ಶನಿವಾರಸಂತೆ, ಜು. ೬: ಲಯನ್ಸ್ ಕ್ಲಬ್ ನೂತನ ಪದಾಧಿಕಾರಿಗಳ ಪದಗ್ರಹಣ, ೨೦೨೧-೨೨ನೇ ಸಾಲಿನ ಹೊಸ ಸದಸ್ಯರ ಸೇರ್ಪಡೆಯ ಕಾರ್ಯಕ್ರಮ ತಾ. ೧೧ರಂದು ೧೦ ಗಂಟೆಗೆ ಲಯನ್ಸ್ ಕ್ಲಬ್‌ನ ಸಂಸ್ಥೆಯ ಸಭಾಂಗಣದಲ್ಲಿ ನಡೆಯಲಿದೆ. ೨೦೨೧-೨೨ನೇ ಸಾಲಿನ ಲಯನ್ಸ್ ಕ್ಲಬ್ ನೂತನ ಅಧ್ಯಕ್ಷರಾಗಿ ಜಿ. ನಾರಾಯಣ ಸ್ವಾಮಿ ಪದಗ್ರಹಣ ಮಾಡಲಿರುವರು. ಈ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಮೈಸೂರಿನ ಜಿಲ್ಲಾ ಸಂಸ್ಥೆಯ ರಾಜ್ಯಪಾಲ ಕೆ. ದೇವೇಗೌಡ, ಪ್ರಾಂತೀಯ ಅಧ್ಯಕ್ಷ ಎನ್. ಜಯಪ್ರಕಾಶ್, ಜಿಲ್ಲಾ ಸಂಯೋಜಕ ಹೆಚ್.ಕೆ. ಪ್ರಸನ್ನ ಹಾಗೂ ಎನ್. ಸುಬ್ರಮಣ್ಯ ಆಗಮಿಸಲಿದ್ದು, ೨೦೨೦-೨೧ನೇ ಸಾಲಿನ ಶನಿವಾರಸಂತೆ ಲಯನ್ಸ್ ಕ್ಲಬ್ ಅಧ್ಯಕ್ಷ ಬಿ.ಸಿ. ಧರ್ಮಪ್ಪ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿರುವರು ಎಂದು ಲಯನ್ಸ್ ಕ್ಲಬ್ ಖಜಾಂಚಿ ಬಿ.ಕೆ. ಚಿಣ್ಣಪ್ಪ ತಿಳಿಸಿದ್ದಾರೆ.