ಗೋಣಿಕೊಪ್ಪಲು, ಜು. ೪: ಗೋಣಿಕೊಪ್ಪಲುವಿನ ಹಿರಿಯ ವರ್ತಕ, ವಿನೋದ್ ಇಂಜಿನಿಯರಿAಗ್ ವರ್ಕ್ಸ್ನ ಮಾಲೀಕ ಕೆ.ರಾಮಚಾರ್ (೮೬) ಭಾನುವಾರ ರಾತ್ರಿ ನಿಧನರಾದರು. ಮೃತರು ಪತ್ನಿ, ಮಗನನ್ನು ಅಗಲಿದ್ದಾರೆ.

ಸಮಾಜ ಸೇವಕರಾಗಿ ಗುರುತಿಸಿಕೊಂಡಿದ್ದ ರಾಮಚಾರ್ ಗೋಣಿಕೊಪ್ಪಲುವಿನ ಶ್ರೀ ಕಾವೇರಿ ದಸರಾ ಸಮಿತಿ, ವೀರಾಜಪೇಟೆ ತಾಲೂಕು ವರ್ತಕರ ಬ್ಯಾಂಕ್‌ನ ಸ್ಥಾಪಕ ಸದಸ್ಯರಾಗಿದ್ದರು.

ಸಂತಾಪ: ಗೋಣಿಕೊಪ್ಪ ಚೇಂಬರ್ ಆಫ್ ಕಾಮರ್ಸ್ನ ಅಧ್ಯಕ್ಷ ಕಡೇಮಾಡ ಸುನೀಲ್ ಮಾದಪ್ಪ ಹಾಗೂ ಆಡಳಿತ ಮಂಡಳಿ ಸದಸ್ಯರು, ಕಾವೇರಿ ದಸರಾ ಸಮಿತಿಯ ಅಧ್ಯಕ್ಷರು ಹಾಗೂ ಆಡಳಿತ ಮಂಡಳಿ ಸಂತಾಪ ವ್ಯಕ್ತಪಡಿಸಿದೆ.