ಮಡಿಕೇರಿ, ಜು. ೫: ರಾಜ್ಯ ಸರಕಾರದ ಆದೇಶದಂತೆ ಪದವಿ ಕಾಲೇಜು ವಿದ್ಯಾರ್ಥಿಗಳಿಗೆ, ಶಿಕ್ಷಕರಿಗೆ ಹಾಗೂ ಸಿಬ್ಬಂದಿಗಳಿಗೆ ಲಸಿಕೆ ನೀಡುವ ಕಾರ್ಯ ಜಿಲ್ಲೆಯಲ್ಲಿ ಚುರುಕುಗೊಂಡಿದೆ. ಈ ಹಿನ್ನೆಲೆ ಸಾರ್ವಜನಿಕರಿಗೆ ಲಸಿಕೆಯ ಕೊರತೆಯಾಗುತ್ತಿದ್ದು, ಪ್ರತಿದಿನ ಜಿಲ್ಲೆಯ ವಿವಿಧ ಲಸಿಕಾ ಕೇಂದ್ರಗಳಲ್ಲಿ ಜನಸಂದಣಿ, ಕೆಲವೊಮ್ಮೆ ವಾಗ್ವಾದ ಉಂಟಾಗುತ್ತಿರುವುದು ಸಾಮಾನ್ಯವಾಗಿಬಿಟ್ಟಿದೆ.ಇವತ್ತು ೩ ಗಂಟೆ ಕಾದು ಕುಳಿತೆ, ನಿನ್ನೆ ಕುಳಿತುಕೊಳ್ಳಲು ಜಾಗ ದೊರೆತಿಲ್ಲ, ಮೊನ್ನೆ ಗಾಡಿಯಲ್ಲಿ ಬಹಳ ದೂರ ಸಂಚರಿಸಿ ಲಸಿಕೆ ದೊರೆಯದೆ ವಾಪಾಸು ಹೋದೆ, ೩ ಕಿ.ಮೀ ನಡೆದುಕೊಂಡು ಬಂದರೂ ಲಸಿಕೆ ದೊರೆಯದೆ ನಿರಾಸೆ, ಆಯಾಸದಿಂದ ಹಿಂತೆರಳಿದೆ” - ಇದು ವಿವಿಧ ವಾಟ್ಸಪ್ ಗುಂಪುಗಳಲ್ಲಿ, ಇತರ ಸಾಮಾಜಿಕ ಜಾಲತಾಣಗಳಲ್ಲಿ ಜಿಲ್ಲೆಯಲ್ಲಿನ ಲಸಿಕೆ ಕೊರತೆಯ ಸಂಬAಧ ಸಾರ್ವಜನಿಕರ ಅನುಭವದ ಮಾತುಗಳು. ಲಸಿಕೆ ಅಭಾವದ ಕಾರಣ ಕೆಲ ದಿನಗಳ ಹಿಂದೆ ಜಿಲ್ಲೆಯ ವಿವಿಧ ಲಸಿಕಾ ಕೇಂದ್ರಗಳು ‘ಲಸಿಕೆ ಅಲಭ್ಯ’ ಎಂದು ಫಲಕ ಅಂಟಿಸಿ ಲಸಿಕಾ ಕೇಂದ್ರಗಳನ್ನು ಮುಚ್ಚಿದ ಘಟನೆಯೂ ನಡೆದಿತ್ತು. ೨ ನೇ ಡೋಸ್‌ಗೆ ಅವಧಿಯಾಗಿದ್ದರೂ ಲಸಿಕೆ ದೊರೆಯದ ಸ್ಥಿತಿ ನಿರ್ಮಾಣವಾಗಿದೆ.

