ಮಡಿಕೇರಿ, ಜು. ೫: ಕೊಡಗು ಜಿಲ್ಲೆಯಲ್ಲಿ ವನ್ಯಜೀವಿ-ಮಾನವ ಸಂಘರ್ಷ ಜ್ವಲಂತ ಸಮಸ್ಯೆಗಳ ಪಟ್ಟಿಗೆ ಸೇರಿ ಅದೆಷ್ಟೋ ಸಮಯಗಳು ಕಳೆದಿವೆ. ಜಿಲ್ಲೆಯ ಅಷ್ಟದಿಕ್ಕುಗಳಲ್ಲಿಯೂ ವನ್ಯಜೀವಿ ಉಪಟಳಕ್ಕೆ ಜನ ಕಂಗಾಲಾಗಿದ್ದಾರೆ. ಆನೆ, ಹುಲಿ, ಕಾಡುಹಂದಿ ಹಾವಳಿ ಮಿತಿಮೀರಿದೆ. ರೈಲ್ವೆ ಬ್ಯಾರಿಕೇಡ್, ಕಂದಕ, ಹುಲಿ ಸೆರೆಗೆ ಬೋನ್ ಸೇರಿದಂತೆ ಖುದ್ದು ಅರಣ್ಯ ಇಲಾಖೆ ಹಗಲಿರುಳು ವನ್ಯಜೀವಿ ಹಾವಳಿ ತಡೆಯಲು ಎಷ್ಟೆ ಪ್ರಯತ್ನಿಸಿದರೂ ಜಿಲ್ಲೆಯಲ್ಲಿ ಕಾಡುಪ್ರಾಣಿಗಳ ಹಾವಳಿ ಮಾತ್ರ ನಿಂತಿಲ್ಲ.
ಕಳೆದ ಹಲವು ವರ್ಷಗಳಿಂದ ವನ್ಯಜೀವಿ ಸಂಘರ್ಷ ತಡೆಯಲು ಅರಣ್ಯ ಇಲಾಖೆ ನಾನಾ ಕ್ರಮಗಳನ್ನು ಅನುಸರಿಸುತ್ತಿವೆ. ಅದರೊಂದಿಗೆ ಜಿಲ್ಲೆಯಲ್ಲಿ ವನ್ಯಜೀವಿ ದಾಳಿಯಿಂದ ಮೃತಪಟ್ಟವರಿಗೆ ಹಾಗೂ ಬೆಳೆ ಫಸಲು ನಷ್ಟವಾದರಿಗೆ ಪರಿಹಾರವನ್ನು ಸಮರ್ಪಕವಾಗಿ ತಲುಪಿಸಿದೆ. ಜಿಲ್ಲೆಯ ರೈತರು, ಸಂಘಟನೆಗಳು ಬೆಳೆಹಾನಿಗೆ ಪರಿಹಾರ ಹೆಚ್ಚಿಸಬೇಕು, ಜಾನುವಾರು ಕಳೆದುಕೊಂಡವರಿಗೆ ಹೆಚ್ಚಿನ ಪರಿಹಾರ ನೀಡಬೇಕೆಂದು ಒತ್ತಾಯಿಸಿದ್ದರು. ಪರಿಣಾಮ ಇದೀಗ ಜಾನುವಾರು ಸಾವು ಪ್ರಕರಣಕ್ಕೆ ಸರಕಾರ ಪರಿಹಾರ ಹೆಚ್ಚಿಸಿದೆ.
ವನ್ಯಜೀವಿ ದಾಳಿಯಿಂದ ಮೃತಪಟ್ಟವರಿಗೆ ಹಂತಹAತವಾಗಿ ಒಟ್ಟು ೭.೫೦ ಲಕ್ಷ ಪರಿಹಾರವನ್ನು ಅರಣ್ಯ ಇಲಾಖೆ ನೀಡಲು ಕ್ರಮವಹಿಸಿದೆ. ಜೊತೆಗೆ ದಾಳಿಯಿಂದ ಗಾಯಗೊಂಡವರ ಚಿಕಿತ್ಸೆ ವೆಚ್ಚ, ಜಾನುವಾರು ಕಳೆದುಕೊಂಡವರಿಗೆ ನಿಗದಿತ ಪರಿಹಾರ, ಬೆಳೆ ನಷ್ಟ ಅನುಭವಿಸಿದವರಿಗೆ ಪ್ರತಿ ಕ್ವಿಂಟಾಲ್ಗೆ ಇಂತಿಷ್ಟು ಎಂದು ಹಾಗೂ ಆಸ್ತಿ-ಪಾಸ್ತಿ ನಷ್ಟಕ್ಕೆ ಮಾರ್ಗಸೂಚಿ ಅನ್ವಯ ಪರಿಹಾರ ವಿತರಿಸಲಾಗಿದೆ.
