ಕುಶಾಲನಗರ, ಜು. ೯: ಕುಶಾಲನಗರದ ಐತಿಹಾಸಿಕ ತಾವರೆಕೆರೆ ಬಫರ್ ಜೋನ್ ಒತ್ತುವರಿ ಹಿನ್ನೆಲೆಯಲ್ಲಿ ಹೈಕೋರ್ಟ್ ನಲ್ಲಿ ಸಾರ್ವಜನಿಕ ಹಿತಾಸಕ್ತಿ ಸಲ್ಲಿಸಿದ ವಕೀಲ ಅಮೃತೇಶ್ ತನ್ನ ಸಮ್ಮುಖದಲ್ಲೇ ಸರ್ವೇ ಕಾರ್ಯಕ್ಕೆ ಸಲ್ಲಿಸಿದ ಮೇಲ್ಮನವಿ ಹಿನ್ನೆಲೆ ಶುಕ್ರವಾರ ಜಂಟಿ ಸರ್ವೆ ಕಾರ್ಯ ಪೂರ್ಣ ಗೊಂಡಿದೆ.
ಕೆರೆಯ ಬಫರ್ ಝೋನ್ ಪ್ರದೇಶದಲ್ಲಿ ಒತ್ತುವರಿಯಾಗಿರುವ ರಾಷ್ಟಿçÃಯ ಹೆದ್ದಾರಿ ೨೭೫, ಕೆರೆಯಿಂದ ನೀರು ಹೊರ ಹೋಗುವ ಕಾಲುವೆ ಪ್ರದೇಶ, ಗೋಂದಿಬಸವನಳ್ಳಿ ಮೂಲಕ ಹರಿದು ಬರುವ ತೋಡಿನ ಪ್ರದೇಶ, ಅಕ್ರಮ ರಸ್ತೆ, ಖಾಸಗಿ ಲೇಔಟ್, ಟಿಂಬರ್ ಮಿಲ್, ಖಾಸಗಿ ಕೃಷಿ ಜಮೀನು ಸೇರಿದಂತೆ ಖಾಸಗಿ ವಿದ್ಯಾಸಂಸ್ಥೆಯ ಕಟ್ಟಡ ಮತ್ತು ರಸ್ತೆಯ ಮತ್ತೊಂದು ಬದಿಯಲ್ಲಿ ನಿರ್ಮಾಣವಾಗುತ್ತಿರುವ ಲೇಔಟ್ ಗಳಲ್ಲಿ ಗಡಿ ಗುರುತಿಸುವಿಕೆ ಕಾರ್ಯ ನಡೆಯಿತು. ಭೂಮಾಪನಾ ಇಲಾಖೆಯ ಹಿರಿಯ ಅಧಿಕಾರಿ ವಿರೂಪಾಕ್ಷ, ತಾಲೂಕು ತಹಶೀಲ್ದಾರ್ ಗೋವಿಂದರಾಜ್
(ಮೊದಲ ಪುಟದಿಂದ) ನೇತೃತ್ವದಲ್ಲಿ ದೂರುದಾರ ವಕೀಲ ಅಮೃತೇಶ್ ಸಮ್ಮುಖದಲ್ಲಿ ಕೆರೆಯ ತಟದ ೩೦ ಮೀಟರ್ ವ್ಯಾಪ್ತಿಯ ಬಫರ್ ಜೋನ್ ಗಡಿಗುರುತು ಮಾಡಲಾಯಿತು.
ಕೆರೆಗೆ ಸಂಬAಧಿಸಿದ ಪ್ರದೇಶಗಳನ್ನು ಗಡಿಗುರುತು ಮಾಡಲಾಗಿದ್ದು ಮತ್ತು ಸರ್ವೆ ಕಾರ್ಯ ಬಹುತೇಕ ಸಮರ್ಪಕವಾಗಿ ನಡೆದಿದೆ ಎಂದು ದೂರುದಾರ ಅಮೃತೇಶ್ ಸುದ್ದಿಗಾರರ ಜತೆ ಪ್ರತಿಕ್ರಿಯೆ ಹಂಚಿಕೊAಡರು. ಜಿಲ್ಲಾಧಿಕಾರಿ ಮೂಲಕ ಹೈಕೋರ್ಟ್ಗೆ ವರದಿ ಸಲ್ಲಿಕೆ ಆಗಲಿದ್ದು, ಈ ತಿಂಗಳ ೧೨ ರಂದು ಪ್ರಕರಣ ನ್ಯಾಯಾಲಯದಲ್ಲಿ ವಿಚಾರಣೆಗೆ ಬರಲಿದೆ.
ಸರ್ವೆ ವೇಳೆ ಪಟ್ಟಣ ಪಂಚಾಯ್ತಿ ಮುಖ್ಯಾಧಿಕಾರಿ ಕೃಷ್ಣ ಪ್ರಸಾದ್, ಕುಡ ಕಾರ್ಯದರ್ಶಿ ಪ್ರವೀಣ್, ಕಂದಾಯ ನಿರೀಕ್ಷಕ ಸಂತೋಷ್, ಮಧುಸೂಧನ್, ಸರ್ವೆಯರ್ ಯೋಗಾನಂದ, ಗ್ರಾಮಲೆಕ್ಕಿಗ ಗೌತಮ್, ವಕೀಲೆ ದೀಕ್ಷಾ ಹಾಜರಿದ್ದರು.