ಮಡಿಕೇರಿ, ಜು. ೫: ರಾಜ್ಯದಲ್ಲಿ ಅನ್‌ಲಾಕ್-೩ ಘೋಷಣೆಯಾದರೂ ಕೊಡಗು ಜಿಲ್ಲೆಯಲ್ಲಿ ಕೊರೊನಾ ಪ್ರಕರಣಗಳಲ್ಲಿ ಏರಿಳಿತವಾಗುತ್ತಿರುವ ಕಾರಣ ಇತರ ಜಿಲ್ಲೆಗಳು ನಿಯಮಗಳನ್ನು ಸಡಿಲಿಸಿರುವಷ್ಟು ಪ್ರಮಾಣದಲ್ಲಿ ಕೊಡಗು ಜಿಲ್ಲೆಯಲ್ಲಿ ಸಡಿಲಿಕೆಯಾಗಿಲ್ಲ. ರಾಜ್ಯದಲ್ಲಿ ಶೇ.೧೦೦ ರಷ್ಟು ಪ್ರಯಾಣಿಕರನ್ನೊಳಗೊಂಡು ಬಸ್‌ಗಳು ಸಂಚರಿಸಬಹುದೆAಬ ನಿಯಮವಿದ್ದರೂ ಕೊಡಗು ಜಿಲ್ಲೆಯಲ್ಲಿ ಜಿಲ್ಲೆಯೊಳಗೆ ಮಾತ್ರ ಬಸ್ ಸಂಚಾರ ಕಂಡುಬರುತ್ತಿದೆ. ತಾ.೧೯ ರ ತನಕ ಅನ್‌ಲಾಕ್-೩ ಮಾರ್ಗಸೂಚಿ ಚಾಲ್ತಿಯಲ್ಲಿರುವ ತನಕವೂ ಬಸ್ ಮೂಲಕ ಹೊರಜಿಲ್ಲೆಗಳಿಗೆ ಪ್ರಯಾಣ ಅಸಾಧ್ಯವಾಗಿದೆ.
ಈ ಬಗ್ಗೆ ಪ್ರತಿಕ್ರಿಯಿಸಿದ ಕೆ.ಎಸ್.ಆರ್.ಟಿ.ಸಿ ಮಡಿಕೇರಿ ಘಟಕದ ವ್ಯವಸ್ಥಾಪಕಿ ಗೀತಾ ಅವರು ಹೊರ ಜಿಲ್ಲೆಗಳಿಗೆ ಯಾವುದೇ ಬಸ್ ಸಂಚರಿಸುವAತಿಲ್ಲ ಎಂದು ನಿರ್ದೇಶನ ಇದೆಯೇ ಹೊರತು ಈ ಬಗ್ಗೆ ಸರಕಾರದಿಂದ ಲಿಖಿತ ಮಾರ್ಗಸೂಚಿ ಬಿಡುಗಡೆಯಾಗಿಲ್ಲ. ಕೊಡಗಿನಲ್ಲಿ ಸಧ್ಯದ ಮಟ್ಟಿಗೆ ಕೇವಲ ಜಿಲ್ಲೆಯೊಳಗೆ ಬಸ್ ಸಂಚಾರಕ್ಕೆ ಅವಕಾಶವಿದೆ ಎಂದಿದ್ದಾರೆ.
ಅದಾಗ್ಯೂ ಬೆಳಿಗ್ಗೆ ೮:೩೦ ಕ್ಕೆ ಮಡಿಕೇರಿಯಿಂದ ಮಂಗಳೂರಿಗೆ ಒಂದು ಬಸ್ ಪ್ರತಿನಿತ್ಯ ಸಂಚರಿಸುತ್ತಿದೆ. ವಿಮಾನ ಸಂಚಾರಕ್ಕೆ ಯಾವುದೇ ನಿರ್ಬಂಧ ಇಲ್ಲದಿರುವ ಕಾರಣ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಪ್ರತಿನಿತ್ಯ ಮಡಿಕೇರಿಯಿಂದ ೨ ಬಸ್‌ಗಳು ಪ್ರಯಾಣಿಸುತ್ತಿವೆ. ಇವುಗಳನ್ನು ಹೊರತು ಪಡಿಸಿ ಉಳಿದೆಲ್ಲ ಬಸ್ ಸಂಚಾರ ಜಿಲ್ಲೆಯೊಳಗೆ ಮಾತ್ರ.
ಹಾಸನ ಮೂಲಕ ಸಂಚಾರ
ಕೊಡಗು ಜಿಲ್ಲೆ ಸಂಪೂರ್ಣ ಅನ್‌ಲಾಕ್ ಆಗದಿದ್ದರೂ ರಾಜ್ಯದ ಇತರೆಡೆಗಳಲ್ಲಿ ನಿಯಮ ಸಡಿಲಿಕೆಯಾಗಿರುವ ಕಾರಣ ಬಸ್ ಸಂಚಾರ ಸುಸೂತ್ರವಾಗಿ ನಡೆಯುತ್ತಿದೆ. ಮಂಗಳೂರು-ಬೆAಗಳೂರು ಬಸ್ ಮಾರ್ಗ ಸಾಧಾರಣವಾಗಿ ಕೊಡಗಿನ ಮೂಲಕವಾಗಿದ್ದರೂ ಇದೀಗ ಹಾಸನದ ಪರ್ಯಾಯ ಮಾರ್ಗದ ಮೂಲಕ ಬಸ್‌ಗಳು ಸಂಚರಿಸಬೇಕಾಗಿದೆ.