*ವೀರಾಜಪೇಟೆ, ಜು. ೫: ರಾಯ್ ಡಿಸೋಜಾ ಸಾವಿನ ಪ್ರಕರಣಕ್ಕೆ ಸಂಬAಧಿಸಿದAತೆ ವಿಶೇಷ ಪ್ರಕರಣದಡಿ ಸಿಬಿಐ ತನಿಖೆಗೆ ಒಳಪಡಿಸಿ ನ್ಯಾಯ ಒದಗಿಸುವಂತೆ ಕ್ರೆöÊಸ್ತ ಸಮುದಾಯ ಹಾಗೂ ನಾಗರಿಕ ಸಮಾಜದ ಪ್ರಮುಖರು ಆಗ್ರಹಿಸಿದ್ದಾರೆ. ರಾಯ್ ಡಿಸೋಜಾ *ವೀರಾಜಪೇಟೆ, ಜು. ೫: ರಾಯ್ ಡಿಸೋಜಾ ಸಾವಿನ ಪ್ರಕರಣಕ್ಕೆ ಸಂಬAಧಿಸಿದAತೆ ವಿಶೇಷ ಪ್ರಕರಣದಡಿ ಸಿಬಿಐ ತನಿಖೆಗೆ ಒಳಪಡಿಸಿ ನ್ಯಾಯ ಒದಗಿಸುವಂತೆ ಕ್ರೆöÊಸ್ತ ಸಮುದಾಯ ಹಾಗೂ ನಾಗರಿಕ ಸಮಾಜದ ಪ್ರಮುಖರು ಆಗ್ರಹಿಸಿದ್ದಾರೆ. ರಾಯ್ ಡಿಸೋಜಾ ವೀರಾಜಪೇಟೆಯ ನಾಗರಿಕ ವೇದಿಕೆ, ಹಾಗೂ ರಾಯ್ ತಾಯಿ ಮತ್ತು ಸಹೋದರ ಆಗ್ರಹಿಸಿದ್ದಾರೆ.

ಸಂತ ಅನ್ನಮ್ಮ ದೇವಾಲಯದ ದ್ವಿಶತಮಾನೋತ್ಸವ ಭವನದಲ್ಲಿ ಏರ್ಪಡಿಸಲಾಗಿದ್ದ ಪತ್ರಿಕಾ ಗೋಷ್ಠಿಯನ್ನು ಉದ್ದೇಶಿಸಿ ನಾಗರಿಕ ಸಮಿತಿಯ ಅಧ್ಯಕ್ಷ ಡಾ.ದುರ್ಗಾ ಪ್ರಸಾದ್ ಮಾತನಾಡುತ್ತಾ, ರಾಯ್ ಪ್ರಕರಣವನ್ನು ಮಾದ್ಯಮಗಳಲ್ಲಿ ಹಾಗೂ ಅವರ ತಾಯಿಯ ಬಳಿ ಕೇಳಿ ತಿಳಿದುಕೊಂಡಿದ್ದೇವೆ.

ಮನೆಯಿAದ ಹೊರಹೋದ ವ್ಯಕ್ತಿಯ ಮೇಲೆ ಸಾಯುವ ಹಾಗೆ ಹಲ್ಲೆ ಮಾಡಿ ಮನೆಗೆ ಕಳುಹಿಸಿ ಕೊಡುತ್ತಾರೆ ಎಂದರೆ ರಸ್ತೆಯಲ್ಲಿ ಪೊಲೀಸರನ್ನು ನೋಡುವಾಗ ಭಯ ಕಾಡಲಾರಂಭಿಸಿದೆ. ರಾಯ್ ಡಿಸೋಜಾ ಮದ್ಯಪಾನ ಮಾಡಿದ್ದ ಎಂದು ಪೊಲೀಸರು ಹೇಳುತ್ತಾರೆ. ಆತ ಮದ್ಯ ಸೇವಿಸಿದ್ದಿದ್ದರೆ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಬಹುದಿತ್ತು. ಆಗ ಸತ್ಯ ತಿಳಿಯುತ್ತಿತ್ತು.

