ಗೋಣಿಕೊಪ್ಪಲು, ಜು.೫: ವಾಣಿಜ್ಯ ನಗರ ಗೋಣಿಕೊಪ್ಪಲುವಿನಲ್ಲಿ ವಾಹನ ಸಂಚಾರದ ಬಗ್ಗೆ ಆಗಾಗ್ಗೆ ಕೇಳಿ ಬರುತ್ತಿರುವ ಅಪಸ್ವರದ ಬಗ್ಗೆ ವೀರಾಜಪೇಟೆ ಡಿ.ವೈ.ಎಸ್.ಪಿ. ಜಯಕುಮರ್ ಸಮ್ಮುಖದಲ್ಲಿ ರೈತ ಸಂಘದ ಮುಖಂಡರ ಸಭೆ ಜರುಗಿತು. ರೈತರ ಕೃಷಿ ಚಟುವಟಿಕೆಗಳಿಗೆ ಅನುಕೂಲವಾಗಲು ವರ್ಕ್ ಶಾಪ್ ನಿರಂತರವಾಗಿ ತೆರೆಯುವಂತೆ, ಬೈಪಾಸ್ ರಸ್ತೆಯನ್ನು ದ್ವಿಮುಖ ಮಾರ್ಗ ಮಾಡುವಂತೆ, ಕೋವಿಡ್ ನಿಯಮ ಉಲ್ಲಂಘನೆ ಮಾಡುವವರ ಮೇಲೆ ಕ್ರಮ ಕೈಗೊಳ್ಳುವಂತೆ, ನಿಯಮ ಮೀರಿ ವಾಹನ ನಿಲುಗಡೆ ಮಾಡುವ ವ್ಯಕ್ತಿಗಳ ಮೇಲೆ ನಿರ್ದಾಕ್ಷಿಣ್ಯವಾಗಿ ದಂಡ ಹಾಕುವಂತೆ ಸೇರಿ ಹಲವು ವಿಚಾರಗಳ ಬಗ್ಗೆ ವ್ಯಾಪಕ ಚರ್ಚೆ ನಡೆಯಿತು. ರೈತ ಮುಖಂಡರ ಮಾತನ್ನು ಆಲಿಸಿದ ಡಿವೈಎಸ್ಪಿ ಜಯಕುಮಾರ್ ಗೋಣಿಕೊಪ್ಪ ಬೈಪಾಸ್ ರಸ್ತೆಯನ್ನು ಇಂದಿನಿAದ ದ್ವಿಮುಖ ಸಂಚಾರಕ್ಕೆ ಅನುಕೂಲ ಕಲ್ಪಿಸಲಾಗುತ್ತದೆ ಎಂದು ತಿಳಿಸಿದರು. ಪೊನ್ನಂಪೇಟೆ ಪೊಲೀಸ್ ಠಾಣೆಯಲ್ಲಿ ರೈತ ಸಂಘದ ಮುಖಂಡರೊAದಿಗೆ ಸಭೆ ನಡೆಯಿತು.

ಕೋವಿಡ್ ಸಂದರ್ಭದಲ್ಲಿ ನಗರಕ್ಕೆ ಹೆಚ್ಚಾಗಿ ವಾಹನಗಳು ಆಗಮಿಸುತ್ತಿರುವ ಕಾರಣದಿಂದ ತಾತ್ಕಾಲಿಕವಾಗಿ ಬೈಪಾಸ್ ರಸ್ತೆಯನ್ನು ಏಕಮುಖ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿತ್ತು ಇದೀಗ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ಈ ಮಾರ್ಗದಲ್ಲಿ ದ್ವಿಮುಖ ಸಂಚಾರಕ್ಕೆ ಅವಕಾಶ ಮಾಡಲಾಗಿದೆ ಎಂದು ಜಯಕುಮಾರ್ ತಿಳಿಸಿದರು.

