ಜು. ೫: ಮಳೆ ಪ್ರಾರಂಭವಾದೊಡನೆ ಬೆಟ್ಟ ಗುಡುಗಳ ನಡುವೆ ಹರಿಯುವ ನೀರಿಗೆ ಅಡ್ಡಲಾಗಿ ಸಣ್ಣಗಿನ ಯಂತ್ರ ವೊಂದನ್ನು ಇಟ್ಟು ಜಲಶಕ್ತಿಯಿಂದ ವಿದ್ಯುತ್ ಉತ್ಪಾದಿಸುವ ಗ್ರಾಮೀಣ ಮಟ್ಟದ ಕಿರು ವಿದ್ಯುತ್ ಘಟಕ ಆರಂಭಿಸಲು ಜಿಲ್ಲೆಯಲ್ಲಿ ಅವಕಾಶ ನೀಡಲಾಗಿದೆ.
ವಿದ್ಯುತ್ ಕೊರತೆ ನೀಗಿಸಲು ಈ ಯೋಜನೆಯಿಂದ ಸಾಧ್ಯವಿದೆ ಯಾದರೂ ಯೋಜನೆಗೆ ಸರಕಾರ ದಿಂದ ಲಭಿಸುತ್ತಿದ್ದ ಸಹಾಯಧನ ಸ್ಥಗಿತಗೊಂಡಿರುವುದರಿAದ ಮಧ್ಯಮ ವರ್ಗದ ಜನತೆಗೆ ಇದು ಫಲದಾಯಕವಾಗುವಂತೆ ಕಾಣುತ್ತಿಲ್ಲ.
ವಿದ್ಯುತ್ ಪೂರೈಕೆಯ ಅಭಾವ ನೀಗಿಸಲು ಸೂರ್ಯನಿಂದ ಪಡೆಯಬಹುದಾದ ಸೌರಶಕ್ತಿ, ಗಾಳಿಯಿಂದ ಪಡೆಯಬಹುದಾದ ಪವನಶಕ್ತಿ ಹಾಗೂ ಜಲಮೂಲ ದಿಂದ ಪಡೆಯಬಹುದಾದ ಜಲವಿದ್ಯುತ್ ಯೋಜನೆಗೆ ಸರಕಾರ ಹಲವು ಯೋಜನೆಗಳನ್ನು ಜಾರಿ ಗೊಳಿಸುತ್ತಾ ಬಂದಿದೆ. ಇದರಂತೆ ಕಳೆದ ಹಲವು ವರ್ಷಗಳ ಹಿಂದೆಯೇ ಇದಕ್ಕೆ ಅನುಮತಿಸಲಾಗಿದೆ.
ಮಳೆ ಹೆಚ್ಚಾಗಿ ಬೀಳುವ ಕೊಡಗಿನ ಪರಿಸರದಲ್ಲಿ, ಬೆಟ್ಟ ಗುಡ್ಡಗಳು ಹೆಚ್ಚಾಗಿ ಕಂಡುಬರುವ ಹಲವು ಗ್ರಾಮಗಳಲ್ಲಿ ತೋಡುಗಳು, ತೊರೆಗಳು ಉಕ್ಕಿ ಹರಿಯುವುದು ಸಾಮಾನ್ಯ. ಮಳೆಗಾಲ ಬಂತೆAದರೆ ಸಾಕು, ಮಳೆ-ಗಾಳಿಯ ರಭಸಕ್ಕೆ ಮರಗಳುರುಳಿ ವಿದ್ಯುತ್ ಸಂಪರ್ಕ ಸಂಪೂರ್ಣ ಕಡಿತಗೊಂಡು ತಿಂಗಳಾನುಗಟ್ಟಲೆ ಇಲ್ಲಿನವರು ಕಗ್ಗತ್ತಲಿನಿಂದ ಬದುಕು ಸಾಗಿಸುತ್ತಾರೆ.