(ಮೊದಲ ಪುಟದಿಂದ) ಈ ರೀತಿ ಅನ್ಯಾಯ ನಾಳೆ ದಿನ ಯಾರಿಗೂ ಆಗಬಾರದು ಎಂದರು.

ಘಟನೆ ವಿವರಿಸಿದ ಅಮ್ಮ

ರಾಯ್ ಡಿಸೋಜಾ ತಾಯಿ ಮೆಟಿಲ್ಡಾ ಡಿಸೋಜಾ ಮಾತನಾಡಿ, ‘ನನ್ನ ಮಗನಿಗೆ ಮೂರ್ಛೆ ರೋಗವಿತ್ತು. ಆದರೂ ಆರೋಗ್ಯವಾಗಿ, ಉತ್ಸಾಹದಿಂದ ಇದ್ದ. ಮದ್ಯ ಸೇವಿಸುವ ಅಭ್ಯಾಸ ಇರಲಿಲ್ಲ. ಆದರೆ ಒಮ್ಮೊಮ್ಮೆ ಮಾತ್ರೆ ತೆಗೆದುಕೊಳ್ಳದಿದ್ದರೆ ಮಾತ್ರ ಹೆಚ್ಚು ಮಾತನಾಡುತ್ತಿದ್ದ. ಘಟನೆ ನಡೆಯುವ ಹಿಂದಿನ ದಿನ ಮಾತ್ರೆ ತೆಗೆದುಕೊಂಡಿರಲಿಲ್ಲ. ಘಟನೆ ನಡೆದ ದಿನವೂ ಮಾತ್ರೆ ತೆಗೆದುಕೊಂಡಿರಲಿಲ್ಲ. ಆ ದಿನ ಹೆಚ್ಚು ಮಾತನಾಡುತ್ತಿದ್ದ.’ ಆಮೇಲೆ ‘ಅಮ್ಮಾ ನಾನು ತಪ್ಪು ಮಾತನಾಡಿದರೆ ಕ್ಷಮಿಸಮ್ಮಾ’ ಎಂದು ಕೇಳುತ್ತಿದ್ದ. ಕೊನೆಗೆ ನಾನು ಆತ ನಿದ್ರೆಗೆ ಜಾರಿದನೆಂದು ಹನ್ನೊಂದು ಗÀಂಟೆ ಸುಮಾರಿಗೆ ನಿದ್ರೆಗೆ ಜಾರಿದೆ. ಮತ್ತೆ ಎಚ್ಚರವಾಗಿ ರಾಯ್ ಕೋಣೆ ನೋಡಿದಾಗ ಅವನು ಅಲ್ಲಿ ಇರಲಿಲ್ಲ. ಬಾಗಿಲು ತೆಗೆದಿತ್ತು. ಬಳಿಕ ನಾನು ನನ್ನ ಬಂಧುಗಳಿಗೆ ಭಯದಲ್ಲೇ ಕರೆ ಮಾಡಿದೆ.

