ಮಡಿಕೇರಿ, ಜು. ೭: ಮಾನಸಿಕ ಅಸ್ವಸ್ಥನಂತೆ ಮಡಿಕೇರಿ ನಗರದಲ್ಲಿ ತಿರುಗಾಡುತ್ತಿದ್ದ ಅಪರಿಚಿತ ವ್ಯಕ್ತಿಯೋರ್ವರು ಇಂದು ಸಾವನ್ನಪ್ಪಿದ್ದಾರೆ.
ಕಾಲೇಜು ರಸ್ತೆಯಿಂದ ಕಾವೇರಿ ಹಾಲ್ ಬಳಿ ಮಾರುಕಟ್ಟೆ ಕಡೆಗೆ ತೆರಳುವ ರಸ್ತೆ ಬದಿಯ ಕಟ್ಟಡವೊಂದರ ಎದುರು ತಂಗುತ್ತಿದ್ದ ಮಲಯಾಳಂ ಭಾಷೆ ಮಾತನಾಡುತ್ತಿದ್ದ ವ್ಯಕ್ತಿಯನ್ನು ಮಳೆ ಆರಂಭವಾದಾಗ ಪೊಲೀಸರು ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಅಲ್ಲಿಂದ ತಪ್ಪಿಸಿಕೊಂಡು ಬಂದಿದ್ದ ವ್ಯಕ್ತಿ ಮತ್ತೆ ನಗರದಲ್ಲಿ ತಿರುಗಾಡಿಕೊಂಡಿದ್ದು, ಇಂದು ಅಪ್ಪಚ್ಚು ರೈಸ್ಮಿಲ್ ರಸ್ತೆಯ ಬಳಿ ಇರುವ ಹೊಟೇಲೊಂದರ ಸನಿಹ ಸಾವನ್ನಪ್ಪಿರುವುದು ಗೋಚರಿಸಿದೆ. ಭಿಕ್ಷಾಟನೆ ಮಾಡುತ್ತಿದ್ದ ವ್ಯಕ್ತಿಯ ಜೇಬಿನಲ್ಲಿ ರೂ.೩,೭೪೯ರಷ್ಟು ಹಣ ದೊರಕಿದ್ದು, ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ನಗರ ಪೊಲೀಸರು ಮೃತದೇಹವನ್ನು ಶವಾಗಾರದಲ್ಲಿರಿಸಿದ್ದಾರೆ. ಮೃತ ವ್ಯಕ್ತಿಯ ವಾರಸುದಾರರು ಇದ್ದಲ್ಲಿ ಪೊಲೀಸ್ ಠಾಣೆಯನ್ನು ಸಂಪರ್ಕಿಸುವAತೆ ಠಾಣಾಧಿಕಾರಿ ಅಂತಿಮ ಕೋರಿದ್ದಾರೆ.