ಮಡಿಕೇರಿ, ಜು. ೮: ಕೊಡವ ಸಮುದಾಯ ಹಾಗೂ ಜಮ್ಮಾ ಹಿಡುವಳಿದಾರರು ಹೊಂದಿರುವ ವಿಶೇಷವಾದ ಕೋವಿಹಕ್ಕು ವಿನಾಯಿತಿ ವಿಚಾರ ಇದೀಗ ಮತ್ತೊಮ್ಮೆ ವಿವಾದದ ಸ್ವರೂಪ ಪಡೆಯುತ್ತಿದೆ. ಈ ವಿಶೇಷ ಹಕ್ಕಿನ ಕುರಿತಾಗಿ ಈ ಹಿಂದಿನಿAದಲೂ ಪ್ರಶ್ನಿಸಿಕೊಂಡು ಬರುತ್ತಿರುವ ನಿವೃತ್ತ ಕ್ಯಾಪ್ಟನ್ ಯಾಲದಾಳು ಕೆ. ಚೇತನ್ ಅವರು ಇದೀಗ ನ್ಯಾಯಾಲಯದಲ್ಲಿ ಮತ್ತೊಂದು ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿ.ಐ.ಎಲ್.) ಸಲ್ಲಿಸಿದ್ದಾರೆ.
ಕೊಡವ ಸಮುದಾಯ ಹಾಗೂ ಜಮ್ಮಾ ಹಿಡುವಳಿದಾರರು ಬಂದೂಕು ಹೊಂದಲು ಶಸ್ತಾçಸ್ತç ಕಾಯ್ದೆಯ ನಿಬಂಧನೆಗಳಿಗೆ ವಿನಾಯಿತಿ ನೀಡಿ ೨೦೧೯ ರ ಅಕ್ಟೋಬರ್‌ನಲ್ಲಿ ಹೊರಡಿಸಲಾಗಿರುವ ಅಧಿಸೂಚನೆಯ ವಿರುದ್ಧವಾಗಿ ಇದನ್ನು ಪ್ರಶ್ನಿಸಿ ಅರ್ಜಿದಾರರು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದಾರೆ.
ಅರ್ಜಿದಾರರಾದ ಯಾಲದಾಳು ಕೆ. ಚೇತನ್ ಅವರ ಈ ಮನವಿಯ ವಿಚಾರಣೆ ನಡೆಸಿದ
(ಮೊದಲ ಪುಟದಿಂದ) ರಾಜ್ಯ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿ ಎ.ಎಸ್. ಓಕಾ ಹಾಗೂ ಸೂರಜ್ ಗೋವಿಂದರಾಜ್ ನೇತೃತ್ವದ ವಿಭಾಗೀಯ ಪೀಠ ಈ ಬಗ್ಗೆ ಕೇಂದ್ರ ಸರಕಾರಕ್ಕೆ ನೋಟೀಸ್ ನೀಡಿದೆ.
ಸೇನೆಯಲ್ಲಿ ಶಾರ್ಟ್ ಸರ್ವೀಸ್ ಕಮಿಷನ್‌ನಂತೆ ಕರ್ತವ್ಯ ನಿರ್ವಹಿಸಿ ನಿವೃತ್ತರಾಗಿರುವ ಚೇತನ್ ಅವರು ಕೊಡಗಿನಲ್ಲಿರುವ ಈ ಸಮುದಾಯಕ್ಕೆ ನೀಡಲಾಗಿರುವ ವಿಶೇಷ ವಿನಾಯಿತಿಯ ಕುರಿತಾಗಿ ಈ ಹಿಂದೆಯೂ ನ್ಯಾಯಾಲಯದಲ್ಲಿ ಪ್ರಶ್ನಿಸಿದ್ದರು. ಈ ವಿಚಾರದ ಬಗ್ಗೆ ಭಾರೀ ಆಕ್ಷೇಪ - ಅಸಮಾಧಾನಗಳು ಜಿಲ್ಲೆಯಲ್ಲಿ ಆ ಸಂದರ್ಭದಲ್ಲಿ ವ್ಯಕ್ತಗೊಂಡಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ.
ಈ ಹಿಂದೆ ಸಲ್ಲಿಕೆಯಾಗಿದ್ದ ಅರ್ಜಿಯಂತೆ ಸಾಕಷ್ಟು ಚರ್ಚೆ - ವಿಚಾರಣೆಗಳು ನಡೆದಿದ್ದು, ಈ ಹಕ್ಕನ್ನು ಮುಂದಿನ ೨೦೨೯ ರ ಅಕ್ಟೋಬರ್ ತನಕ ಯಥಾಸ್ಥಿತಿಯಲ್ಲಿ ಮುಂದುವರಿಸಲು ಸಂಬAಧಿಸಿದ ಇಲಾಖೆಯ ಮೂಲಕ ಅಧಿಕೃತವಾದ ಆದೇಶವನ್ನು ಹೊರಡಿಸಿತ್ತು. ಆರಂಭದಲ್ಲಿ ವಿಚಾರಣೆ ನಡೆಸಿದ ರಾಜ್ಯ ಉಚ್ಚ ನ್ಯಾಯಾಲಯವು ಈ ಕುರಿತು ಪರಿಶೀಲಿಸಿ ತೀರ್ಮಾನಕೈಗೊಳ್ಳಲು ಕೇಂದ್ರಕ್ಕೆ ಸೂಚಿಸಿತ್ತು. ಇದರಂತೆ ಕೇಂದ್ರದ ಗೃಹ ಸಚಿವಾಲಯವು ಬಳಿಕ ವಿನಾಯಿತಿ ಹಕ್ಕನ್ನು ಯಥಾಸ್ಥಿತಿಯಲ್ಲಿ ೨೦೨೯ ರ ಅಕ್ಟೋಬರ್ ತನಕ ಮುಂದುವರಿಸಲು ಆದೇಶ ಪ್ರಕಟಿಸಿತ್ತು.
ಇದೀಗ ಈ ಆದೇಶವನ್ನು ಮರು ಪ್ರಶ್ನಿಸಿ ಚೇತನ್ ಅರ್ಜಿ ಸಲ್ಲಿಸಿದ್ದಾರೆ. ಇದರಂತೆ ವಿಚಾರಣೆ ನಡೆಸಿದ ನ್ಯಾಯಾಲಯ ಈ ಬಗ್ಗೆ ನೋಟೀಸ್ ನೀಡಿದ್ದು, ಮುಂದಿನ ವಿಚಾರಣೆಯನ್ನು ಮುಂದೂಡಿದೆ.
ಈ ಬಗ್ಗೆ ‘ಶಕ್ತಿ’ಯೊಂದಿಗೆ ಪ್ರತಿಕ್ರಿಯಿಸಿರುವ ಈ ಹಿಂದೆ ಈ ವಿಚಾರದಲ್ಲಿ ವಿಶೇಷ ಹಕ್ಕು ಹೊಂದಿರುವವರ ಪರವಾಗಿ ಕಾನೂನಾತ್ಮಕವಾಗಿ ಹೋರಾಟ ನಡೆಸಿದ್ದ ವಕೀಲರ ತಂಡದ ಪ್ರಮುಖರು ಹಾಗೂ ಪ್ರಸ್ತುತ ಬೆಂಗಳೂರು ಕೊಡವ ಸಮಾಜದ ಲೀಗಲ್ ಸೆಲ್‌ನ್ ಅಧ್ಯಕ್ಷರಾಗಿರುವ ಐತಿಚಂಡ ದೇವಯ್ಯ ಅವರು ಈ ಬಗ್ಗೆ ಚರ್ಚಿಸಿ ಪ್ರಕರಣದ ಬಗ್ಗೆ ‘ಇಂಪ್ಲೀಡ್’ ಆಗುವ ಕುರಿತು ಹಾಗೂ ಮುಂದಿನ ನಡೆಯ ಬಗ್ಗೆ ತೀರ್ಮಾನ ಕೈಗೊಳ್ಳಲಿರುವುದಾಗಿ ತಿಳಿಸಿದ್ದಾರೆ.