ಅವರು ಮನೆ ಬಳಿ ಬಂದು ಸಮಾಧಾನ ಹೇಳಿ ‘ಬರಬಹುದು ನೋಡೋಣ’ ಎಂದು ಕಾಯುತ್ತಿದ್ದೆವು. ಅಷ್ಟರಲ್ಲಿ ಪೊಲೀಸರ ವಾಹನ ಮನೆಪಕ್ಕ ಹಾದು ಹೋಯಿತು. ಮತ್ತೆ ಅವರು ತಿರುಗಿ ಬರುವಾಗ ‘ಇಲ್ಲಿ ಡಿಸೋಜಾ ಯಾರು?’ ಎಂದು ಕೇಳಿದರು. ‘ನಾವೂ ನನ್ನ ಮಗ ಕಾಣುತ್ತಿಲ್ಲ’ ಎಂದು ಹೇಳಿದಾಗ ‘ಅವರು ಸ್ಟೇಶನ್‌ನ್ನಲ್ಲಿ ಇದ್ದಾರೆ, ಬಂದು ಕರೆದುಕೊಂಡು ಹೋಗಿ’ ಎಂದರು. ಆಗ ಮಧ್ಯರಾತ್ರಿ ಕಳೆದು ೨.೩೦ ರಿಂದ ೩.೩೦ ಸಮಯ ಇರಬಹುದು. ಸ್ಟೇಶನ್‌ಗೆ ಹೋದರೆ ಅಲ್ಲಿ ತುಂಬಾ ಜನ ಪೊಲೀಸರು ಇದ್ದರು. ನನಗೆ ನನ್ನ ಮಗ ‘ಅಮ್ಮಾ..’ ಎಂದು ಕರೆದ ಧ್ವನಿ ಕೇಳಿತು. ನೋಡಿದರೆ ಅವನ ಮೈಮೇಲೆ ನೀರು ಸುರಿದು ಮರಳು ಮೆತ್ತಿಕೊಂಡು ಮುದ್ದೆಯಾಗಿ ಬಿದ್ದಿದ್ದ. ‘ಅಮ್ಮಾ ಪೊಲೀಸರು ನನ್ನ ಮೂಳೆಗಳನ್ನು ಪುಡಿ ಪುಡಿ ಮಾಡಿದ್ದಾರೆ ಅಮ್ಮಾ..’ ಎಂದು ಹೇಳಿದ, ನಾನು ಪೊಲೀಸರನ್ನು ‘ನನ್ನ ಮಗನಿಗೆ ಯಾಕೆ ನೀರು ಸುರಿದ್ದೀರಾ..?’ ಎಂದು ಪ್ರಶ್ನೆ ಮಾಡಿದೆ, ‘ಅವನ ನಶೆ ಇಳಿಯಲಿ’, ಕೂಡಲೇ ಕರೆದುಕೊಂಡು ಮನೆಗೆ ಹೋಗಿ’ ಎಂದು ಪೊಲೀಸರು ಆತುರ ಮಾಡಿದರು.

ಬಳಿಕ ಮನೆಗೆ ಕರೆದುತಂದು ಅವನನ್ನು ವೆರಾಂಡದಲ್ಲಿ ಮಲಗಿಸಿ ಗಾಯವನ್ನು ಒರೆಸಿದಾಗ ಬಟ್ಟೆ ತೊಡಿಸುವ ಸ್ಥಿತಿಯಲ್ಲೂ ಇರಲಿಲ್ಲ. ಲುಂಗಿ ಉಡಿಸಿ ಮಲಗಿಸಿದೆವು. ಬೆಳಿಗ್ಗೆ ನೋಡಿದಾಗ ಅವನು ಉಸಿರಷ್ಟೇ ಆಡುತ್ತಿದ್ದ, ನಾನು ಹೆದರಿ ನನ್ನ ಅಕ್ಕನ ಮಗಳಿಗೆ ವಿಷಯ ತಿಳಿಸಿದೆ. ಅವರು ಕೂಡಲೇ ಬಂದು ನೋಡುವಾಗ ಮೈಮೇಲೆ ಪೊಲೀಸರು ಹೊಡೆದ ಜಾಗದಲ್ಲೆಲ್ಲಾ ಊದಿ ಹೋಗಿತ್ತು, ಮಂಡಿಯ ಹಿಂಬದಿ ದೊಡ್ಡ ಗಾಯವಾಗಿ ರಕ್ತ ಸೋರುತ್ತಿತ್ತು. ಬಳಿಕ ಎಂಟು ಗÀಂಟೆ ಸುಮಾರಿಗೆ ಸಿವಿಲ್ ಧಿರಿಸಿನಲ್ಲಿ ಮನೆಗೆ ಮೂವರು ಪೊಲೀಸರು ಬಂದು ರಾಯ್ ಕೋಣೆಯಲ್ಲಿ ಮಲಗಿರುವುದನ್ನು ನೋಡಿ ಹೋದರು. ಬಳಿಕ ನಾವು ಇವನನ್ನು ಆಂಬ್ಯುಲೆನ್ಸ್ನಲ್ಲಿ ಕಾರ್ಯಪ್ಪ ಡಾಕ್ಟರ್ ಬಳಿ ಕರೆದುಕೊಂಡು ಹೋದೆವು. ಅವರು ‘ಇಲ್ಲಿ ಆಗುವುದಿಲ್ಲ ಮಡಿಕೇರಿ ಅಶ್ವಿನಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ’ ಎಂದರು.

