ಮಡಿಕೇರಿ, ಜು. ೬: ಮಡಿಕೇರಿಯ ಮಿನಿ ವಿಧಾನಸೌಧ ಕಾಮಗಾರಿ ತ್ವರಿತವಾಗಿ ಪೂರ್ಣಗೊಳಿಸಲು ಹಾಗೂ ಪೊನ್ನಂಪೇಟೆ ತಾಲೂಕು ಕಚೇರಿಗೆ ಸಿಬ್ಬಂದಿಗಳ ನೇಮಕ ಸಂಬAಧ ಕ್ರಮವಹಿಸಲಾಗುವುದು ಎಂದು ಕಂದಾಯ ಸಚಿವ ಆರ್. ಅಶೋಕ ಭರವಸೆ ನೀಡಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪೊನ್ನಂಪೇಟೆ ತಾಲೂಕು ಈಗಾಗಲೇ ರಚನೆಯಾಗಿದ್ದು, ಜನರ ಬೇಡಿಕೆಯನ್ನು ಈಡೇರಿಸಿದ್ದೇವೆ. ಹಂತಹAತವಾಗಿ ಕ್ರಮಕೈಗೊಳ್ಳುತ್ತೇವೆ. ಎಲ್ಲಾ ರೀತಿಯ ಸೌಕರ್ಯವನ್ನು ಒದಗಿಸುತ್ತೇವೆ ಎಂದು ತಿಳಿಸಿದರು.
ಮಿನಿ ವಿಧಾನಸೌಧ ಕಾಮಗಾರಿಗೆ ಅನುದಾನದ ಬೇಡಿಕೆಯನ್ನು ಶಾಸಕರು ಸಲ್ಲಿಸಿದ್ದಾರೆ. ಯೋಜನೆಗೆ ರೂ. ೫೦ ಲಕ್ಷ ಹಣ ಬಿಡುಗಡೆಗೊಳಿಸಿದ್ದೇವೆ. ಕಾಮಗಾರಿಯನ್ನು ಪೂರ್ಣಗೊಳಿಸಲು ಕ್ರಮಕೈಗೊಳ್ಳುತ್ತೇವೆ ಎಂದು ಮಾಹಿತಿ ನೀಡಿದರು. ಮಿನಿ ವಿಧಾನಸೌಧ ಹಾಗೂ ಪೊನ್ನಂಪೇಟೆ ತಾಲೂಕಿನಲ್ಲಿ ಸಿಬ್ಬಂದಿ ಕೊರತೆ ಬಗ್ಗೆ ‘ಶಕ್ತಿ’ ವರದಿ ಮೂಲಕ ಬೆಳಕು ಚೆಲ್ಲಿತ್ತು.