ಅತ್ಯಂತ ಅಧಿಕ ಸಂಖ್ಯೆಯಲ್ಲಿ ಲಸಿಕೆ ಉತ್ಪಾದನೆ ಮಾಡಿದ ಭಾರತ, ಮೊದಲಿಗೆ ನಾಗರಿಕರು ಲಸಿಕೆ ಪಡೆಯಲು

(ಮೊದಲ ಪುಟದಿಂದ) ಹಿಂಜರಿಯುತ್ತಿದ್ದ ಸಂದರ್ಭ ನೆರೆ ರಾಷ್ಟçಗಳಿಗೆ ಉದಾರವಾಗಿ ಲಸಿಕೆಗಳನ್ನು ನೀಡಿತು. ಇದೀಗ ಲಸಿಕೆ ಪಡೆಯಲು ಮುಗಿ ಬೀಳುತ್ತಿರುವ ಸಾರ್ವಜನಿಕರಿಗೆ ಲಸಿಕೆ ದೊರೆಯದ ಸ್ಥಿತಿ ನಿರ್ಮಾಣವಾಗಿದೆ.

ಇತರ ದೇಶಗಳಲ್ಲಿ ಪ್ರತಿಯೊಬ್ಬರೂ ೨ ಡೋಸ್ ಲಸಿಕೆ ಪಡೆದು ವಿಜ್ರಂಭಣೆಯ ಫುಟ್‌ಬಾಲ್, ಕ್ರಿಕೆಟ್ ಟೂರ್ನಿಗಳಲ್ಲಿ ಭಾಗವಹಿಸುತ್ತಿದ್ದರೆ ಭಾರತದಲ್ಲಿ ‘ಅತ್ಯಂತ ದೊಡ್ಡ ಲಸಿಕಾ ಅಭಿಯಾನ’ ಎಂಬುದಾಗಿ ಕೇಂದ್ರ, ರಾಜ್ಯ ಆರೋಗ್ಯ ಸಚಿವರುಗಳು ತಮ್ಮ ತಮ್ಮ ಸಾಮಾಜಿಕ ಜಾಲತಾಣಗಳ ಖಾತೆಗಳಲ್ಲಿ ಹಾಕುವುದಕ್ಕೆ ಸೀಮಿತವಾಗಿದ್ದಾರೆ ಹೊರತು ವಾಸ್ತವದಲ್ಲಿ ಲಸಿಕೆಯ ಕೊರತೆ ಇರುವುದು ಅವರುಗಳಿಗೆ ತಿಳಿಯದೇ ಇರುವುದು ವಿಪರ್ಯಾಸ.

ಕೆಲ ದಿನಗಳ ಹಿಂದಷ್ಟೇ ಜಿಲ್ಲೆಗೆ ಆಗಮಿಸಿದ್ದ ರಾಜ್ಯ ಆರೋಗ್ಯ ಸಚಿವ ಕೆ.ಸುಧಾಕರ್ ಸಂಬAಧಿಸಿದ ಅಧಿಕಾರಿಗಳಿಗೆ ಲಸಿಕೆ ನೀಡುವ ಕಾರ್ಯ ಜಿಲ್ಲೆಯಲ್ಲಿ ಚುರುಕಾಗಬೇಕು ಎಂದಿದ್ದಾರೆ. ಇದಕ್ಕೆ ಅಧಿಕಾರಿಗಳು ‘ಆಯ್ತು ಸರ್’ ಎಂದಿದ್ದಾರೆ. ರಾಜ್ಯ ಸಚಿವರು ಲಸಿಕಾ ಅಭಿಯಾನ ಚುರುಕಾಗಬೇಕು ಎಂದರೆೆ ಸಾಕೇ? ಲಸಿಕೆ ರಾಜ್ಯ ಸರಕಾರವೇ ನೀಡಬೇಕಲ್ಲವೇ? ಎಂಬುದು ಪ್ರಶ್ನೆಯಾಗಿದೆ. ವಿಶೇಷವಾಗಿ ಇತರ ಜಿಲ್ಲೆಗಳಿಗೆ ಹೋಲಿಸಿದರೆ ಕೊಡಗಿಗೆ ಅತ್ಯಂತ ಕಡಿಮೆ ಪ್ರಮಾಣದಲ್ಲಿ ರಾಜ್ಯದಿಂದ ಲಸಿಕೆ ಪೂರೈಕೆಯಾಗುತ್ತಿದೆ. ಗುಡ್ಡಗಾಡು ಪ್ರದೇಶವಾದ ಕೊಡÀಗಿನ ಕೆಲವು ಗ್ರಾಮೀಣ ಭಾಗಗಳಲ್ಲಿ ಲಸಿಕೆ ಪಡೆಯಲೆಂದು ಕೇಂದ್ರಗಳಿಗೆ ಭೇಟಿ ನೀಡಿ ಸಾರ್ವಜನಿಕರು ತಮ್ಮ ತಮ್ಮ ನಿವಾಸಗಳಿಗೆ ಹಿಂತೆರಳುವಷ್ಟರಲ್ಲಿ ಒಂದು ದಿನವಿಡೀ ಕಾಲಾವಕಾಶ ಬೇಕಾಗುತ್ತದೆ. ಇಂತಹ ಸಂದರ್ಭಗಳಲ್ಲಿ ಲಸಿಕೆ ದೊರೆಯದೇ ಹೋದಲ್ಲಿ ಸಾರ್ವಜನಿಕರು ಆಕ್ರೋಶಿಸುವುದು ಸಹಜ.