ದ.ಕೊಡಗಿನ ವಿವಿಧ ಭಾಗದಿಂದ ಗೋಣಿಕೊಪ್ಪಕ್ಕೆ ಕೆಲಸ ನಿಮಿತ್ತ ಕೃಷಿಕರು, ರೈತರು, ಸಾರ್ವಜನಿಕರು ತಮ್ಮ ವಾಹನದಲ್ಲಿ ಆಗಮಿಸುವ ಸಂದರ್ಭ ಪೊನ್ನಂಪೇಟೆ, ಕಾನೂರು ಜಂಕ್ಷನ್‌ನಲ್ಲಿ ಪೋಲಿಸರು ಬ್ಯಾರಿಕೇಡ್ ಇಟ್ಟು ವಾಹನಗಳನ್ನು ತಡೆಯಿಡಿಯುತ್ತಿದ್ದರು.

ಇದರಿಂದಾಗಿ ಸಾರ್ವಜನಿಕರಿಗೆ ಅನುಕೂಲಕ್ಕಿಂತ ಅನಾನುಕೂಲವೇ ಜಾಸ್ತಿ ಆಗಿದೆ. ಈ ಬಗ್ಗೆ ನಾಗರಿಕರು ರೈತ ಸಂಘದ ಪದಾಧಿಕಾರಿಗಳೊಂದಿಗೆ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.

ಈ ಬಗ್ಗೆ ಕ್ರಮ ಕೈಗೊಳ್ಳಲು ರೈತ ಸಂಘದ ಜಿಲ್ಲಾಧ್ಯರಾದ ಕಾಡ್ಯಮಾಡ ಮನುಸೋಮಯ್ಯ ಡಿವೈಎಸ್ಪಿ ಜಯಕುಮಾರ್ ಗಮನ ಸೆಳೆದರು. ಇವರ ಮಾತಿಗೆ ಉತ್ತರಿಸಿದ ಡಿವೈಎಸ್ಪಿ, ವಾಹನ ದಟ್ಟಣೆ ನಿಯಂತ್ರಣ ಮಾಡಲು ಈ ರೀತಿಯಲ್ಲಿ ಕ್ರಮ ಕೈಗೊಳ್ಳಲಾಗಿತ್ತು.ಇಂದಿನಿAದ ಎಲ್ಲಾ ಬ್ಯಾರಿಕೇಡ್ ತೆರವುಗೊಳಿಸಿಲಾಗುವುದು, ನಾಗರಿಕರ ಅನುಕೂಲಕ್ಕಾಗಿ ಪೊಲೀಸ್ ಇಲಾಖೆ ಸದಾ ಸನ್ನದ್ಧವಾಗಿವೆ. ಕಾನೂನನ್ನು ಪಾಲಿಸುವ ಮೂಲಕ ಇಲಾಖೆಯೊಂದಿಗೆ ಸಹಕರಿಸುವಂತೆ ತಿಳಿಸಿದರು.

ಈ ವೇಳೆ ಮಾತನಾಡಿದ ರೈತ ಸಂಘದ ಜಿಲ್ಲಾ ಸಂಚಾಲಕ ಪುಚ್ಚಿಮಾಡ ಸುಭಾಷ್ ಸುಬ್ಬಯ್ಯ, ಟ್ರಾಫಿಕ್ ವ್ಯವಸ್ಥೆಯಲ್ಲಿ ನಿಯಮ ಉಲ್ಲಂಘಿಸುವ ಚಾಲಕರಿಗೆ ದಂಡ ವಿಧಿಸಲು ಪೊಲೀಸರು ಹಿಂದೇಟು ಹಾಕಬಾರದು, ಟ್ರಾಫಿಕ್ ವ್ಯವಸ್ಥೆ ಹತೋಟಿಗೆ ತರಲು ಇದೊಂದೇ ಮಾರ್ಗ ಈ ನಿಟ್ಟಿನಲ್ಲಿ ಇಲಾಖೆ ಕ್ರಮ ಕೈಗೊಳ್ಳಲು ಸಲಹೆ ನೀಡಿದರು.

ಬೈಪಾಸ್ ರಸ್ತೆಯಲ್ಲಿ ಒಂದೇ ಬದಿಯಲ್ಲಿ ಪಾರ್ಕಿಂಗ್ ಮಾಡಲು,ಸಲಹೆ ವ್ಯಕ್ತವಾಯಿತು.

