ಸೋಮವಾರಪೇಟೆ, ಜು. ೬: ಮಂಡ್ಯದ ಉದ್ಯಮಿ ಮಲ್ಲೇಶ್ ಅವರು ಸಮೀಪದ ಹಾನಗಲ್ಲು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಕೊರೊನಾ ಸೋಂಕಿತ ಕುಟುಂಬಗಳು, ಆಶಾ ಹಾಗೂ ಅಂಗನವಾಡಿ ಕಾರ್ಯ ಕರ್ತೆಯರಿಗೆ ಆಹಾರ ಸಾಮಗ್ರಿಯ ಕಿಟ್ಗಳನ್ನು ವಿತರಿಸಿದರು.
ಕೊರೊನಾ ಸೋಂಕು ವ್ಯಾಪಕವಾಗಿ ಹರಡಿದ ಸಂದರ್ಭ ಫ್ರಂಟ್ ಲೈನ್ ವಾರಿಯರ್ಸ್ ಆಗಿ ಸೇವೆ ಸಲ್ಲಿಸಿದ ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರ ಸೇವೆ ಸದಾ ಸ್ಮರಣೀಯ. ಇದರೊಂದಿಗೆ ಕೊರೊನಾ ವಿರುದ್ಧ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವಲ್ಲಿ ಹೆಚ್ಚಿನ ಶ್ರಮ ವಹಿಸಿದ್ದಾರೆ ಎಂದು ಮಂಡ್ಯ ಮಲ್ಲೇಶ್ ಅವರು ಮೆಚ್ಚುಗೆ ವ್ಯಕ್ತಪಡಿಸಿದರು.
ಗ್ರಾ.ಪಂ. ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೊರೊನಾ ಫ್ರಂಟ್ಲೈನ್ ವಾರಿಯರ್ಸ್, ಕಚೇರಿ ಸಿಬ್ಬಂದಿಗಳು ಹಾಗೂ ಸೀಲ್ಡೌನ್ ಆಗಿರುವ ಕುಟುಂಬಗಳು ಸೇರಿದಂತೆ ಒಟ್ಟು ೫೦ ಮಂದಿಗೆ ಆಹಾರ ಸಾಮಗ್ರಿ ಗಳ ಕಿಟ್ಗಳನ್ನು ವಿತರಿಸಲಾಯಿತು.
ಈ ಸಂದರ್ಭ ಗ್ರಾ.ಪಂ. ಅಧ್ಯಕ್ಷೆ ಲಕ್ಷಿö್ಮÃ ಪಾಂಡಿಯನ್, ಸದಸ್ಯರಾದ ಡಿ.ಎಸ್. ರಘು, ಸುದೀಪ್, ಪ್ರಮುಖರಾದ ವೈ.ಎಂ. ನಾಗರಾಜು, ಬಸವರಾಜು, ದಯಾನಂದ್, ಮನು, ಕಿಶೋರ್ಕುಮಾರ್, ಸಂಜಯ್, ವಿಜಯ್ಕುಮಾರ್ ಸೇರಿಂತೆ ಇತರರು ಉಪಸ್ಥಿತರಿದ್ದರು.