ಜಿಲ್ಲೆಯಾದ್ಯಂತ ಪ್ರತಿನಿತ್ಯ ಜನರು ಲಸಿಕೆ ದೊರೆಯದೆ ಆಕ್ರೋಶ ವ್ಯಕ್ತಪಡಿಸುತ್ತಿರುವುದು ಸಾಮಾನ್ಯವಾಗಿಬಿಟ್ಟಿದೆ. ಇಂದು ನಾಪೋಕ್ಲಿನ ಕರ್ನಾಟಕ ಪಬ್ಲಿಕ್ ಶಾಲೆಯ ಲಸಿಕಾ ಕೇಂದ್ರದಲ್ಲಿ ಲಸಿಕೆಗಾಗಿ ಕಿಕ್ಕಿರಿದ ಜನರು ಆರೋಗ್ಯ ಇಲಾಖೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಜಿಲ್ಲೆಯಲ್ಲಿ ತಾ. ೬ರಂದು (ಇಂದು) ೨,೨೪೦ ಕೋವಿಶೀಲ್ಡ್ ಡೋಸ್‌ಗಳು ಲಭ್ಯವಿದ್ದು, ಕೇವಲ ೧೨ ಲಸಿಕಾ ಕೇಂದ್ರಗಳಲ್ಲಿ ಮಾತ್ರ ದೊರೆಯಲಿದೆ.

ನಾಪೋಕ್ಲು ಲಸಿಕಾ ಕೇಂದ್ರದಲ್ಲಿ ಜನರ ಆಕ್ರೋಶ

ನಾಪೋಕ್ಲು ಕರ್ನಾಟಕ ಪಬ್ಲಿಕ್ ಶಾಲೆಯ ಕೊರೊನಾ ಲಸಿಕಾ ಕೇಂದ್ರದಲ್ಲಿ ಲಸಿಕೆಗಾಗಿ ಕಿಕ್ಕಿರಿದು ಜನ ಸೇರಿದ್ದರು. ಆದರೆ, ಲಸಿಕೆ ಪೂರೈಕೆÉಯಾಗದ ಹಿನೆÀ್ನಲೆಯಲ್ಲಿ ಯಾರಿಗೂ ಲಸಿಕೆ ದೊರೆಯದೆ ಜನ ಜಿಲ್ಲಾಡಳಿತ ಮತ್ತು ಆರೋಗ್ಯ ಇಲಾಖೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಘಟನೆ ನಡೆಯಿತು.

