ಕೂಡಿಗೆ, ಜು. ೯: ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜೇನುಕಲ್ಲು ಬೆಟ್ಟದ ಕಡೆಯಿಂದ ಬರುವ ಮಳೆಯ ನೀರು ಮತ್ತು ಹಾರಂಗಿ ಮುಖ್ಯ ನಾಲೆಯ ನೀರು ಸೇರುವ ಉಪ ಕಾಲುವೆಗಳ ಮಣ್ಣಿನ ಕುಸಿತದಿಂದಾಗಿ ಕಾಲುವೆಗಳು ಹೊಳು ತುಂಬಿವೆ ರೈತರ ಬೇಡಿಕೆಯ ಅನುಗುಣವಾಗಿ ಉಪ ಕಾಲುವೆಗಳ ದುರಸ್ತಿ ಕಾರ್ಯವನ್ನು ಮೊದಲ ಆದ್ಯತೆ ಮೇರೆಗೆ ತೆಗೆದುಕೊಳ್ಳಲಾಗುವುದು ಎಂದು ಹಾರಂಗಿ ನೀರಾವರಿ ಇಲಾಖೆಯ ಸಹಾಯಕ ಕಾರ್ಯಪಾಲಕ ಅಭಿಯಂತರ ಮಹೇಂದ್ರ ಕುಮಾರ್ ತಿಳಿಸಿದ್ದಾರೆ.

ಜೇನುಕಲ್ಲು ಬೆಟ್ಟದ ನೀರು ಮತ್ತು ಮುಖ್ಯ ನಾಲೆಯ ಸೋರುವಿಕೆಯ ನೀರು ಹಾರಂಗಿ ಮುಖ್ಯ ನಾಲೆಯ ಅಡಿ ಭಾಗದಲ್ಲಿ ಬರುವ ವ್ಯವಸ್ಥೆಯನ್ನು ಹಾರಂಗಿ ಅಣೆಕಟ್ಟೆಯ ನಿರ್ಮಾಣ ಮಾಡುವ ಸಂದರ್ಭದಲ್ಲಿ ನಾಲೆಗಳ ನಿರ್ಮಾಣಕ್ಕೆ ಕ್ರಿಯಾ ಯೋಜನೆ ಮಾಡುವ ಸಂದರ್ಭ ಮುಖ್ಯ ನಾಲೆ ಅಡಿ ಭಾಗದಿಂದ ಹರಿಯುವ ಹೊಸ ತಂತ್ರಜ್ಞಾನ ಮೂಲಕ ವ್ಯವಸ್ಥೆ ಮಾಡಲಾಗಿದೆ ಸೋರಿಕೆಯ ನೀರು ದಂಡಿನಮ್ಮ ಕೆರೆ ಸೇರುವ ವ್ಯವಸ್ಥೆಯನ್ನು ಮಾಡಲಾಗಿ ಅದರ ಮೂಲಕವಾಗಿ ಕಾವೇರಿ ನದಿಗೆ ನೀರು ಹೋಗುವ ವ್ಯವಸ್ಥೆಯನ್ನು ಮಾಡಲಾಗಿದೆ

ಆದರೆ ಕಳೆದ ಎರಡೂ ವರ್ಷಗ ಳಿಂದಲೂ ಅಧಿಕ ಮಳೆಯಿಂದಾಗಿ ಬೆಟ್ಟದ ನೀರು ಅಧಿಕವಾಗಿ ಬಂದು ಉಪ ಕಾಲುವೆಗಳಲ್ಲಿ ಹೂಳು ತುಂಬಿಕೊAಡ ಪರಿಣಾಮವಾಗಿ ಕಾಲುವೆಯಲ್ಲಿ ಹರಿಯಬೇಕಾದ ನೀರು ರಸ್ತೆಯ ಮೇಲೆ ಹರಿದು ಕೆಳ ಭಾಗದ ಜಮೀನಿಗೆ ನೀರು ನುಗ್ಗಿ ತೊಂದರೆಗಳು ಉಂಟಾಗಿವೆ

ಸ್ಥಳಕ್ಕೆ ನೀರಾವರಿ ಅಧಿಕಾರಿ ವರ್ಗದವರು ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದ್ದಾರೆ. ರೈತರ ಬೇಡಿಕೆಯ ಅನುಗುಣವಾಗಿ ರೈತರಿಗೆ ಅನುಕೂಲ ಕಲ್ಪಿಸುವ ದೃಷ್ಟಿಯಿಂದ ಮೊದಲು ಕ್ರಿಯಾ ಯೋಜನೆ ತಯಾರಿಸಿ ಹಣ ಬಿಡುಗಡೆಯಾದ ತಕ್ಷಣವೇ ಕಾಮಗಾರಿಯನ್ನು ಪ್ರಾರಂಭ ಮಾಡಲಾಗುವುದು ಎಂದು ಮಹೇಂದ್ರ ಕುಮಾರ್ ತಿಳಿಸಿದ್ದಾರೆ.