ಕಣಿವೆ, ಜು. ೬: ಮೀಸೆಯಿಂದಾದ ಎಡವಟ್ಟಿಗೆ ಪತ್ನಿ ತನ್ನ ಪತಿಯ ಜೊತೆ ಕೋಪಿಸಿಕೊಂಡು ತವರು ಸೇರಿದ್ದ ಪ್ರಸಂಗ ಇತ್ತೀಚೆಗೆ ಕೂಡಿಗೆಯಲ್ಲಿ ನಡೆದಿದೆ.

ಲಾಕ್ ಡೌನ್ ನಿಂದಾಗಿ ಸೆಲೂನ್‌ಗಳು ಮುಚ್ಚಿದ್ದರಿಂದ ಕೂಡಿಗೆಯ ಪುರುಷನೋರ್ವ ಗಡ್ಡ ಹಾಗೂ ಮೀಸೆಯನ್ನು ಕತ್ತರಿಸದೇ ನಿಜ ಜೀವನದಲ್ಲೂ ಹೀರೋ ಆಗಿದ್ದಾರೆ. ಹುಟ್ಟಿದ ನಾಡನ್ನು ಮರೆಯದೆ ಸಂಕಷ್ಟದ ಸಮಯದಲ್ಲಿ ಸೇವಾ ಕಾರ್ಯದಲ್ಲಿ ತೊಡಗಿಸಿ ಕೊಂಡಿರುವುದು ಶ್ಲಾಘನೀಯ. ಮನರಂಜನ ಮಾಧ್ಯಮ ಅತ್ಯಂತ ಪರಿಣಾಮಕಾರಿಯಾಗಿದ್ದು, ತಮ್ಮ ಸ್ವಂತ ಹಣವನ್ನು ಸಮಾಜಕ್ಕೆ ವ್ಯಯಿಸುತ್ತಿರು ವುದು ಮಾದರಿಯಾಗಿದೆ. ಕೋವಿಡ್ ಹಾಗೆಯೇ ಬಿಟ್ಟುಕೊಂಡಿದ್ದ.

ಮಧ್ಯೆ ಸೆಲೂನ್‌ಗಳು ಕೆಲವೊಮ್ಮೆ ತೆರೆದರೂ ಕೂಡ ಕೊರೊನಾ ಸೋಂಕಿತರಿಗೆ ಹೆದರಿ ಸೆಲೂನ್‌ಗೆ ಹೋಗಲು ಈ ವ್ಯಕ್ತಿ ಹಿಂದೇಟು ಹಾಕಿದ್ದ. ಒಂದು ದಿನ ಕನ್ನಡಿ ಮುಂದೆ ನಿಂತ ಈ ವ್ಯಕ್ತಿ ತನ್ನ ಕುರುಚಲು ಗಡ್ಡ ಹಾಗೂ ಮೀಸೆಗೆ ಕೈ ಹಾಕಿ ನೋಡಿಕೊಳ್ಳುತ್ತಿದ್ದಾಗ ವ್ಯಕ್ತಿ ಏಕೋ ಏನೋ ಗಡ್ಡ ಹಾಗೂ ಮೀಸೆ ತುಂಡರಿಸುವ ಯೋಚನೆ ಮಾಡಿದ. ಯಾವಾಗಲೂ ಶೇವಿಂಗ್ ಮಾಡಿಕೊಳ್ಳದ ಈ ವ್ಯಕ್ತಿ ಶೇವಿಂಗ್ ಸೆಟ್ ತಗೊಂಡು ತಾನೇ ಗಡ್ಡ ಹಾಗೂ ಮೀಸೆಯನ್ನು ಕೆರೆದುಕೊಳ್ಳಲು ಮುಂದಾದ. ಈ ವೇಳೆ ಒಂದು ಬದಿಯ ಮೀಸೆ ಒಂದಷ್ಟು ಬೋಳಾದಿದ್ದಕ್ಕೆ, ಮತ್ತೊಂದು ಬದಿಯ ಮೀಸೆಯನ್ನು ಬೋಳು ಮಾಡಿಕೊಂಡು ಮನೆಯೊಳಗೆ ಹೋಗಿದ್ದೇ ತಡ.

ಮನೆಯೊಳಗಿದ್ದಾಕೆ ಬೋಳು ಗಡ್ಡದ + ತೆಗೆದ ಮೀಸೆಯ ವ್ಯಕ್ತಿಯನ್ನು ನೋಡಿ ಅರೆ ಕ್ಷಣ ಹೌಹಾರಿ, ಗಂಡನ ಜೊತೆ ಒಂದೇ ಸಮನೆ ಜಗಳ ತೆಗೆದು ರಂಪಾಟ ಮಾಡಿದ್ದಾಳೆ. ನಿನ್ನ ಅವತಾರ ನೋಡಿ ಅಕ್ಕ ಪಕ್ಕದ ಜನ ಮೊದಲೇ ಅಣಕಿಸ್ತಾರೆ. ಈಗ ಮೀಸೆ ತೆಗೆದ ಮೇಲಂತೂ ಇನ್ನೂನು ಹೀಯಾಳಿಸ್ತಾರೆ. ನಿನ್ನ ಮೀಸೆ ಇಲ್ಲದ ಆ ಹಾಳು ಮುಖ ನೋಡಿಕೊಂಡು ನಿನ್ನ ಜೊತೆ ನಾನಿರಲ್ಲ ಅಂತಾ ಗಂಟು ಮೂಟೆ ಕಟ್ಟಿಕೊಂಡು ಹೋದಾಕೆ ತಟ್ಟಿದ್ದು ತವರು ಮನೆಯ ಬಾಗಿಲು.

ಈತನಿಗೆ ಮಾಮೂಲಿಯಂತೆ ಮೀಸೆ ಬಂದ ನಂತರ ಮೂರು ತಿಂಗಳ ಬಳಿಕ ಎರಡೂ ಕಡೆಯ ಕುಟುಂಬಸ್ಥರು ಸೇರಿಕೊಂಡು ನ್ಯಾಯ ಪಂಚಾಯಿತಿ ಮಾಡಿದ ಬಳಿಕ ಆಕೆ ಪತಿಯ ಮನೆಯನ್ನು ಸೇರಿದಳು.

ಇದೀಗ ಪತ್ನಿ ಮಾಡಿದ್ದ ಮೀಸೆ ರಾದ್ದಾಂತಕ್ಕೆ ರೋಸಿ ಹೋಗಿದ್ದಾತನಿಗೆ ಸೆಲೂನ್‌ಗೆ ಹೋದರೂ ಕೂಡ ಮೀಸೆ ತೆಗೆಯೋವಾಗ ನಿಜಕ್ಕೂ ಒಂಥರ ಅವ್ಯಕ್ತ ಭಯ ಕಾಡ್ತಾ ಇದೆಯಂತೆ....! - ಮೂರ್ತಿ