ಕುಶಾಲನಗರ, ಜು. ೭: ಕುಶಾಲನಗರ ತಾವರೆಕೆರೆ ಬಫರ್ಜೋನ್ ಒತ್ತುವರಿ ಹಿನ್ನೆಲೆಯಲ್ಲಿ ರಾಜ್ಯ ಉಚ್ಚ ನ್ಯಾಯಾಲಯ ತಾ.೯ ರಂದು ಜಂಟಿ ಸರ್ವೇ ಕಾರ್ಯ ನಡೆಸಿ ವರದಿ ನೀಡುವಂತೆ ಸೂಚಿಸಿ ಆದೇಶ ಹೊರಡಿಸಿದೆ. ಬುಧವಾರ ಪ್ರಕರಣ ನ್ಯಾಯಾಲಯದಲ್ಲಿ ಚರ್ಚೆಗೆ ಬಂದಿದ್ದು, ಕಂದಾಯ, ಕುಡ, ಪಟ್ಟಣ ಪಂಚಾಯಿತಿ ಇಲಾಖೆಗಳು ಮತ್ತು ದೂರುದಾರ ಹೈಕೋರ್ಟ್ ವಕೀಲರಾದ ಅಮೃತೇಶ್ ಸಮ್ಮುಖದಲ್ಲಿ ಜಂಟಿ ಸರ್ವೆ ನಡೆಸಿ ಕ್ರಮಕೈಗೊಳ್ಳಲು ಆದೇಶಿಸಿದೆ.