ಮಳೆಗಾಲದಲ್ಲಿ ವಿದ್ಯುತ್ ಸಮಸ್ಯೆಯನ್ನು ಸರಿಪಡಿಸಲು ಪಿಕೊಹೈಡ್ರೋ (೫ ಕಿಲೋವಾಟ್ ಗಿಂತ ಕಡಿಮೆ ಸಾಮರ್ಥ್ಯ) ಹಾಗೂ ಪ್ರಕೃತಿ ಹೈಡ್ರೋ ಎಂಬ ಕಿರು ಜಲವಿದ್ಯುತ್ ಘಟಕಗಳನ್ನು ಸ್ಥಾಪಿಸುವ ಎರಡು ಖಾಸಗಿ ಕಂಪೆನಿಗಳು ಕಳೆದ ೧೫ ವರ್ಷಗಳಿಂದ ಕೊಡಗಿನ ನಾನಾಕಡೆ ಕಿರು ಜಲವಿದ್ಯುತ್ ಘಟಕಗಳನ್ನು ಸ್ಥಾಪಿಸಿ ವಿದ್ಯುತ್ ಸಮಸ್ಯೆಗಳಿಗೆ ಪರಿಹಾರ ಒದಗಿಸುತ್ತಾ ಬರುತ್ತಿವೆ. ನಿತ್ಯವೂ ನೀರಿನ ಹರಿವು ಇರುವೆಡೆ ಈ ಕಿರುವಿದ್ಯುತ್ ಘಟಕ ೩೬೫ ದಿನಗಳೂ ಚಾಲನೆಯಲ್ಲಿದ್ದು, ವಿದ್ಯುತ್ ಉತ್ಪಾದನೆಗೆ ಸಹಕರಿಸುತ್ತಿವೆ. ಮತ್ತೆ ಕೆಲವೆಡೆ ಮಳೆಗಾಲ ಕಳೆದು ೩ ತಿಂಗಳಿAದ ಸುಮಾರು ೮ ತಿಂಗಳವರೆಗೆ ತಮಗೆ ಬೇಕಾದಷ್ಟು ವಿದ್ಯುತ್ ಪಡೆಯುವ ಮೂಲಕ ಫಲಕಾರಿ ಯಾಗಿದೆ ಎಂದು ಪಿಕೊ ಹೈಡ್ರೋ ಪ್ರೋಜೆಕ್ಟ್ನ ಏಜೆಂಟ್ ಹಾಗೂ ಮೇಲ್ವಿಚಾರಕ ಗಣಪತಿ ಹೇಳುತ್ತಾರೆ.
ಚೆಟ್ಟಳ್ಳಿ ಸಮೀಪ ಈರಳೆವಳಮುಡಿ ಗ್ರಾಮದ ತಮ್ಮ ಜಲದರ್ಶಿನಿ ತೋಟದ ಮನೆಯಲ್ಲಿ ಪ್ರತೀ ವರ್ಷ ಮಳೆಗಾಲ ಬಂದರೆ ಸಾಕು ಮಳೆ-ಗಾಳಿಯಿಂದಾಗಿ ಮರಬಿದ್ದು, ಬೆಟ್ಟಜರಿದು ತಿಂಗಳಾನುಗಟ್ಟಲೆ ವಿದ್ಯುತ್ ಸಂಪರ್ಕ ಕಡಿತ ಗೊಳ್ಳುವುದು ಸಾಮಾನ್ಯ. ಕಳೆದ ಮೂರು ವರ್ಷಗಳ ಹಿಂದೆ ಮನೆಯ ಹಿಂಬದಿ ಯಲ್ಲಿ ಮಳೆಗಾಲದ ಸಮಯದಲ್ಲಿ ನೀರಿನ ಜರಿ ಹರಿಯುತ್ತಿದ್ದು, ಕಿರುಜಲ ವಿದ್ಯುತ್ ಘಟಕದ ಪ್ರಯೋಜನದ ಬಗ್ಗೆ ತಿಳಿದೆ. ಪಿಕೊಹೈಡ್ರೋ ಎಂಬ ಖಾಸಗಿ ಕಂಪೆನಿ ಜೊತೆ ಮಾತನಾಡಿ ಕಿರುಜಲ ವಿದ್ಯುತ್ ಘಟಕವನ್ನು ಕಲ್ಪಿಸಲು ಅರ್ಜಿ ಸಲ್ಲಿಸಿದೆ. ಸುಮಾರು ೧.೫೦ ಲಕ್ಷ ಕಂಪೆನಿಗೆ ಪಾವತಿಸಿ ಕಿರು ಜಲವಿದ್ಯುತ್ ಘಟಕವನ್ನು ಸ್ಥಾಪಿಸಿದೆ. ನಂತರ ಸರಕಾರದಿಂದ ಸಬ್ಸಿಡಿ ಹಣ ಪಡೆದೆ. ಬಹಳ ಪ್ರಯೋಜನ ವಾಯಿತೆಂದು ಚೀಯಂಡ ತೇಜಸ್ ಪಾಪಯ್ಯ ಪತ್ರಿಕೆಯೊಂದಿಗೆ ಮಾಹಿತಿ ಹಂಚಿಕೊAಡಿದ್ದಾರೆ.