ನಾಪೋಕ್ಲು ಪಬ್ಲಿಕ್ ಶಾಲೆಯ ಪೂರೈಕೆಯಾಗುತ್ತಿದೆ. ಗುಡ್ಡಗಾಡು ಪ್ರದೇಶವಾದ ಕೊಡÀಗಿನ ಕೆಲವು ಗ್ರಾಮೀಣ ಭಾಗಗಳಲ್ಲಿ ಲಸಿಕೆ ಪಡೆಯಲೆಂದು ಕೇಂದ್ರಗಳಿಗೆ ಭೇಟಿ ನೀಡಿ ಸಾರ್ವಜನಿಕರು ತಮ್ಮ ತಮ್ಮ ನಿವಾಸಗಳಿಗೆ ಹಿಂತೆರಳುವಷ್ಟರಲ್ಲಿ ಒಂದು ದಿನವಿಡೀ ಕಾಲಾವಕಾಶ ಬೇಕಾಗುತ್ತದೆ. ಇಂತಹ ಸಂದರ್ಭಗಳಲ್ಲಿ ಲಸಿಕೆ ದೊರೆಯದೇ ಹೋದಲ್ಲಿ ಸಾರ್ವಜನಿಕರು ಆಕ್ರೋಶಿಸುವುದು ಸಹಜ.

ಜಿಲ್ಲೆಯಾದ್ಯಂತ ಪ್ರತಿನಿತ್ಯ ಜನರು ಲಸಿಕೆ ದೊರೆಯದೆ ಆಕ್ರೋಶ ವ್ಯಕ್ತಪಡಿಸುತ್ತಿರುವುದು ಸಾಮಾನ್ಯವಾಗಿಬಿಟ್ಟಿದೆ. ಇಂದು ನಾಪೋಕ್ಲಿನ ಕರ್ನಾಟಕ ಪಬ್ಲಿಕ್ ಶಾಲೆಯ ಲಸಿಕಾ ಕೇಂದ್ರದಲ್ಲಿ ಲಸಿಕೆಗಾಗಿ ಕಿಕ್ಕಿರಿದ ಜನರು ಆರೋಗ್ಯ ಇಲಾಖೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಜಿಲ್ಲೆಯಲ್ಲಿ ತಾ. ೬ರಂದು (ಇಂದು) ೨,೨೪೦ ಕೋವಿಶೀಲ್ಡ್ ಡೋಸ್‌ಗಳು ಲಭ್ಯವಿದ್ದು, ಕೇವಲ ೧೨ ಲಸಿಕಾ ಕೇಂದ್ರಗಳಲ್ಲಿ ಮಾತ್ರ ದೊರೆಯಲಿದೆ.

ನಾಪೋಕ್ಲು ಲಸಿಕಾ ಕೇಂದ್ರದಲ್ಲಿ ಜನರ ಆಕ್ರೋಶ

ನಾಪೋಕ್ಲು ಕರ್ನಾಟಕ ಪಬ್ಲಿಕ್ ಶಾಲೆಯ ಕೊರೊನಾ ಲಸಿಕಾ ಕೇಂದ್ರದಲ್ಲಿ ಲಸಿಕೆಗಾಗಿ ಕಿಕ್ಕಿರಿದು ಜನ ಸೇರಿದ್ದರು. ಆದರೆ, ಲಸಿಕೆ ಪೂರೈಕೆÉಯಾಗದ ಹಿನೆÀ್ನಲೆಯಲ್ಲಿ ಯಾರಿಗೂ ಲಸಿಕೆ ದೊರೆಯದೆ ಜನ ಜಿಲ್ಲಾಡಳಿತ ಮತ್ತು ಆರೋಗ್ಯ ಇಲಾಖೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಘಟನೆ ನಡೆಯಿತು.

ನಾಪೋಕ್ಲು ಪಬ್ಲಿಕ್ ಶಾಲೆಯ ಕುಟ್ಟಂಜೆಟ್ಟಿರ ಪೂಣಚ್ಚ.

ಲಸಿಕೆಯಲ್ಲಿ ತಾರತಮ್ಯ ಮಾಡುವದು ಬೇಡ. ಎಲ್ಲರಿಗೂ ಲಸಿಕೆ ದೊರೆಯುವಂತಾಗಬೇಕು. ಈ ಬಗ್ಗೆ ಆರೋಗ್ಯ ಇಲಾಖೆ ಸೂಕ್ತ ಕ್ರಮಕೈಗೊಳ್ಳಬೇಕು ಎಂದು ನಾಪೋಕ್ಲು ಗ್ರಾಮ ಪಂಚಾಯಿತಿ ಸದಸ್ಯರಾದ ಬಿ.ಎಂ.ಪ್ರತೀಪ್ ಮತ್ತು ಮಾಚೆಟ್ಟಿರ ಕುಶು ಕುಶಾಲಪ್ಪ ಒತ್ತಾಯಿಸಿದ್ದಾರೆ