ಪರಿಹಾರದ ವಿವರ
ಮಡಿಕೇರಿ, ವೀರಾಜಪೇಟೆ ಅರಣ್ಯ ವೃತ್ತ, ವೈಲ್ಡ್ ಲೈಫ್, ನಾಗರಹೊಳೆ ರಾಷ್ಟಿçÃಯ ಉದ್ಯಾನವನ ವ್ಯಾಪ್ತಿಗೆ ಇಂತಿಷ್ಟು ಎಂದು ಅನುದಾನವನ್ನು ಅರಣ್ಯ ಇಲಾಖೆ ನೀಡಿದೆ. ಅದನ್ನು ಆಯಾ ಇಲಾಖೆ ಸಾವು-ನೋವು, ಆಸ್ತಿ-ಪಾಸ್ತಿ ನಷ್ಟ, ಬೆಳೆಹಾನಿ ಪ್ರಕರಣಗಳಿಗೆ ಹಂಚಿಕೆ ಮಾಡುತ್ತದೆ. ೨೦೧೮ ರಿಂದ ೨೦೨೧ರ ತನಕ ಒಟ್ಟು ರೂ ೮,೪೯,೯೦,೪೫೮
(ಮೊದಲ ಪುಟದಿಂದ) ಪರಿಹಾರ ವಿತರಣೆ ಮಾಡಲಾಗಿದೆ. ೨೦೧೮-೧೯ನೇ ಸಾಲಿನಲ್ಲಿ ಬಿಡುಗಡೆಯಾದ ಒಟ್ಟು ರೂ. ೨ ಕೋಟಿ ೩೦ ಲಕ್ಷ ಹಣದಲ್ಲಿ ೩೨೮೨ ಬೆಳೆ ಹಾನಿ ಪ್ರಕರಣಕ್ಕೆ ರೂ. ೧,೯೨,೭೪,೦೦೦, ವನ್ಯಜೀವಿ ಸಂಘರ್ಷದಿAದ ಗಾಯಗೊಂಡ ೧೦ ಪ್ರಕರಣಗಳಿಗೆ ಒಟ್ಟು
ರೂ. ೨ ಲಕ್ಷದ ೨೦ ಸಾವಿರ, ಜಾನುವಾರು ಕಳೆದುಕೊಂಡ ೫೬ ಪ್ರಕರಣಗಳಿಗೆ ರೂ. ೫ ಲಕ್ಷದ ೪೦ ಸಾವಿರ, ಆಸ್ತಿಪಾಸ್ತಿ ನಷ್ಟದ ೨೨ ಪ್ರಕರಣಗಳಿಗೆ ರೂ. ೨ ಲಕ್ಷದ ೪೭ ಸಾವಿರ ಪರಿಹಾರ ವಿತರಿಸಲಾಗಿದೆ.
೨೦೧೯-೨೦ನೇ ಸಾಲಿನಲ್ಲಿ ಬಿಡುಗಡೆಯಾದ ರೂ ೨ ಕೋಟಿ ೯೬ ಲಕ್ಷ ಅನುದಾನದ ಪೈಕಿ ೪೧೪೩ ಬೆಳೆಹಾನಿ ಪ್ರಕರಣಕ್ಕೆ ರೂ. ೨,೫೨,೫೭,೭೩೬, ಮಾನವನ ಸಾವಿನ ೫ ಪ್ರಕರಣಕ್ಕೆ ರೂ. ೧೭.೫೦ ಲಕ್ಷ, ವನ್ಯಜೀವಿಯಿಂದ ಗಾಯಗೊಂಡ ೨೦ ಪ್ರಕರಣಗಳಿಗೆ ರೂ. ೭,೨೧,೧೫೪, ೧೬೦ ಜಾನುವಾರು ಸಾವು-ನೋವು ಪ್ರಕರಣಗಳಿಗೆ ರೂ. ೧೩ ಲಕ್ಷದ ೫೧ ಸಾವಿರ, ಆಸ್ತಿಪಾಸ್ತಿ ಹಾನಿಯ ೭೮ ಪ್ರಕರಣಗಳಿಗೆ ರೂ. ೬,೪೯,೨೦೦ ಪರಿಹಾರ ವಿತರಣೆಯಾಗಿದೆ.
