಮಸ್ಯೆಗಳಿಗೆ ಸಂಘವು ಸ್ಪಂದಿಸುವ ಭರವಸೆ ನೀಡಿದರು.