ಕೂಡಿಗೆ, ಜು. ೬: ಕೂಡುಮಂಗಳೂರು ಗ್ರಾ.ಪಂ. ವ್ಯಾಪ್ತಿಯ ಸುಂದರನಗರ ಗ್ರಾಮದ ೫೦ಕ್ಕೂ ಹೆಚ್ಚು ಯುವಕರಿಂದ ಶ್ರಮದಾನ ನಡೆಸಲಾಯಿತು.
ಸುಂದರನಗರದ ಅಯ್ಯಪ್ಪ ಸ್ವಾಮಿ ದೇವಾಲಯ ಮತ್ತು ಸಮುದಾಯ ಭವನದಲ್ಲಿ ಯುವಕರು ಶ್ರಮದಾನ ಮಾಡಿದರು. ಯುವಕರ ತಂಡ ಸ್ವಯಂ ಪ್ರೇರಿತವಾಗಿ ಸಾರ್ವಜನಿಕ ಕೆಲಸಗಳಲ್ಲಿ ತೊಡಗಿರುವುದನ್ನು ಕಂಡು ಸ್ಥಳೀಯ ವಾರ್ಡ್ ಸದಸ್ಯ ಷಂಶುದ್ಧೀನ್ ಮತ್ತು ದಿನೇಶ್ ಸಹ ಯುವಕರೊಂದಿಗೆ ಸೇರಿ ಅಯ್ಯಪ್ಪಸ್ವಾಮಿ ದೇವಾಲಯದ ಆವರಣದಲ್ಲಿ ಬೆಳೆದಿದ್ದ ಗಿಡಗಂಟಿಗಳ ಸ್ವಚ್ಛತಾ ಕಾರ್ಯದಲ್ಲಿ ಪಾಲ್ಗೊಂಡರು. ಸುಂದರನಗರ ಯುವಕ ತಂಡದ ೫೦ಕ್ಕೂ ಹೆಚ್ಚು ಯುವಕರು ಸಮುದಾಯ ಭವನದ ಸ್ವಚ್ಛತಾ ಕಾರ್ಯ ಹಾಗೂ ಅಯ್ಯಪ್ಪಸ್ವಾಮಿ ದೇವಾಲಯದಲ್ಲಿ ಬೆಳೆದಿದ್ದ ಗಿಡಗಂಟಿಗಳನ್ನು ಕಡಿದು ಶುಚಿತ್ವಗೊಳಿಸಿದರು. ಈ ಸಂದರ್ಭ ಚಿಕ್ಕತ್ತೂರು ವಾರ್ಡ್ ಸದಸ್ಯ ದಿನೇಶ್ ಭಾಗವಹಿಸಿದ್ದರು.