ನಾವೂ ಹಾಗೇ ಮಾಡಿದೆವು. ಅಲ್ಲಿ ಹೋದಾಗ ವೈದ್ಯರು ‘ತುಂಬಾ ಏಟು ಬಿದ್ದಿದೆ. ರಾಯ್ ಕೋಮಾಕ್ಕೆ ಹೋಗುವ ಸ್ಥಿತಿಯಲ್ಲಿದ್ದಾನೆ’ ಎಂದು ವೆಂಟಿಲೇಟರ್ ಅಳವಡಿಸಿದರು.

ಅಷ್ಟರಲ್ಲಾಗಲೇ ಎಂಟರಿAದ ಹತ್ತು ವೀರಾಜಪೇಟೆ ಪೊಲೀಸರು ಅಲ್ಲಿಗೆ ಬಂದು ನನ್ನನ್ನು ಹೆದರಿಸಲಾರಂಭಿಸಿದರು ‘ಪೊಲೀಸರು ಮಾಡಿದ್ದು ಎಂದು ಹೇಳಿದರೆ ನಿಮಗೆ ತೊಂದರೆ ಆಗುತ್ತz’ೆ ಎಂದು. ಜೊತೆಗೆ ‘ರಾಯ್‌ಗೆ ಹೊಡೆದ ಪೊಲೀಸರಿಗೆ ನಾಚಿಕೆ ಆಗಿದೆ. ಅವರಿಗೆ ಮುಖ ತೋರಿಸಲು ಆಗುತ್ತಿಲ್ಲ. ಅದಕ್ಕೆ ನೀವು ಒಪ್ಪಿದ್ರೆ ರಾಯ್‌ನನ್ನು ವೆಂಟಿಲೇಟರ್ ಇರುವ ಆಂಬ್ಯುಲೆನ್ಸ್ನ್ನಲ್ಲಿ ಮಂಗಳೂರಿಗೆ ಶಿಫ್ಟ್ ಮಾಡುತ್ತೇವೆ, ಎಷ್ಟು ಹಣ ಖರ್ಚಾದರೂ ನಾವೂ ಕೊಡುತ್ತೇವೆ’ ಎಂದರು. ಅದಕ್ಕೆ ನಾವೂ ಮತ್ತು ವೈದ್ಯರು ಒಪ್ಪದೇ ಇದ್ದಾಗ ವೀರಾಜಪೇಟೆಯ ಮುಸ್ತಾಫ ಎನ್ನುವ ಪೊಲೀಸ್ ಅವರ ಫೋನ್ ನಂಬರ್ ಕೊಟ್ಟು, ‘ಮನಸು ಬದಲಾಯಿಸಿದರೆ ನಮಗೆ ಕರೆ ಮಾಡಿ’ ಎಂದು ತಿಳಿಸಿದರು. ಬಳಿಕ ನಮ್ಮ ಸಮುದಾಯದವರಿಗೆ, ಮಾಧ್ಯಮದವರಿಗೆ ವಿಚಾರ ತಿಳಿಯಿತು. ಆಗ ಪೊಲೀಸರು ಜಾಗ ಖಾಲಿ ಮಾಡಿದರು. ರಾಯ್ ತೀರಿಹೋದ. ಎಂದು ನಡೆದ ಘಟನೆಗಳನ್ನೆಲ್ಲಾ ತಿಳಿಸಿದರು.

