ಮಡಿಕೇರಿ, ಜು. ೯: ಕೊಡಗು ಜಿಲ್ಲೆ ಸೇರಿದಂತೆ ಮಲೆನಾಡು ಭಾಗಗಳಲ್ಲಿ ಮುಂಗಾರು ಮಳೆ ಹೆಚ್ಚಾಗುವ ಕುರಿತು ಭಾರತೀಯ ಹವಾಮಾನ ಇಲಾಖೆಯ ಮಾಹಿತಿ ತಿಳಿಸಿದೆ. ಇದರಂತೆ ಜಿಲ್ಲೆಯಲ್ಲಿ ಸಾಧಾರಣದಿಂದ ಭಾರಿ ಮಳೆಯಾಗುವ ಸಂಭವ ಇರುವುದಾಗಿ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ ತಿಳಿಸಿದ್ದು, ಸಾರ್ವಜನಿಕರು ಎಚ್ಚರದಿಂದಿರುವAತೆ ಸೂಚಿಸಿದರು. ತಾ. ೧೦ರ ಬೆಳಿಗ್ಗೆ ೮.೩೦ರ ತನಕ ಆರೆಂಜ್ ಅಲರ್ಟ್ ಮತ್ತು ತಾ. ೧೧ರ ಬೆಳಿಗ್ಗೆ ೮.೩೦ರಿಂದ ತಾ. ೧೩ರ ಬೆಳಿಗ್ಗೆ ೮.೩೦ರವರೆಗೆ ಜಿಲ್ಲೆಯಲ್ಲಿ ರೆಡ್ ಅಲರ್ಟ್ ಘೋಷಣೆ ಮಾಡಲಾಗಿದೆ.ಕೊಂಡಿದ್ದಾರೆ. ಭತ್ತದ ನಾಟಿಗಾಗಿ ಸಸಿ ಮಡಿಗಳು ಸಿದ್ಧವಾಗಿವೆ. ವಾಡಿಕೆಯಂತೆ ಮಳೆಯಾಗಿದ್ದರೂ ನದಿ ತೊರೆಗಳಲ್ಲಿ ನೀರಿನ ಪ್ರಮಾಣ ಕಡಿಮೆಯಾಗಿದೆ. ತ್ರಿವೇಣಿ ಸಂಗಮದಲ್ಲೂ ನೀರಿನ ಪ್ರಮಾಣ ಇಳಿಕೆಗೊಂಡಿದೆ. ಒಮ್ಮೆಗೆ ಮಳೆ ಸುರಿದು ಇದೀಗ ಮಳೆ ಕೈಕೊಟ್ಟಿರುವುದರಿಂದ ಮಾಮೂಲಿ ಜಲಮೂಲಗಳು ಬತ್ತಿಹೋಗಿವೆ. ಹಿಂದಿನ ವರ್ಷಗಳಲ್ಲಿ ಜುಲೈ ಮತ್ತು ಆಗಸ್ಟ್ ತಿಂಗಳಿನಲ್ಲಿ ಧಾರಾಕಾರ ಮಳೆಯಾಗಿದ್ದು ಆ ಕಹಿನೆನಪಿನ ಅನುಭವದೊಂದಿಗೆ ರೈತರು ಹೆದರಿಕೆಯೊಂದಿಗೆ ಕೃಷಿ ಕಾರ್ಯದಲ್ಲಿ ತೊಡಗಿದ್ದಾರೆ. ಭಾಗಮಂಡಲ ವ್ಯಾಪ್ತಿಯಲ್ಲಿ ಇದುವರೆಗಿನ ಮಳೆಯ ಪ್ರಮಾಣ ಸಮಾಧಾನಕರವಾಗಿದೆ. ಕಳೆದ ವರ್ಷಕ್ಕಿಂತ ಅಧಿಕ ಮಳೆಯೂ ಆಗಿದೆ. ಭತ್ತದ ಕೃಷಿ ಕೆಲಸ ನಿರಾತಂಕವಾಗಿ ನಡೆಯಲಿದೆ ಎಂದು ಕೃಷಿಕ ನಂಜುAಡಪ್ಪ ಅಭಿಪ್ರಾಯಪಟ್ಟರು.

