ಮಡಿಕೇರಿ, ಜು. ೮ : ಅಯ್ಯೋ... ನಮ್ಮ ಹಣೆ ಬರಹವೇ... ಎಂಬುದು ಪ್ರಸ್ತುತ ಕಾಫಿಯನ್ನು ಈಗಾಗಲೇ ಮಾರಾಟ ಮಾಡಿರುವ ಕಾಫಿ ಬೆಳೆಗಾರರ ಚಿಂತೆಯಾಗಿದ್ದು, ಕೈ ಕೈ ಹೊಸಕಿಕೊಳ್ಳುವಂತಾಗಿದೆ. ಇದು ಬಹುತೇಕ ಮಂದಿಯ ಪರಿಸ್ಥಿತಿಯಾಗಿದೆ. ಇನ್ನು ಒಂದಷ್ಟು ಮಂದಿ ಕಾಫಿಯನ್ನು ಮಾರಾಟ ಮಾಡದೆ ಇಟ್ಟುಕೊಂಡಿರುವವರಿಗೆ ತುಸು ನೆಮ್ಮದಿಯ ಭಾವ ಮೂಡುತ್ತಿದೆ. ಇದಕ್ಕೆ ಕಾರಣವಾಗಿರುವುದು ಕಳೆದ ಕೆಲವು ದಿನಗಳಿಂದ ಕಾಫಿ ಧಾರಣೆಯಲ್ಲಿ ಒಂದಷ್ಟು ಏರಿಕೆ ಕಂಡುಬರುತ್ತಿರುವುದು. ಇದು ಭಾರತದ ಕಾಫಿ ವಹಿವಾಟು ಅಥವಾ ಬೇಡಿಕೆಯ ಮೂಲಕವಲ್ಲ. ಬದಲಿಗೆ ವಿಶ್ವದಲ್ಲಿ ಅತಿಹೆಚ್ಚು ಕಾಫಿಯನ್ನು ಉತ್ಪಾದಿಸುವ ರಾಷ್ಟçವಾದ ಬ್ರೆಜಿಲ್‌ನಲ್ಲಿ ಉಂಟಾಗಿರುವ ಹವಾಮಾನದ ವೈಪರೀತ್ಯದಿಂದಾಗಿ ಎಂಬುದನ್ನು ಅರಿಯಬೇಕಿದೆ.
(ಮೊದಲ ಪುಟದಿಂದ) ಬ್ರೆಜಿಲ್ ವಿಶ್ವದ ಕಾಫಿ ಉತ್ಪಾದನೆಯಲ್ಲಿ ಶೇ. ೫೦ಕ್ಕೂ ಅಧಿಕ ಪ್ರಮಾಣವನ್ನು ಬೆಳೆಯುವ ರಾಷ್ಟçವಾಗಿದೆ. ಇಲ್ಲಿ ಈ ಬಾರಿ ಭೀಕರ ಬರಗಾಲ ಎದುರಾಗಿದೆ. ಈ ರಾಷ್ಟçದಲ್ಲಿ ಮರ ಗಿಡಗಳ ನೆರಳಿನ ಸಹಾಯವಿಲ್ಲ. ಬದಲಿಗೆ ಎಲ್ಲವೂ ಬಯಲು ಪ್ರದೇಶದ ಮಾದರಿ ಇದೆ. ತೀವ್ರ ಬಿಸಿಲಿನ ಪರಿತಾಪದಿಂದಾಗಿ ಬ್ರೆಜಿಲ್‌ನಲ್ಲಿ ಕಾಫಿ ಗಿಡಗಳು ಒಣಗಿ ಕರಕಲಾಗುತ್ತಿದೆ ಎಂದು ತಿಳಿದುಬಂದಿದೆ. ಪ್ರಸ್ತುತ ಅಲ್ಲಿ ಕಾಫಿಯ ‘ಸೀಸನ್’ ಬೇರೆ ಇದೇ ಸಂದರ್ಭದಲ್ಲಿ ಎದುರಾಗಿದೆ. ಇದರೊಂದಿಗೆ ಚಳಿಯ ಸಮಯವೂ ಆಗಿದ್ದು, ಉಷ್ಣಾಂಶವೂ ರಾತ್ರಿವೇಳೆ ೨ರಿಂದ ೩ ಡಿಗ್ರಿಯಷ್ಟು ಕೆಳಗಿಳಿಯುತ್ತಿದೆ. ಈ ಪ್ರತಿಕೂಲ ಹವಾಮಾನದಿಂದಾಗಿ ಕಾಫಿ ಉತ್ಪಾದನೆಯ ಮೇಲೆ ಉಂಟಾಗಿರುವ ದುಷ್ಪರಿಣಾಮದಿಂದಾಗಿ ಇತರೆಡೆಗಳಲ್ಲಿ ಬೇಡಿಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಭಾರತವೂ ಸೇರಿದಂತೆ ಹಲವು ರಾಷ್ಟçದಲ್ಲಿ ಕಾಫಿ ಬೆಲೆ ಹೆಚ್ಚಳ ಕಾಣುತ್ತಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
ಒಂದು ಅಂದಾಜಿನ ಪ್ರಕಾರ ಬ್ರೆಜಿಲ್ ರಾಷ್ಟçದಲ್ಲಿ ೫೦ ಮಿಲಿಯನ್ ಬ್ಯಾಗ್ ಕಾಫಿಯ ಪೈಕಿ ೩೫ ಸಾವಿರ ಮಿಲಿಯನ್ ಬ್ಯಾಗ್ ಅರೆಬಿಕಾ ಹಾಗೂ ೧೫ ಸಾವಿರ ಮಿಲಿಯ ಬ್ಯಾಗ್ ರೋಬಸ್ಟಾ (ಅಲ್ಲಿ ಕರೆಯಲ್ಪಡುವುದು ಕಾನಿಲಾನ್) ಉತ್ಪಾದಿಸಲ್ಪಡುತ್ತದೆ.
ಪ್ರಸ್ತುತ ಪರಿಸ್ಥಿತಿಯೂ ಸೇರಿದಂತೆ ಮುಂದಿನ ವರ್ಷವೂ ಇಲ್ಲಿ ಕಾಫಿ ಉತ್ಪಾದನೆ ಕುಂಠಿತವಾಗಲಿದೆ ಎಂದು ಅಂದಾಜಿಸಲಾಗಿದೆ. ಹಲವು ರಾಷ್ಟçಗಳ ಪರಿಣಿತರು ಬ್ರೆಜಿಲ್‌ನಲ್ಲಿನ ಪರಿಸ್ಥಿತಿಯನ್ನು ಅವಲೋಕಿಸುತ್ತಿದ್ದಾರೆ ಎನ್ನಲಾಗಿದೆ. ಈ ಕಾರಣದಿಂದಾಗಿ ಕೆಲವು ದಿನಗಳಿಂದ ದಿಢೀರನೆ ಕಾಫಿ ಬೆಲೆ ತುಸು (ಮೊದಲ ಪುಟದಿಂದ) ಬ್ರೆಜಿಲ್ ವಿಶ್ವದ ಕಾಫಿ ಉತ್ಪಾದನೆಯಲ್ಲಿ ಶೇ. ೫೦ಕ್ಕೂ ಅಧಿಕ ಪ್ರಮಾಣವನ್ನು ಬೆಳೆಯುವ ರಾಷ್ಟçವಾಗಿದೆ. ಇಲ್ಲಿ ಈ ಬಾರಿ ಭೀಕರ ಬರಗಾಲ ಎದುರಾಗಿದೆ. ಈ ರಾಷ್ಟçದಲ್ಲಿ ಮರ ಗಿಡಗಳ ನೆರಳಿನ ಸಹಾಯವಿಲ್ಲ. ಬದಲಿಗೆ ಎಲ್ಲವೂ ಬಯಲು