ಸೋಮವಾರಪೇಟೆ: ಕೊರೊನಾದಿಂದ ಮೃತಪಟ್ಟ ವ್ಯಕ್ತಿಯ ಅಂತ್ಯಸAಸ್ಕಾರಕ್ಕೆ ಸಂಬAಧಿಕರೇ ಹಿಂದೇಟು ಹಾಕಿದ ಸಂದರ್ಭ ಸೇವಾ ಭಾರತಿ ಸ್ವಯಂ ಸೇವಕರು ಮುಂದೆ ನಿಂತು ಅಂತ್ಯಸAಸ್ಕಾರ ಮಾಡಿದ ಸೇವೆ ಎಲ್ಲರಿಗೂ ಮಾದರಿ ಎಂದು ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಮೆಚ್ಚುಗೆ ವ್ಯಕ್ತಪಡಿಸಿದರು.

ತಾಲೂಕಿನ ಗರ್ವಾಲೆ ಗ್ರಾ.ಪಂ.ನಲ್ಲಿ ನಡೆದ, ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರು, ಸೀಲ್‌ಡೌನ್ ಕುಟುಂಬಗಳಿಗೆ ಕಿಟ್ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಸೇವಾ ಭಾರತಿಯೊಂದಿಗೆ ಮಾತೃಸಂಸ್ಥೆಯಾದ ಆರ್‌ಎಸ್‌ಎಸ್, ಹಿಂದೂ ಜಾಗರಣಾ ವೇದಿಕೆ, ಭಜರಂಗದಳ, ವಿಶ್ವಹಿಂದೂ ಪರಿಷತ್‌ನ ಕಾರ್ಯಕರ್ತರ ಸೇವೆಯನ್ನು ಸ್ಮರಿಸಿದರು.

ಸೇವಾ ಭಾರತಿಯ ಸ್ವಯಂ ಸೇವಕರು ಕುಟುಂಬ ಸದಸ್ಯರಂತೆ ನಿಂತು ಕೊರೊನಾದಿಂದ ಮೃತಪಟ್ಟವರ ಅಂತ್ಯಕ್ರಿಯೆ ನಡೆಸಿದ್ದಾರೆ. ಆಯಾ ಜಾತಿ, ಜನಾಂಗದ ಸಂಪ್ರದಾಯದAತೆ ಪೂಜೆ ಸಲ್ಲಿಸಿ ಪುಣ್ಯಕಾರ್ಯ ಮಾಡಿದ್ದಾರೆ. ಇಂತಹ ಸೇವಾಸಂಸ್ಕಾರ ಸಂಘಪರಿವಾರ ಹಾಗೂ ಭಾಜಪಾದಲ್ಲಿ ಕಾಣಲು ಸಾಧ್ಯವಾಗಿದೆ ಎಂದು ರಂಜನ್ ಹೇಳಿದರು.

ಕೊರೊನಾ ನಿಗ್ರಹದಲ್ಲಿ ಸಾರ್ವಜನಿಕರ ಸಹಭಾಗಿತ್ವ ಅವಶ್ಯ. ಸರ್ಕಾರ ರೂಪಿಸುವ ನಿಯಮಾವಳಿಗಳನ್ನು ಕಟ್ಟುನಿಟ್ಟಾಗಿ ಪಾಲಿಸುವ ಮೂಲಕ ಕೊರೊನಾ ಮುಕ್ತ ಕೊಡಗಿಗಾಗಿ ಕೈಜೋಡಿಸಬೇಕು. ೧೮ ವರ್ಷ ಮೇಲ್ಪಟ್ಟ ಎಲ್ಲರೂ ಕೋವಿಡ್ ನಿರೋಧಕ ಲಸಿಕೆ ಪಡೆಯಬೇಕು. ವೈಯಕ್ತಿಕ ಸ್ವಚ್ಛತೆಗೆ ಆದ್ಯತೆ ನೀಡಿ, ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು ಎಂದು ಶಾಸಕರು ಕಿವಿಮಾತು ಹೇಳಿದರು.