ನಂತರ ಸಾಂತ್ವನ ಹೇಳುವ ನೆಪದಲ್ಲಿ ಮನೆಗೆ ಬಂದಿದ್ದ ನಾಲ್ವರು ಪೊಲೀಸರ ಮಡದಿಯರು, ‘ಆ ಪೊಲೀಸರಿಗೆ ಹೆಂಡತಿ, ಮಕ್ಕಳು ಇದ್ದಾರಲ್ವಾ.? ಅವರ ಬಗ್ಗೆ ನೀವು ಯೋಚಿಸಿ’ ಎಂದು ಹೇಳುತ್ತಾ ನನಗೆ ಪ್ರಶ್ನೆ ಮೇಲೆ ಪ್ರಶ್ನೆ ಕೇಳುವಾಗ ಮಗ ಮಧ್ಯಪ್ರವೇಶಿಸಿ ಆಕ್ಷೇಪ ವ್ಯಕ್ತಪಡಿಸಿದ. ಆಮೇಲೆ ತಲೆಬಗ್ಗಿಸಿಕೊಂಡು ಹೊರಟುಹೋದರು. ‘ಆದರೆ ಪೊಲೀಸರು ಮೊದಲೇ ನನ್ನನ್ನು ಹೆದರಿಸಿ ಇಟ್ಟಿದ್ದರು, ಇತ್ತ ಮಗ ಕೋಮಾಗೆ ಹೋಗಿದ್ದ, ಹಾಗಿರುವಾಗ ಅನೇಕ ಬಾರಿ ನನ್ನ ಬಳಿಯಿಂದ ಏನೋ ಬರೆದುಕೊಂಡು ಓದಲು ಅವಕಾಶ ಕೊಡದೆ ಸಹಿ ಹಾಕಿಸಿಕೊಂಡರು. ಖಾಲಿ ಹಾಳೆಗೂ ಸಹಿ ಪಡೆದರು. ನಾವೂ ಜೂನ್ ೧೭ ರಂದು ಎಫ್.ಐ. ಆರ್. ಪ್ರತಿ ಪಡೆದಾಗಲೇ ಗೊತ್ತಾಗಿದ್ದು, ಸುಳ್ಳು ಹೇಳಿಕೆ ಬರೆದುಕೊಂಡು ನನ್ನ ಸಹಿ ಪಡೆದಿದ್ದಾರೆ ಎಂಬದು. ಇದನ್ನು ಸಿಐಡಿ ಅವರ ಮುಂದೆಯೂ ಹೇಳಿದ್ದೇನೆ’ ಎಂದರು.

ರೋಮನ್ ಕ್ಯಾಥೋಲಿಕ್ ಅಸೋಸಿಯೇಶನ್ನಿನ ಜಿಲ್ಲಾ ಸಂಚಾಲಕ ಲಾರೆನ್ಸ್ ಮಾತನಾಡಿ, ರಾಯ್ ಸಹೋದರನಿಗೆ ಮೊಬೈಲ್ ನಂಬರ್ ಕೊಟ್ಟು ಹೋಗಿದ್ದ ಮುಸ್ತಾಫ ಪೊಲೀಸ್ ಮನೆಯಲ್ಲಿಯೇ ಸಿಐಡಿ ಅಧಿಕಾರಿಗಳು ಎರಡನೇ ಬಾರಿ ತನಿಖೆ ನಡೆಸಲು ವೀರಾಜಪೇಟೆಗೆ ಬಂದಾಗ ತಂಗಿದ್ದರು ಎನ್ನುವ ಮಾಹಿತಿ ನಮಗೆ ಲಭಿಸಿದೆ.

ಹಾಗಿದ್ದಾಗ ಈ ತನಿಖಾ ಹಾದಿ ಯಾವ ಹಾದಿಯಲ್ಲಿ ಸಾಗುತ್ತಿದೆ ಎನ್ನುವ ಕಲ್ಪನೆ ನಮಗೆ ಬಂದು ಹೋಗಿದೆ. ಅನ್ಯಾಯಕ್ಕೆ ಸಮಾಜದಲ್ಲಿ ಜಾಗವಿಲ್ಲ, ಅನ್ಯಾಯಕ್ಕೆ ಶಿಕ್ಷೆಯಾಗಬೇಕು. ಸಮಾಜಕ್ಕೆ ಇದೊಂದು ಪಾಠವಾಗಬೇಕು ಎನ್ನುವುದು ನಮ್ಮ ಒತ್ತಾಯ. ನಮಗೆ ತನಿಖಾ ಸಂಸ್ಥೆಯ ಬಗ್ಗೆ ನಂಬಿಕೆ ಹೊರಟು ಹೋಗಿದೆ. ಇದನ್ನು ಸಿಬಿಐಗೆ ವರ್ಗಾಯಿಸಬೇಕು ಎಂದರು. ಈ ಪ್ರಕರಣದಲ್ಲಿ ಸುಳ್ಳು ಎಫ್.ಐ.ಆರ್. ಮಾಡಿರುವ ಠಾಣಾಧಿಕಾರಿ ಮತ್ತು ಸಂಧಾನ ಮಾಡಲು ಬಂದಿದ್ದ ಮುಸ್ತಾಫ ಪೊಲೀಸ್ ಮೇಲೆ ಕೂಡಾ ಎಫ್ .ಐ.ಆರ್. ಆಗಬೇಕು ಎಂದರು.