ಪ್ರದೇಶದ ಮಾದರಿ ಇದೆ. ತೀವ್ರ ಬಿಸಿಲಿನ ಪರಿತಾಪದಿಂದಾಗಿ ಬ್ರೆಜಿಲ್‌ನಲ್ಲಿ ಕಾಫಿ ಗಿಡಗಳು ಒಣಗಿ ಕರಕಲಾಗುತ್ತಿದೆ ಎಂದು ತಿಳಿದುಬಂದಿದೆ. ಪ್ರಸ್ತುತ ಅಲ್ಲಿ ಕಾಫಿಯ ‘ಸೀಸನ್’ ಬೇರೆ ಇದೇ ಸಂದರ್ಭದಲ್ಲಿ ಎದುರಾಗಿದೆ. ಇದರೊಂದಿಗೆ ಚಳಿಯ ಸಮಯವೂ ಆಗಿದ್ದು, ಉಷ್ಣಾಂಶವೂ ರಾತ್ರಿವೇಳೆ ೨ರಿಂದ ೩ ಡಿಗ್ರಿಯಷ್ಟು ಕೆಳಗಿಳಿಯುತ್ತಿದೆ. ಈ ಪ್ರತಿಕೂಲ ಹವಾಮಾನದಿಂದಾಗಿ ಕಾಫಿ ಉತ್ಪಾದನೆಯ ಮೇಲೆ ಉಂಟಾಗಿರುವ ದುಷ್ಪರಿಣಾಮದಿಂದಾಗಿ ಇತರೆಡೆಗಳಲ್ಲಿ ಬೇಡಿಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಭಾರತವೂ ಸೇರಿದಂತೆ ಹಲವು ರಾಷ್ಟçದಲ್ಲಿ ಕಾಫಿ ಬೆಲೆ ಹೆಚ್ಚಳ ಕಾಣುತ್ತಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
ಒಂದು ಅಂದಾಜಿನ ಪ್ರಕಾರ ಬ್ರೆಜಿಲ್ ರಾಷ್ಟçದಲ್ಲಿ ೫೦ ಮಿಲಿಯನ್ ಬ್ಯಾಗ್ ಕಾಫಿಯ ಪೈಕಿ ೩೫ ಸಾವಿರ ಮಿಲಿಯನ್ ಬ್ಯಾಗ್ ಅರೆಬಿಕಾ ಹಾಗೂ ೧೫ ಸಾವಿರ ಮಿಲಿಯ ಬ್ಯಾಗ್ ರೋಬಸ್ಟಾ (ಅಲ್ಲಿ ಕರೆಯಲ್ಪಡುವುದು ಕಾನಿಲಾನ್) ಉತ್ಪಾದಿಸಲ್ಪಡುತ್ತದೆ.
ಪ್ರಸ್ತುತ ಪರಿಸ್ಥಿತಿಯೂ ಸೇರಿದಂತೆ ಮುಂದಿನ ವರ್ಷವೂ ಇಲ್ಲಿ ಕಾಫಿ ಉತ್ಪಾದನೆ ಕುಂಠಿತವಾಗಲಿದೆ ಎಂದು ಅಂದಾಜಿಸಲಾಗಿದೆ. ಹಲವು ರಾಷ್ಟçಗಳ ಪರಿಣಿತರು ಬ್ರೆಜಿಲ್‌ನಲ್ಲಿನ ಪರಿಸ್ಥಿತಿಯನ್ನು ಅವಲೋಕಿಸುತ್ತಿದ್ದಾರೆ ಎನ್ನಲಾಗಿದೆ. ಈ ಕಾರಣದಿಂದಾಗಿ ಕೆಲವು ದಿನಗಳಿಂದ ದಿಢೀರನೆ ಕಾಫಿ ಬೆಲೆ ತುಸು