ಸೋಮವಾರಪೇಟೆಯಲ್ಲಿ ಕೋವಿಡ್ ಲಸಿಕೆಗೆ ಪರದಾಟ

ಸೋಮವಾರಪೇಟೆ : ‘ಪ್ರತಿಯೋರ್ವರೂ ಕೋವಿಡ್ ಲಸಿಕೆ ಪಡೆಯಿರಿ’ ಎಂದು ಕೇಂದ್ರ ಹಾಗೂ ರಾಜ್ಯ ಸರ್ಕಾರದ ಪ್ರತಿನಿಧಿಗಳು ಪ್ರತಿನಿತ್ಯ ಭಾಷಣ ಮಾಡುತ್ತಿದ್ದರೆ; ಇತ್ತ ಆಸ್ಪತ್ರೆಗಳಿಗೆ ಮಾತ್ರ ಸಮರ್ಪಕವಾಗಿ ಲಸಿಕೆ ಪೂರೈಕೆಯಾಗುತ್ತಿಲ್ಲ.

ಸೋಮವಾರಪೇಟೆಯಲ್ಲಂತೂ ಕೋವಿಡ್ ಲಸಿಕೆಗೆ ಹೆಚ್ಚಿನ ಬೇಡಿಕೆ ಇದ್ದರೂ ಬೇಡಿಕೆಗೆ ತಕ್ಕಂತೆ ಲಸಿಕೆಗಳು ಪೂರೈಕೆಯಾಗದ ಹಿನ್ನೆಲೆ ಸಾರ್ವಜನಿಕರು ಸಮಸ್ಯೆ ಎದುರಿಸು ವಂತಾಗಿದೆ. ದೂರದ ಗ್ರಾಮೀಣ ಭಾಗದಿಂದ ಲಸಿಕೆಗಾಗಿಯೇ ಪಟ್ಟಣಕ್ಕೆ ಆಗಮಿಸುವ ಮಂದಿ ಬರಿಗೈಯಲ್ಲಿ ಹಿಂತಿರುಗುತ್ತಿದ್ದಾರೆ.

ಇಲ್ಲಿನ ಹೋಮಿಯೋಪತಿ ಆಸ್ಪತ್ರೆಯಲ್ಲಿದ್ದ ಲಸಿಕೆ ವಿತರಣೆ ಕೇಂದ್ರವನ್ನು ಸೋಮವಾರದಿಂದ ಪಟ್ಟಣದ ಚನ್ನಬಸಪ್ಪ ಸಭಾಂಗಣಕ್ಕೆ ಸ್ಥಳಾಂತರಿಸಲಾಗಿದೆ. ಇಲ್ಲಿಯಾದರೂ ಲಸಿಕೆ ಲಭಿಸಬಹುದು ಎಂದು ಬೆಳಿಗ್ಗೆ ೭ ಗಂಟೆಗೆ ಆಗಮಿಸಿದ ಸಾರ್ವಜನಿಕ ರು ಸರತಿ ಸಾಲಿನಲ್ಲಿ ನಿಂತಿದ್ದರು.

ಚನ್ನಬಸಪ್ಪ ಸಭಾಂಗಣದ ಗೇಟ್‌ಗೆ ‘ಲಸಿಕೆ ಲಭ್ಯವಿಲ್ಲ’ ಎಂದು ಫಲಕ ಅಳವಡಿಸಿದ್ದರೂ ಸಹ ಸಾರ್ವಜನಿಕರು ಇದನ್ನು ಗಣನೆಗೆ ತೆಗೆದುಕೊಳ್ಳದೇ ಬೆಳಿಗ್ಗೆ ೭ ಗಂಟೆಯಿAದ ೯ ಗಂಟೆಯವರೆಗೂ ಕಾದು ನಿಂತಿದ್ದರು. ನಂತರ ಸಿಬ್ಬಂದಿಗಳು ಸ್ಥಳಕ್ಕಾಗಮಿಸಿ ಲಸಿಕೆ ಬಂದಿಲ್ಲ ಎಂದು ತಿಳಿಸಿದ ನಂತರ ಹಿಂತಿರುಗಿದರು.