ಕೆಲವೇ ದಿನಗಳಲ್ಲಿ ಕೊಡಗು ಅನ್ ಲಾಕ್ ಆದ ಕೂಡಲೇ ಹೋರಾಟವನ್ನು ಹಮ್ಮಿಕೊಳ್ಳಲಾಗುವದೆಂದು ಹೇಳಿದರು.

ರಾಯ್ ಸಹೋದರ ರಾಬಿನ್ ಡಿಸೋಜಾ ನಮ್ಮ ತಾಯಿಯ ಕೈಯಿಂದ ಸಹಿ ಪಡೆದು ಸುಳ್ಳು ದೂರನ್ನು ಪೊಲೀಸರು ಬರೆದುಕೊಂಡು ತಾಯಿಯ ಸಹಿ ಪಡೆದುಕೊಂಡರು. ಅಲ್ಲದೆ ಎಫ್.ಐ.ಆರ್ ಪ್ರತಿಯನ್ನು ನಮಗೆ ಕೊಡಲು ಬಹಳ ದಿನ ಸತಾಯಿಸಿದರು. ನಮ್ಮನ್ನು ಸಿಐಡಿಯವರು ಜೂನ್ ೧೪ ರಂದು ಭೇಟಿಯಾದರು, ೧೫ ಜೂನ್ ರಂದು ನನ್ನ ಹಾಗೂ ತಾಯಿಯ ಹೇಳಿಕೆಯನ್ನು ದಾಖಲಿಸಿಕೊಂಡರು.

ಆದರೆ ಒಮ್ಮೆ ಕೂಡಾ ಅವರು ಎಫ್.ಐ.ಆರ್ ಬಗ್ಗೆ ಯಾವ ಪ್ರಶ್ನೆಯನ್ನು ಕೇಳಲಿಲ್ಲ. ಬರೇ ನಮ್ಮ ಹೇಳಿಕೆಯನ್ನಷ್ಟೇ ದಾಖಲಿಸಿದರು. ಇದು ಕೂಡಾ ಅನುಮಾನಕ್ಕೆ ಕಾರಣವಾಗಿದೆ. ಘಟನೆ ನಡೆದ ಮೇಲೆ ಎಫ್.ಐ.ಆರ್ ಆಗಿದೆ ಅಂತ ತಿಳಿದು, ಮೂರು ಬಾರಿ ಹೋಗಿ ಕೇಳಿದ ಮೇಲೆ ಕೊನೆಯಲ್ಲಿ ನಮಗೆ ಎಫ್. ಐ.ಆರ್ ಕೊಟ್ಟರು ಎಂದರು.

ಸಂತ ಅನ್ನಮ್ಮ ದೇವಾಲಯದ ಧರ್ಮಗುರು ಮಧಲೈ ಮುತ್ತು ಅವರು ಈ ಕುಟುಂಬಕ್ಕೆ ಆಗಿರುವ ಅನ್ಯಾಯಕ್ಕೆ ನ್ಯಾಯ ಸಿಗಬೇಕು. ಈ ಘಟನೆಯಿಂದ ಸಮಾಜಕ್ಕೆ ತಪ್ಪು ಸಂದೇಶ ಹೋಗುವುದು ಬೇಡ ಎಂದರು. ಜಿಲ್ಲಾ ರೊಮನ್ ಕ್ಯಾಥೋಲಿಕ್ ಅಸೋಸಿಯೇಶನ್ನಿನ ಉಪಾಧ್ಯಕ್ಷ ಜಾನ್ಸನ್ ಪಿಂಟೋ ಇದ್ದರು.

- ಉಷಾ ಪ್ರೀತಮ್