ಮಡಿಕೇರಿ, ಜು. ೯: ಕಿರುಗೂರು ಗ್ರಾ.ಪಂ. ವತಿಯಿಂದ ಕೋವಿಡ್ ನಿಯಂತ್ರಣಕ್ಕಾಗಿ ಹಗಲಿರುಳು ಶ್ರಮಿಸಿದ ವೈದ್ಯಕೀಯ ಸಿಬ್ಬಂದಿಗಳು, ಆಶಾ, ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಪಂಚಾಯಿತಿ ಸಿಬ್ಬಂದಿಗಳನ್ನು ಗೌರವಿಸಲಾಯಿತು.

ಪಂಚಾಯಿತಿ ಆವರಣದಲ್ಲಿ ನಡೆದ ಸರಳ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಗ್ರಾ.ಪಂ. ಅಧ್ಯಕ್ಷ ಪುತ್ತಮನೆ ಜೀವನ್, ಎಲ್ಲರ ಒಗ್ಗಟ್ಟಿನ ಶ್ರಮದ ಫಲವಾಗಿ ಇಂದು ಕಿರುಗೂರು ಪಂಚಾಯಿತಿ ವ್ಯಾಪ್ತಿಯಲ್ಲಿ ಕೋವಿಡ್ ಸೋಂಕು ನಿಯಂತ್ರಣಕ್ಕೆ ಬಂದಿದೆ ಎಂದು ಹೇಳಿದರು.

ಮತ್ತೂರು ಗ್ರಾಮದಲ್ಲಿ ೫ ಸಕ್ರಿಯ ಪ್ರಕರಣಗಳಿದ್ದು, ಉಳಿದ ಎಲ್ಲಾ ಗ್ರಾಮಗಳು ಕೋವಿಡ್ ಮುಕ್ತವಾಗಿವೆ. ಕಿರುಗೂರು ಕೋವಿಡ್ ಟಾಸ್ಕ್ ಫೋರ್ಸ್ ಸಮಿತಿ ಅಧ್ಯಕ್ಷ ಚೆಪ್ಪುಡಿರ ರಾಕೇಶ್ ದೇವಯ್ಯ ಮಾತನಾಡಿ, ವೈದ್ಯಕೀಯ ಸಿಬ್ಬಂದಿಗಳು, ಆಶಾ, ಅಂಗನವಾಡಿ ಕಾರ್ಯಕರ್ತೆಯರು, ಪಂಚಾಯಿತಿ ಸಿಬ್ಬಂದಿಗಳು ಸೇರಿದಂತೆ ಎಲ್ಲರ ಸಹಕಾರದಿಂದ ಕಿರುಗೂರು ಕೋವಿಡ್ ಮುಕ್ತ ಗ್ರಾಮವಾಗಿ ಪರಿವರ್ತನೆಗೊಂಡಿದೆ ಎಂದು ಹರ್ಷ ವ್ಯಕ್ತಪಡಿಸಿದರು.

ವ್ಯಾಕ್ಸಿನ್ ಪಡೆಯವು ದರಲ್ಲಿಯೂ ಗ್ರಾಮಸ್ಥರು ಉತ್ಸಾಹ ತೋರುತ್ತಿದ್ದು, ಮೊದಲ ಮತ್ತು ಎರಡನೇ ಹಂತದ ವ್ಯಾಕ್ಸಿನ್ ಬೇಡಿಕೆ ಪೂರೈಸಲು ಶಾಸಕ ಕೆ.ಜಿ. ಬೋಪಯ್ಯ ಅವರು ಸಂಪೂರ್ಣ ಸಹಕಾರ ನೀಡಿದ್ದಾರೆ ಎಂದು ಸ್ಮರಿಸಿಕೊಂಡರು.

ಪಂಚಾಯಿತಿ ಸದಸ್ಯರುಗಳಾದ ಕೊಳ್ಳಿಮಾಡ ಕಟ್ಟಿ ಕಾವೇರಪ್ಪ, ಚಿರಿಯಪಂಡ ರೇಖಾ ಕೀರ್ತನ್, ಹೆಚ್.ವಿ. ರಂಗಸ್ವಾಮಿ, ಹೆಚ್.ಎಂ. ಕಾವೇರಮ್ಮ, ಪೆಮ್ಮಂಡ ಸುಮಿತ್ರ, ಸುಮಿತ, ಕಾಕೇರ ರವಿ, ಅಭಿವೃದ್ಧಿ ಅಧಿಕಾರಿ ಕುಪ್ಪಂಡ ಗಯಾ, ಟಾಸ್ಕ್ ಫೋರ್ಸ್ ಸಮಿತಿ ಸದಸ್ಯರುಗಳಾದ ಪಿ.ಎಸ್. ಸುರೇಶ್, ಚಿರಿಯಪಂಡ ಕೀರ್ತನ್ ಮತ್ತಿತರರು ಹಾಜರಿದ್ದು, ಕೋವಿಡ್ ನಿಯಂತ್ರಣಕ್ಕಾಗಿ ಶ್ರಮಿಸಿದವರನ್ನು ಸನ್ಮಾನಿಸಿ ಸೇವೆಯನ್ನು ಶ್ಲಾಘಿಸಿದರು.