೨೦೨೦-೨೧ನೇ ಸಾಲಿನಲ್ಲಿ ಬಿಡುಗಡೆಯಾದ ೩,೫೭,೬೬,೦೦೦ ಅನುದಾನದಲ್ಲಿ ಬೆಳೆಹಾನಿಯ ೪೯೬೯ ಪ್ರಕರಣಗಳಿಗೆ ರೂ. ೩,೧೩,೮೪,೩೯೩, ವನ್ಯಜೀವಿಯಿಂದ ಸಾವನಪ್ಪಿದ ೬ ಪ್ರಕರಣಗಳಿಗೆ ರೂ. ೨೬.೫೦ ಲಕ್ಷ ವನ್ಯಜೀವಿಯಿಂದ ಗಾಯಗೊಂಡ ೧೧ ಪ್ರಕರಣಗಳಿಗೆ ರೂ. ೯೨,೦೪,೪೭೫, ಜಾನುವಾರು ಸಾವು-ನೋವು ೫೫ ಪ್ರಕರಣಗಳಿಗೆ ರೂ. ೪೮ ಲಕ್ಷದ ೮೯ ಸಾವಿರ, ಆಸ್ತಿಪಾಸ್ತಿ ನಷ್ಟದ ೮೨ ಪ್ರಕರಣಗಳಿಗೆ ರೂ. ೭೨ ಲಕ್ಷ ೧೨ ಸಾವಿರ ಹಣವನ್ನು ಪಾವತಿಸಲಾಗಿದೆ. ೨೦೨೧-೨೨ನೇ ಸಾಲಿನಲ್ಲಿ ವನ್ಯಜೀವಿಯಿಂದ ಸಾವನಪ್ಪಿದ ೫ ಪ್ರಕರಣಗಳಿಗೆ ರೂ. ೧೫.೫೦ ಲಕ್ಷ ಹಣ ಪಾವತಿಸಲಾಗಿದೆ ಎಂದು ಡಿಎಫ್ಒ ಅಜ್ಜಿಕುಟ್ಟೀರ ಟಿ. ಪೂವಯ್ಯ ‘ಶಕ್ತಿ’ಗೆ ಮಾಹಿತಿ ನೀಡಿದ್ದಾರೆ.
೨೦೧೯ ರಿಂದ ವನ್ಯಜೀವಿ ದಾಳಿಯಿಂದ ಮೃತಪಟ್ಟವರ ಧಯಾತ್ಮಕ ಧನವನ್ನು ಹೆಚ್ಚಿಸಿದ್ದು, ಪ್ರಸ್ತುತ ರೂ. ೭.೫೦ ಲಕ್ಷ ಇದೆ. ಮೊದಲ ಹಂತವಾಗಿ ಮೃತಪಟ್ಟ ಕುಟುಂಬಕ್ಕೆ ರೂ. ೨ ಲಕ್ಷ ವಿತರಿಸಲಾಗುತ್ತದೆ. ಕೆಲ ಪ್ರಕ್ರಿಯೆ ನಂತರ ಉಳಿದ ಹಣವನ್ನು ಒಟ್ಟಿಗೆ ನೀಡಲಾಗುತ್ತಿದೆ.
ಬೆಳೆಹಾನಿಯೆ ಹೆಚ್ಚು
ವನ್ಯಜೀವಿ ದಾಳಿಗೆ ಜಿಲ್ಲೆಯಲ್ಲಿ ಅಪಾರ ಬೆಳೆ ನಷ್ಟ ಪ್ರಕರಣ ಸಂಭವಿಸಿದೆ. ಕಳೆದ ಮೂರು ವರ್ಷದಲ್ಲಿ ಒಟ್ಟು ೪,೯೬೯ ದಾಳಿ ನಡೆದಿದ್ದು, ಕೃಷಿ ಫಸಲು ನಾಶವಾಗಿವೆ.
೨೦೧೮-೧೯ನೇ ಸಾಲಿನಲ್ಲಿ ೩೨೮೨, ೨೦೧೯-೨೦ನೇ ಸಾಲಿನಲ್ಲಿ ೪೧೪೩, ೨೦೨೦-೨೧ನೇ ಸಾಲಿನಲ್ಲಿ ೨೬೬೯ ಪ್ರಕರಣ ದಾಖಲಾಗಿದ್ದು, ಇವರಿಗೆ ಮಾರ್ಗಸೂಚಿ ಅನ್ವಯ ಪರಿಹಾರ ವಿತರಿಸಲಾಗಿದೆ. - ಹೆಚ್.ಜೆ ರಾಕೇಶ್