ರಸ್ತೆ ಬದಿಯಲ್ಲಿ ವರ್ಕ್ಶಾಪ್ ಇಟ್ಟುಕೊಂಡು, ರಿಪೇರಿ ವಾಹನಗಳನ್ನು ರಸ್ತೆಯಲ್ಲಿ ನಿಲ್ಲಿಸಿಕೊಂಡು ಕೆಲಸ ನಿರ್ವಹಿಸುತ್ತಿರುವ ವರ್ಕ್ ಶಾಪ್, ಟವರ್ ಶಾಪ್ ಮಾಲೀಕರಿಗೆ ದಂಡ ವಿಧಿಸುವಂತೆ ಸಲಹೆ ನೀಡಲಾಯಿತು.

ಈ ವೇಳೆ ಬೈಪಾಸ್ ರಸ್ತೆ ತೋಡು ಒತ್ತುವರಿ, ಕೋವಿಡ್ ನಿಯಮ ಮೀರಿ ಹೊರ ಜಿಲ್ಲೆಯಿಂದ ಆಗಮಿಸುವ ಜನರು,ಕಾರ್ಮಿಕರ ಬಗ್ಗೆ ಪ್ರಸ್ತಾಪ ವ್ಯಕ್ತವಾಯಿತು. ವರ್ಕ್ಶಾಪ್ ಬೆಳಿಗ್ಗೆ ೬ ಗಂಟೆಗೆ ತೆರೆಯಲು ಸೂಚಿಸಲಾಗುವುದು ಎಂದು ಡಿವೈಎಸ್ಪಿ ತಿಳಿಸಿದರು.

ವಾಹನಗಳ ಸುಗಮ ಸಂಚಾರದ ಬಗ್ಗೆ ಪೋಲಿಸ್ ಇಲಾಖೆ ಸದಾ ಮುಕ್ತವಾಗಿದೆ. ಜನರಿಗೆ ಉಪಯೋಗ ವಾಗುವ ಯಾವುದೇ ಸಲಹೆ ನಾಗರಿಕರು ನೀಡಬಹುದಾಗಿದೆ ಎಂದರು. ಪೊನ್ನಂಪೇಟೆ ಪೋಲಿಸ್ ಠಾಣೆಯ ಎಸ್.ಐ.ಕುಮಾರ್, ರೈತ ಸಂಘದ ಜಿಲ್ಲಾ ಪ್ರ.ಕಾರ್ಯದರ್ಶಿ ಚೆಟ್ರುಮಾಡ ಸುಜಯ್ ಬೋಪಯ್ಯ, ಜಿಲ್ಲಾ ಸಂಚಾಲಕ ಪುಚ್ಚಿಮಾಡ ಸುಭಾಷ್ ಸುಬ್ಬಯ್ಯ, ಕಾರ್ಯದರ್ಶಿ ಅಜ್ಜಮಾಡ ಚಂಗಪ್ಪ, ತಾಲೂಕು ಅಧ್ಯಕ್ಷ ಬಾಚಮಾಡ ಭವಿ ಕುಮಾರ್, ವಿವಿಧ ಹೋಬಳಿ ಅಧ್ಯಕ್ಷರಾದ ಆಲೆಮಾಡ ಮಂಜುನಾಥ್, ಚಂಗುಲAಡ ಸೂರಜ್, ಚಟ್ಟಂಗಡ ಕಂಬ ಕಾರ್ಯಪ್ಪ, ಮೇಚಂಡ ಕಿಶ ಮಾಚಯ್ಯ, ಮುಖಂಡರಾದ ಅಪ್ಪಚ್ಚಂಗಡ ಮೋಟಯ್ಯ, ತೀತರಮಾಡ ರಾಜ, ಚೊಟ್ಟೆಕಾಳಪಂಡ ಮನು, ಪುಚ್ಚಿಮಾಡ ರಾಯ್ ಮಾದಪ್ಪ, ಮೀದೇರಿರ ಕವಿತರಾಮ್, ಎಸ್.ಎಸ್.ಸುರೇಶ್, ಅಶೋಕ್, ಮತ್ತಿತರರು ಉಪಸ್ಥಿತರಿದ್ದರು.

- ಹೆಚ್.ಕೆ.ಜಗದೀಶ್