ತಣ್ಣಿಮಾನಿ ಭಾಗಮಂಡಲ ವ್ಯಾಪ್ತಿಯಲ್ಲಿ ನಾಟಿ ಕಾರ್ಯ ಆರಂಭಗೊAಡಿದೆ. ಉಳಿದೆಡೆ ಸಸಿಮಡಿಗಳು ಸಿದ್ದವಾಗುತ್ತಿವೆ. ತಣ್ಣಿಮಾನಿ, ಕೋರಂಗಾಲ, ಅಯ್ಯಂಗೇರಿ ಗ್ರಾಮ ವ್ಯಾಪ್ತಿಯಲ್ಲಿ ಇನ್ನೂ ಹದಿನೈದು ಇಪ್ಪತ್ತೆöÊದು ದಿನಗಳ ನಂತರ ರೈತರು ನಾಟಿ ಕಾರ್ಯ ಕೈಗೊಳ್ಳಲಿದ್ದಾರೆ. ಪ್ರವಾಹದ ಆತಂಕದೊAದಿಗೆ ಮಾನಿಗದ್ದೆಗಳಲ್ಲಿ ನಾಟಿ ಕಾರ್ಯ ಆರಂಭಗೊAಡಿದೆ. ಕಳೆದ ವರ್ಷ ಸಾಕಷ್ಟು ಹಾನಿಯಾಗಿದ್ದರಿಂದ ಬಹಳಷ್ಟು ರೈತರು ನಾಟಿ ಕಾರ್ಯದಿಂದ ದೂರವೇ ಉಳಿದಿದ್ದಾರೆ.

ಕಳೆದ ವರ್ಷ ಈ ಅವಧಿಗೆ ಭಾಗಮಂಡಲ ವ್ಯಾಪ್ತಿಯಲ್ಲಿ ೧೯೬೦ ಮಿ.ಮೀ. ಮಳೆಯಾಗಿತ್ತು. ಈ ವರ್ಷ ಈ ಅವಧಿಗೆ ೨೧೨೬ ಮಿ.ಮೀ. ಮಳೆಯಾಗಿದ್ದು ಕಳೆದ ವರ್ಷಕ್ಕಿಂತ ೧೬೬ ಮಿ.ಮೀ. ಮಳೆ ಹೆಚ್ಚು ಸುರಿದಿದೆ. ಇದುವರೆಗೆ ಒಟ್ಟಾರೆಯಾಗಿ ಈ ವ್ಯಾಪ್ತಿಯಲ್ಲಿ ೭ ಇಂಚು ಹೆಚ್ಚು ಮಳೆ ಸುರಿದಿದೆ.

ಭಾಗಮಂಡಲ ಹೋಬಳಿ ವ್ಯಾಪ್ತಿಯಲ್ಲಿ ೧೮೭೩ ಹೆಕ್ಟೇರ್ ಪ್ರದೇಶದಲ್ಲಿ ಭತ್ತದ ಕೃಷಿ ಮಾಡಲಾಗುತ್ತಿದ್ದು ಇತ್ತಿಚೆಗೆ ೧೨೦೦ ಹೆಕ್ಟೇರ್ ನಷ್ಟು ಭತ್ತದ ಕೃಷಿ ಆಗುತ್ತಿದೆ.ಅಧಿಕ ಇಳುವರಿ ನೀಡುವ ಭತ್ತದ ತಳಿಗಳನ್ನು ರೈತರು ೪೮೦ ಹೆಕ್ಟೇರ್ ಪ್ರದೇಶದಲ್ಲಿ ಬೆಳೆಯುತ್ತಿದ್ದರೆ ಇತರ ಭತ್ತದ ತಳಿಗಳನ್ನು ೭೨೦ ಹೆಕ್ಟೇರ್ ಪ್ರದೇಶದಲ್ಲಿ ಬೆಳೆಯಲಾಗುತ್ತಿದೆ.

-ಸುನಿಲ್ ಕುಯ್ಯಮುಡಿ