ಸೋಮವಾರಪೇಟೆಯ ಹೋಮಿಯೋಪತಿ ಆಸ್ಪತ್ರೆಯಲ್ಲಿ ತೆರೆಯಲಾಗಿದ್ದ ಲಸಿಕಾ ಕೇಂದ್ರದಲ್ಲಿ ಈವರೆಗೆ ೯೫೦೦ಕ್ಕೂ ಅಧಿಕ ಮಂದಿಗೆ ಕೋವಿಡ್ ಲಸಿಕೆ ನೀಡಲಾಗಿದೆ. ಇದರಲ್ಲಿ ೫,೫೦೦ಕ್ಕೂ ಅಧಿಕ ಮಂದಿಗೆ ಎರಡನೇ ಲಸಿಕೆ ನೀಡಬೇಕಿದ್ದು, ಈಗಾಗಲೆ ೮೪ ದಿನಗಳ ಕಾಲಾವಕಾಶ ಮುಗಿದು ಹೋಗಿದೆ. ಕೋವ್ಯಾಕ್ಸಿನ್ ಹಾಗೂ ಕೋವಿಶೀಲ್ಡ್ ಲಸಿಕೆ ಪಡೆದವರಿಗೆ ಎರಡನೇ ಲಸಿಕೆ ನೀಡಲೂ ಸಹ ಇಲ್ಲಿ ಲಸಿಕೆ ಲಭ್ಯವಿಲ್ಲ.

ಕಳೆದ ಶನಿವಾರ ಸೋಮವಾರಪೇಟೆ ಸರ್ಕಾರಿ ಆಸ್ಪತ್ರೆಗೆ ೨೦೦ ಡೋಸ್‌ಗಳು ಬಂದಿದ್ದು, ಎಲ್ಲವನ್ನೂ ನೀಡಲಾಗಿದೆ. ಭಾನುವಾರ ಮತ್ತು ಸೋಮವಾರ ಯಾವುದೇ ಲಸಿಕೆ ಬಂದಿಲ್ಲ. ಸಂತೆ ದಿನವಾದ ಸೋಮವಾರದಂದು ಲಸಿಕೆ ಸಿಕ್ಕೇ ಸಿಗುತ್ತದೆ ಎಂಬ ಆಶಾಭಾವನೆಯಿಂದ ಗ್ರಾಮೀಣ ಪ್ರದೇಶದಿಂದ ಆಗಮಿಸಿದ್ದ ಮಂದಿ ಬರಿಗೈಯಲ್ಲಿ ಹಿಂತಿರುಗಿದರು.

ಇನ್ನು ಸೋಮವಾರಪೇಟೆ ತಾಲೂಕಿನ ಹಲವಷ್ಟು ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲೂ ಬೇಡಿಕೆಗೆ ತಕ್ಕಷ್ಟು ಲಸಿಕೆ ಪೂರೈಕೆಯಾಗುತ್ತಿಲ್ಲ. ಗ್ರಾಮೀಣ ಭಾಗದಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಲಸಿಕೆ ನೀಡಿದರೆ ಪಟ್ಟಣದ ಕೇಂದ್ರಕ್ಕೆ ಬರುವವರ ಸಂಖ್ಯೆಯೂ ಕಡಿಮೆಯಾಗುತ್ತದೆ. ಆದರೆ ಪ್ರಾಥಮಿಕ ಕೇಂದ್ರದಲ್ಲೇ ಲಸಿಕೆ ಲಭ್ಯವಿಲ್ಲ.