ಆರ್ಥಿಕವಾಗಿ ಹಿಂದುಳಿದವರಿಗೆ ಕೈಗೆಟುಕದ ಯೋಜನೆ
ಒಂದು ಬಾರಿ ಲಕ್ಷಗಟ್ಟಲೆ ಹಣ ಪಾವತಿಸಿ ಕಿರು ಜಲವಿದ್ಯುತ್ ಘಟಕ ವನ್ನು ಸ್ಥಾಪಿಸಿದರೆ ನಿರಂತರವಾಗಿ ವಿದ್ಯುತ್ ಪಡೆಯುವ ಉದ್ದೇಶವೇ ಈ ಯೋಜನೆ ಯದ್ದಾಗಿದೆ. ಈ ಯೋಜನೆ ಕೊಡಗಿಗೆ ಭಾರೀ ಫಲಕಾರಿ ಯಾದರೂ ಆರ್ಥಿಕವಾಗಿ ಹಿಂದುಳಿ ದವರಿಗೆ ಹೆಚ್ಚಿನ ಬೆಲೆ ನೀಡಿ ಈ ಕಿರು ವಿದ್ಯುತ್ ಯೋಜನೆಯನ್ನು ಅಳವಡಿಸಿ ಕೊಳ್ಳಲು ಸಾಧ್ಯವಿಲ್ಲವಾದ್ದ ರಿಂದಲೇ ಈ ಯೋಜನೆ ಅಷ್ಟೊಂದು ಮಟ್ಟಿಗೆ ಫಲಕಾರಿಯಾಗಲಿಲ್ಲ. ಆದರೂ ಎರಡು ಖಾಸಗಿ ಕಂಪೆನಿಗಳು ಒಟ್ಟು ಸೇರಿ ೨೫೦ ರಿಂದ ೩೦೦ ಕಿರು ಜಲವಿದ್ಯುತ್ ಘಟಕಗಳನ್ನು ಕೊಡಗಿನ ಹಲವೆಡೆ ಅಳವಡಿಸಿದೆ. ಯಂತ್ರದ ಅಳವಡಿಕೆಯ ಪೂರ್ತಿ ಖರ್ಚುವೆಚ್ಚ ಸೇರಿ ಒಂದೂವರೆ ಲಕ್ಷಕ್ಕೂ ಅಧಿಕವಾಗುವ ಕಾರಣ ಆರ್ಥಿಕವಾಗಿ ಹಿಂದುಳಿ ದವರಿಗೆ ಈ ಯೋಜನೆ ಕನಸಿನ ಮಾತು. ಕಳೆದೆರಡು ವರ್ಷಗಳಿಂದ ಸಬ್ಸಿಡಿ ಹಣ ಕೂಡ ದೊರೆಯದ ಕಾರಣ ಯೋಜನೆ ಅನುಷ್ಠಾನಕ್ಕೆ ಇನ್ನಷ್ಟೂ ಪೆಟ್ಟು ಬಿದ್ದಿದೆ.
ಕೆಆರ್ಇಡಿಎಲ್ನಿಂದ ಯೋಜನೆಗೆ ಸಹಕಾರ
‘ಕರ್ನಾಟಕ ರಿನೀವೇಬಲ್ ಎನರ್ಜಿ ಡೆವಲಪ್ಮೆಂಟ್ ಲಿಮಿಟೆಡ್’ ಎಂಬ ಸರಕಾರದ ಅಂಗಸAಸ್ಥೆ ಸೂರ್ಯ, ಗಾಳಿ ಹಾಗೂ ಜಲಮೂಲಗಳಿಂದÀ ವಿದ್ಯುತ್ ಯೋಜನೆ ಕೈಗೊಳ್ಳಲು ಹಲವು ಯೋಜನೆಗಳನ್ನು ರೂಪಿಸುತ್ತಾ ಬರುತ್ತಿದೆ. ಹಲವು ವರ್ಷಗಳ ಹಿಂದೆ ದೊಡ್ಡದಾದ ಟರ್ಬೈನ್ಗಳನ್ನು ಬಳಸಿ ನೀರಿನ ಶಕ್ತಿಯಿಂದ ವಿದ್ಯುತ್ಶಕ್ತಿಯನ್ನು ಪಡೆಯುತ್ತಿದ್ದದ್ದು, ಈಗ ಅತೀ ಸಣ್ಣಗಿನ ಹೊಸ ತಂತ್ರಜ್ಞಾನಗಳ ಬಳಕೆಯಿಂದ ಕಿರು ಜಲವಿದ್ಯುತ್ ಘಟಕವನ್ನು ಉತ್ಪಾದಿಸಲಾಗುತ್ತಿದೆ. ಹಳ್ಳಿ ಹಳ್ಳಿಗಳಲ್ಲಿ ಈ ಯೋಜನೆ ಗಳನ್ನು ರೂಪಿಸುವ ಮೂಲಕ ವಿದ್ಯುತ್ ಉಳಿತಾಯಕ್ಕೆ ಶ್ರಮಿಸುತ್ತಿದೆ. ಪ್ರಕೃತಿ ಹೈಡ್ರೋ ಹಾಗೂ ಪಿಕೊ ಹೈಡ್ರೋ ಕಂಪೆನಿಗಳಿಗೆ ಕೆಆರ್ಇಡಿಎಲ್ ನಿಂದ ಘಟಕ ಸ್ಥಾಪನೆಗೆ ಅನುಮತಿ ದೊರೆತಿದೆ. ಅರ್ಜಿದಾರರಿಂದಲೇ ಪೂರ್ತಿಹಣ ಪಡೆದು ಸರಕಾರದಿಂದ ಬರುವ ಸಬ್ಸಿಡಿ ಹಣವನ್ನು ಅರ್ಜಿದಾರರ ಖಾತೆಗೆ ನೇರವಾಗಿ ಕಳುಹಿಸಲಾಗುತ್ತದೆ.
