ಮುಳ್ಳೂರು, ಜು. ೬: ಡಾ.ಶ್ಯಾಮ್ ಪ್ರಸಾದ್ ಮುಖರ್ಜಿ ಅವರ ಜನುಮ ದಿನ ಅಂಗವಾಗಿ ಸೋಮವಾರಪೇಟೆ ಬಿ.ಜೆ.ಪಿ ಮಂಡಲ ಯುವಮೋರ್ಚಾ ವತಿಯಿಂದ ಸಮೀಪದ ಸುಳುಗಳಲೆ ಕಾಲೋನಿಯಲ್ಲಿ ವೃಕ್ಷಾರೋಹಣ ಕಾರ್ಯಕ್ರಮ ನಡೆಯಿತು.
ಶನಿವಾರಸಂತೆ ಬಿ.ಜೆ.ಪಿ ಮಂಡಲ ಅಧ್ಯಕ್ಷ ಚಂದ್ರಶೇಖರ್ ಹೇರೂರು ಅಧ್ಯಕ್ಷತೆಯಲ್ಲಿ ಪಕ್ಷದ ಪ್ರಮುಖರು ಒಟ್ಟುಗೂಡಿ ಸುಳುಗಳಲೆ ಯಲ್ಲಿ ೫೦ ಉಪಯುಕ್ತ ಗಿಡಗಳನ್ನು ನೆಟ್ಟರು.
ಕಾರ್ಯಕ್ರಮದಲ್ಲಿ ಯುವ ಮೋರ್ಚಾ ಜಿಲ್ಲಾಧ್ಯಕ್ಷ ದರ್ಶನ್ ಜೋಯಪ್ಪ, ಮಂಡಲ ಅಧ್ಯಕ್ಷ ಮನುಕುಮಾರ್ ರೈ, ಮಂಡಲ ಕಾರ್ಯದರ್ಶಿಗಳಾದ ಮೋಹಿತ್, ಪದ್ಮನಾಭ್, ಬಿಜೆಪಿ ಪ್ರಮುಖರಾದ ಡಾ. ನವೀನ್, ಸುವಿನ್ ಗಣಪತಿ, ನಿತಿನ್ ದುಂಡಳ್ಳಿ, ನಿಲನ್ ಪೂಣಚ್ಚ, ಮಹೇಶ್ ತಿಮ್ಮಯ್ಯ, ಗೌತಮ್, ನವೀನ್ ಅಜ್ಜಳ್ಳಿ, ಮೋಕ್ಷಿತ್, ಪ್ರಜಾ ಪೂಣಚ್ಚ, ಚರಣ್, ಸತೀಶ್, ದಾಸಂಡ ರಮೇಶ್, ಎಸ್.ಎನ್.ರಘು, ಭುವನೇಶ್ವರಿ ಹರೀಶ್, ಸುನೀಲ್, ರಕ್ಷಿತ್ ಮುಂತಾದವರು ಹಾಜರಿದ್ದರು.