ಸೋಮವಾರಪೇಟೆ ಪಟ್ಟಣದ ಕೇಂದ್ರಕ್ಕೆ ದಿನವೊಂದಕ್ಕೆ ಕನಿಷ್ಟ ೩೫೦ ರಿಂದ ೪೦೦ ಡೋಸ್‌ಗಳು ಬೇಕಿದೆ. ಸಾರ್ವಜನಿಕರಿಂದ ಬೇಡಿಕೆ ಹೆಚ್ಚಿರುವಾಗಲೇ ಲಸಿಕೆ ಲಭ್ಯವಾಗುತ್ತಿಲ್ಲ. ಈಗ ೧೫೦ ಲಸಿಕೆಗಳು ಬಂದರೆ ೧೦೦ ಲಸಿಕೆಗಳನ್ನು ಎರಡನೇ ಡೋಸ್ ಆಗಿ ನೀಡಲಾಗುತ್ತಿದೆ. ಪ್ರಥಮ ಡೋಸ್‌ಗೆ ಕೇವಲ ೫೦ ಮಾತ್ರ ಉಳಿಕೆಯಾಗುತ್ತದೆ.

೧೮ ವರ್ಷ ಮೇಲ್ಪಟ್ಟ ಎಲ್ಲರೂ ಲಸಿಕೆ ಪಡೆಯಿರಿ ಎಂದು ಜನಪ್ರತಿನಿಧಿಗಳು ಹೇಳುತ್ತಿದ್ದಾರೆಯೇ ಹೊರತು;ಲಸಿಕೆಯನ್ನು ತರಿಸುವಲ್ಲಿ ಶ್ರಮ ಹಾಕುತ್ತಿಲ್ಲ ಎಂದು ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.

ಪ್ರಥಮ ಡೋಸ್ ಪಡೆಯುತ್ತಿರುವ ವರೊಂದಿಗೆ ದ್ವಿತೀಯ ಡೋಸ್‌ಗೆ ಸಮಯ ಮುಕ್ತಾಯಗೊಂಡಿರುವ ವರಿಗೂ ಲಸಿಕೆ ನೀಡಬೇಕಿದೆ. ಆದರೆ ಲಸಿಕೆ ಲಭ್ಯವಿಲ್ಲದ ಹಿನ್ನೆಲೆ ಸಿಬ್ಬಂದಿಗಳೂ ಕೈಚೆಲ್ಲಿ ಕುಳಿತಿದ್ದಾರೆ.

ಆರೋಗ್ಯ ಇಲಾಖಾಧಿಕಾರಿ ಗಳನ್ನು ಕೇಳಿದರೆ ಸರ್ಕಾರದತ್ತ ಬೊಟ್ಟು ಮಾಡುತ್ತಿದ್ದಾರೆ. ಅಲ್ಲಿಂದಲೇ ಲಸಿಕೆ ಬಂದಿಲ್ಲ; ಇನ್ನೆಲ್ಲಿಂದ ನೀಡೋದು? ಎಂಬ ಮರುಪ್ರಶ್ನೆ ಹಾಕುತ್ತಿದ್ದಾರೆ. ಜಿಲ್ಲೆಯ ಶಾಸಕರುಗಳು, ಉಸ್ತುವಾರಿ ಸಚಿವರು, ಜಿಲ್ಲಾಡಳಿತದ ಪ್ರಮುಖರು ಈ ಬಗ್ಗೆ ಗಂಭೀರವಾಗಿ ಪರಿಗಣಿಸಿ, ಮೂರನೇ ಅಲೆ ಅಪ್ಪಳಿಸುವ ಮುನ್ನವೇ ಎಲ್ಲರಿಗೂ ಲಸಿಕೆ ಲಭ್ಯವಾಗುವಂತೆ ಮಾಡಬೇಕಿದೆ. ಬಹುಮುಖ್ಯವಾಗಿ ಜಿಲ್ಲಾ ಆರೋಗ್ಯಾಧಿಕಾರಿಗಳ ಕಚೇರಿ ಚುರುಕುಗೊಳ್ಳಬೇಕಿದೆ.

- ಪ್ರಜ್ವಲ್ ಜಿ.ಆರ್., ಪಿ.ವಿ.ಪ್ರಭಾಕರ್,

ವಿಜಯ್ ಹಾನಗಲ್