ಈ ಕಿರುಜಲ ವಿದ್ಯುತ್ ಘಟಕವನ್ನು ಕೊಡಗಿನಲ್ಲಿ ಕಳೆದ ೧೦ ವರ್ಷಗಳಿಂದ ಬಳಸುತ್ತಿದ್ದವರು ಪೂರ್ಣ ಪ್ರಮಾಣದ ಲಾಭ ಪಡೆಯು ತ್ತಿದ್ದಾರೆ. ಆದರೆ ಕಳೆದ ೨ ವರ್ಷ ಗಳಿಂದ ವಿದ್ಯುತ್ ಘಟಕ ಅನುಷ್ಠಾನಕ್ಕೆ ಸಬ್ಸಿಡಿ ಹಣ ನೀಡದ್ದರಿಂದ ಹೆಚ್ಚಿನ ಹಣ ನೀಡಿ ಕಿರುಜಲ ವಿದ್ಯುತ್ ಘಟಕ ವನ್ನು ಸ್ಥಾಪಿಸಲು ಸಾಧ್ಯವಾಗುತ್ತಿಲ್ಲ.
ಕುಗ್ರಾಮಗಳಿಗೆ ಈ ಯೋಜನೆ ಅನುಷ್ಠಾನಕ್ಕೆ ಸರಕಾರವೇ ಮುಂದಾಗಬೇಕು
ಕೊಡಗಿನ ಬೆಟ್ಟಗುಡ್ಡಗಳ ಪರಿಸರದಲ್ಲಿ ಮಳೆಗಾಲದಲ್ಲಿ ಪ್ರತಿಯೊಂದು ಹಳ್ಳಿಗಳಲ್ಲಿ ನದಿ, ತೊರೆ, ಜರಿಗಳು ಮೇಲುಕ್ಕಿ ಹರಿಯು ತ್ತಿರುತ್ತವೆ. ಇಂತಹ ಹಳ್ಳಿಗಳಿಗೆ ಸರಕಾರದ ಅಂಗ ಸಂಸ್ಥೆಯಾದ ಕರ್ನಾಟಕ ರಿನೀವೇಬಲ್ ಎನರ್ಜಿ ಡೆವೆಲಪ್ ಮೆಂಟ್ ಲಿಮಿಟೆಡ್ ಸರ್ವೆ ನಡೆಸಿ ಕೊಡಗಿನ ಪ್ರತಿಯೊಂದು ಹಳ್ಳಿಗಳಿಗೂ ಸರಕಾರದಿಂದಲೇ ಕಿರು ಜಲವಿದ್ಯುತ್ ಯೋಜನೆಯನ್ನು ಅನುಷ್ಠಾನ ಗೊಳಿಸುವ ಮೂಲಕ ಗ್ರಾಮಗಳ ಅಬಿವೃದ್ಧಿಯ ಜೊತೆಗೆ ನಿರಂತರ ವಿದ್ಯುತ್ ಸಮಸ್ಯೆಯನ್ನು ನೀಗಿಸಬಹುದಾಗಿದೆ. ನಿಮ್ಮಲ್ಲಿ ನೀರಿನ ಮೂಲಗಳಿದ್ದರೆ ಈ ಕಿರು ಜಲ ವಿದ್ಯುತ್ ಘಟಕ ಬಗ್ಗೆ ಹೆಚ್ಚಿನ ಮಾಹಿತಿ ಯನ್ನು ಚೆಟ್ಟಳ್ಳಿ (ಪೊನ್ನತ್ ಮೊಟ್ಟೆ) ಗಣಪತಿಯ ವರನ್ನು ಸಂಪರ್ಕಿಸ ಬಹುದು. ಮೊ. ೯೪೪೯ ೫೭೧೫೯೭.
- ಪುತ್ತರಿರ ಕರುಣ್ ಕಾಳಯ್ಯ