ಮಡಿಕೇರಿ, ಜು. ೫: ಲಾಕ್‌ಡೌನ್ ಸಂದರ್ಭದಲ್ಲಿ ಮನೆಯಲ್ಲೇ ಇರುವವರಿಗೆ ಕೊಡಗು ಜಿಲ್ಲಾ ಲೇಖಕ ಮತ್ತು ಕಲಾವಿದರ ಬಳಗದಿಂದ ಕೊಡಗಿನ ಲೇಖಕ ಮತ್ತು ಕಲಾವಿದರಿಗೆ ತಮ್ಮ ಪ್ರತಿಭೆಯ ಅನಾವರಣಗೊಳಿಸಲು ಅವಕಾಶ ಕಲ್ಪಿಸುವ ಸಲುವಾಗಿ ಗೂಗಲ್ ಮೀಟ್ ಮೂಲಕ ದಾಸರ ಪದಗಳ ಗಾಯನ ಕಾರ್ಯಕ್ರಮ ಏರ್ಪಡಿಸಲಾಗಿತ್ತು.

ತಾ. ೬ ರಂದು (ಇಂದು) ದಾಸ ಸಾಹಿತ್ಯದ ಮೇರು ಗಾಯಕ ಪುತ್ತೂರು ನರಸಿಂಹ ನಾಯಕ್ ಸಮಾರೋಪ ಕಾರ್ಯಕ್ರಮ ಉದ್ಘಾಟಿಸುವರು.

ಸಂಜೆ ೫ ರಿಂದ ೬.೩೦ರ ವರೆಗೆ ಈ ಕಾರ್ಯಕ್ರಮ ನಡೆಯಲಿದೆ. ೨೩ ಮಂದಿ ಗಾಯಕರು ಹಾಡಲಿದ್ದಾರೆ.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಳಗದ ಅಧ್ಯಕ್ಷ ಕೇಶವ ಕಾಮತ್ ಎಂ.ಪಿ. ವಹಿಸಲಿದ್ದಾರೆ. ಸಮಾರೋಪ ಭಾಷಣವನ್ನು ಬಳಗದ ಸಂಸ್ಥಾಪಕ ಅಧ್ಯಕ್ಷ ಬಿ.ಎ. ಶಂಷುದ್ದಿನ್ ಮಾಡಲಿದ್ದಾರೆ.

ಸಮಾರೋಪ ಕಾರ್ಯಕ್ರಮ ವೀಕ್ಷಿಸುವವರು ಈ ಕೆಳಗೆ ಸೂಚಿಸಿದ ಗೂಗಲ್ ಮೀಟ್ ಲಿಂಕ್ ಅನ್ನು ಒತ್ತುವ ಮೂಲಕ ಕಾರ್ಯಕ್ರಮ ವೀಕ್ಷಿಸಬಹುದು ಎಂದು ಬಳಗದ ಪ್ರದಾನ ಕಾರ್ಯದರ್ಶಿ ವಿಲ್ಫೆçಡ್ ಕ್ರಾಸ್ತಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಗೂಗಲ್ ಮೀಟ್ ಲಿಂಕ್: hಣಣಠಿs://meeಣ.googಟe.ಛಿom/ಠಿve-ivಣಜಿ-ರಿso