ಮಡಿಕೇರಿ, ಜು. ೮: ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯು ಭಾರತದ ಸ್ವಾತಂತ್ರö್ಯ ಅಮೃತ ಮಹೋತ್ಸವದ ಪ್ರಯುಕ್ತ ಕೊಡವರ ಶೌರ್ಯ ಮತ್ತು ಸಾಹಸವನ್ನು ಬಿಂಬಿಸುವ ನೃತ್ಯಗಳಲ್ಲಿ ಯಾವುದಾದರೂ ಒಂದು ಪ್ರಕಾರದಲ್ಲಿ ಚಿತ್ರಕಲಾ ಸ್ವರ್ಧೆಯನ್ನು ಏರ್ಪಡಿಸಲಾಗಿದೆ.

ಉತ್ತಮ ಗುಣಮಟ್ಟದ ಎ೪ ಅಥವಾ ಎ೩ ಅಳತೆಯ ಡ್ರಾಯಿಂಗ್ ಪೇಪರ್‌ನಲ್ಲಿ ಚಿತ್ರ ಬಿಡಿಸಿ ಕಳುಹಿಸಬಹುದು. ಈ ಸ್ಫರ್ಧೆಗೆ ೨ ವಿಭಾಗ ಅಂದರೆ ಪ್ರೌಢಶಾಲೆ ಮಕ್ಕಳು (೫ ರಿಂದ ೧೦ನೇ ತರಗತಿ) (೧ನೇ ವಿಭಾಗ) ಹಾಗೂ ಕಾಲೇಜು ವಿದ್ಯಾರ್ಥಿ(ಪಿ.ಯು.ಸಿ ಯಿಂದ ಸ್ನಾತಕೋತ್ತರ) (೨ನೇ ವಿಭಾಗ) ಗಳು ಈ ಸ್ವರ್ಧೆಯಲ್ಲಿ ಭಾಗವಹಿಸಬಹುದು.

ಕೊಡವರ ಶೌರ್ಯ ಮತ್ತು ಸಾಹಸವನ್ನು ಬಿಂಬಿಸುವ ನೃತ್ಯಗಳಲ್ಲಿ ಯಾವುದಾದರೂ ಒಂದು ಪ್ರಕಾರದ ಚಿತ್ರವನ್ನು ಬಿಡಿಸಿ ಕಳುಹಿಸಿಕೊಡಬೇಕು. ಚಿತ್ರ ಬಿಡಿಸುವವರು ಆಯಿಲ್ ಪೇಸ್ಟಲ್, ಕಲರ್ ಪೆನ್ಸಿಲ್, ಪೋಸ್ಟರ್ ಕಲರ್ ಅಥವಾ ಅಕ್ರಲಿಕ್ ಕಲರ್‌ನಲ್ಲಿ ಬಿಡಿಸಿ ಕಳುಹಿಸಬೇಕು. ಅತ್ಯುತ್ತಮ ಚಿತ್ರಗಳಿಗೆ ಪ್ರಶಸ್ತಿ ಪತ್ರ ಮತ್ತು ಆಕರ್ಷಕ ನಗದು ಬಹುಮಾನವನ್ನು ನೀಡಲಾಗುವುದು.

ಪ್ರತ್ಯೇಕ ಹಾಳೆಯಲ್ಲಿ ತಮ್ಮ ಹೆಸರು, ವಿಳಾಸ ದೂರವಾಣಿ ಸಂಖ್ಯೆ ನಮೂದಿಸಿ ತಾ. ೨೮ ರೊಳಗೆ ಕರ್ನಾಟಕ ಕೂಡವ ಸಾಹಿತ್ಯ ಅಕಾಡೆಮಿ ಕಚೇರಿ, ಸ್ಕೌಟ್ಸ್ ಭವನ ಕಟ್ಟಡ, ಮಡಿಕೇರಿ-೫೭೧೨೦೧ಗೆ ಅಂಚೆಯ ಮೂಲಕ ಅಥವಾ ಖುದ್ದಾಗಿ ಕಳುಹಿಸಿಕೊಡಬಹುದು. ಹೆಚ್ಚಿನ ಮಾಹಿತಿಗೆ ಕಚೇರಿಯ ದೂ. ೦೮೨೭೨-೨೨೯೦೭೪ನ್ನು ಸಂಪರ್ಕಿಸಬಹುದು ಎಂದು ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷೆ ಡಾ. ಅಮ್ಮಾಟಂಡ ಪಾರ್ವತಿ ಅಪ್ಪಯ್ಯ ತಿಳಿಸಿದ್ದಾರೆ.