ಸುಂಟಿಕೊಪ್ಪ, ಜು. ೭: ಕೊಡಗು ಜಿಲ್ಲಾ ಸುನ್ನಿ ಯೋಜನಾ ಸಂಘದ ವತಿಯಿಂದ ಬಜೆಗುಂಡಿ ಮರ್ಹೂಂ ಅಬ್ದರ‍್ರಹ್ಮಾನ್ ಜೆಫ್ರಿ ತಂಙಳ್ ಅವರ ಅನುಸ್ಮರಣೆ ಹಾಗೂ ಖತ್‌ಮುಲ್ ಖುರಾನ್ ಪ್ರಾರ್ಥನೆಯನ್ನು ನಡೆಸಲಾಯಿತು.

ಕೋವಿಡ್-೧೯ರ ಕಾರಣದಿಂದ ಗೂಗಲ್ ಮಿಟ್ ಮೂಲಕ ವಿವಿಧ ಧರ್ಮಗುರುಗಳೊಂದಿಗೆ ಸಭೆಯನ್ನು ಆಯೋಜಿಸಲಾಗಿದ್ದು, ದಿವಂಗತರಾದ ಜೆಫ್ರಿ ತಂಙಳ್ ಅವರ ಆತ್ಮಕ್ಕೆ ಶಾಂತಿಯನ್ನು ಕೋರಲಾಯಿತು. ಅವರು ಶೈಕ್ಷಣಿಕ ಕ್ಷೇತ್ರಕ್ಕೆ ಅಪಾರವಾದ ಕೊಡುಗೆಯನ್ನು ನೀಡಿದ್ದಾರೆ. ಕೇರಳದಿಂದ ಕೊಡಗಿಗೆ ಆಗಮಿಸಿದ ತಂಙಳ್ ಕೊಡಗಿನ ಮುಸಲ್ಮಾನರ ಧಾರ್ಮಿಕ ಉಲಮ ಸಂಘಟನೆಯನ್ನು ಬಲಾಢ್ಯಗೊಳಿಸಿದ್ದರಲ್ಲದೆ. ವಿವಿಧತೆಯಲ್ಲಿ ಏಕತೆಯನ್ನು ಕಂಡವರಾಗಿದ್ದು ಸರಳ ಮತ್ತು ಸ್ನೇಹ ಜೀವಿಯಾಗಿ ಜೀವಿಸಿದ್ದರು ಎಂದು ಸ್ಮರಿಸಲಾಯಿತು.

ಈ ಸಂದರ್ಭ ಸುನ್ನಿ ಯೋಜನಾ ಸಂಘದ ನಾಯಕರಾದ ಎಂ. ಅಬ್ದುಲ್ ರಹೆಮಾನ್ ಮುಸ್ಲಿಯಾರ್, ವೈ.ಎಂ. ಉಮ್ಮರ್ ಫೈಝಿ, ಬಜೆಗುಂಡಿ ಯಾಕೂಬ್ ಮಾತನಾಡಿದರು. ಸಭೆಯ ಅಧ್ಯಕ್ಷತೆಯನ್ನು ಕೊಡಗು ಜಿಲ್ಲಾಧ್ಯಕ್ಷ ಬಶೀರ್ ಹಾಜಿಯವರು ವಹಿಸಿದ್ದರು. ಸಮಸ್ತ ಕೇಂದ್ರ ಮುಶಾವರ ಸದಸ್ಯರಾದ ಎಂ.ಎA. ಅಬ್ಧುಲ್ಲಾ ಫೈಝಿ ಉಸ್ತಾದ್ ಉದ್ಘಾಟಿಸಿದರು. ಕಾರ್ಯಕ್ರಮದ ಮೊದಲಿಗೆ ಸೈಯದ್ ಜುನೈದ್ ಜೆಫ್ರಿ ತಂಙಳ್, ಪ್ರಾರ್ಥನಾ ಸಂಗಮಕ್ಕೆ ಸಮಸ್ತ ಕೇಂದ್ರ ಮುಶಾವರ ಸದಸ್ಯರ ಕೊಡಗು ಜಿಲ್ಲಾ ಸಮಸ್ತ ಖಾಜಿಗಳಾದ ಉಸ್ತಾದ್ ಎಂ.ಎA. ಅಬ್ಧುಲ್ ಫೈಝಿ, ಎಸ್.ವೈ.ಎಸ್. ಕೊಡಗು ಜಿಲ್ಲಾ ಪ್ರಧಾನ ಕಾರ್ಯ ದರ್ಶಿ ಎಂ.ವೈ. ಅಶ್ರಫ್ ಫೈಝಿ, ಅಬ್ಬೂಕ್ಕರ್ ದಾರಿಮಿ ಮತ್ತಿತರರು ಇದ್ದರು.