ಕಾರ್ಯಕ್ರಮದಲ್ಲಿ ಜಿ.ಪಂ. ಮಾಜೀ ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್, ತಾ.ಪಂ. ಮಾಜಿ ಉಪಾಧ್ಯಕ್ಷ ಅಭಿಮನ್ಯುಕುಮಾರ್, ಗ್ರಾ.ಪಂ. ಅಧ್ಯಕ್ಷ ನಂಜುAಡ, ಉಪಾಧ್ಯಕ್ಷೆ ನೇತ್ರಾ, ಪಿಡಿಓ ರಜಿನಿ ಅವರುಗಳು ಉಪಸ್ಥಿತರಿದ್ದರು.ಪೊನ್ನಂಪೇಟೆ: ಜನ ಜೀವನವನ್ನೇ ತಲ್ಲಣಗೊಳಿಸಿರುವ ಮಹಾಮಾರಿ ಕೋವಿಡ್ ಅನ್ನು ಪರಿಣಾಮಕಾರಿಯಾದ ಜಾಗೃತಿಯ ಮೂಲಕ ಪ್ರತಿರೋಧಿಸುವುದೇ ಇದೀಗ ಇರುವ ಮಾರ್ಗವಾಗಿದೆ. ಆದ್ದರಿಂದ ಕೋವಿಡ್ ಕುರಿತ ಜಾಗೃತಿ ಗ್ರಾಮೀಣ ಪ್ರದೇಶಗಳಲ್ಲಿ ಹೆಚ್ಚಾಗಿ ಆಗಬೇಕಿದೆ ಎಂದು ಶಾಸಕ ಕೆ.ಜಿ. ಬೋಪಯ್ಯ ಅವರು ಹೇಳಿದ್ದಾರೆ.

ಬಿಟ್ಟಂಗಾಲ ಸಮೀಪದ ವಿ. ಬಾಡಗದ ಬಿ.ಜೆ.ಪಿ. ಬೂತ್ ಸಮಿತಿಯ ವತಿಯಿಂದ ಅಲ್ಲಿನ ಶ್ರೀ ಮಹಾವಿಷ್ಣು ದೇವಾಲಯದ ಆವರಣದಲ್ಲಿ ಆಯೋಜಿಸಲಾಗಿದ್ದ ವಿವಿಧ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಈ ಸಾಂಕ್ರಾಮಿಕ ವೈರಾಣುವನ್ನು ಪ್ರತಿರೋಧಿಸಲು ಸರಕಾರ ಜಾರಿಗೆ ತಂದಿರುವ ಮಾನದಂಡಗಳನ್ನು ಪ್ರತಿಯೊಬ್ಬರು ಕಡ್ಡಾಯವಾಗಿ ಪಾಲಿಸಬೇಕಾಗಿದೆ. ಕೋವಿಡ್ ನಿಯಂತ್ರಣದ ಹೊಣೆಗಾರಿಕೆಯನ್ನು ಕೇವಲ ಸರ್ಕಾರ ಅಥವಾ ಜಿಲ್ಲಾಡಳಿತದ ಮೇಲೆ ಹೊರಿಸಿ ಕೈಕಟ್ಟಿ ಕುಳಿತು ಕೊಳ್ಳುವುದು ಸಾಧ್ಯವಿಲ್ಲ. ಈ ಕುರಿತು ಪ್ರತಿಯೊಬ್ಬ ನಾಗರಿಕರು ಜವಾಬ್ದಾರಿಯುತವಾಗಿ ವರ್ತಿಸಬೇಕಾಗಿದೆ ಎಂದು ಬೋಪಯ್ಯ ಅವರು ಕಿವಿಮಾತು ಹೇಳಿದರು.

ಪ್ರತಿಯೊಬ್ಬರಿಗೂ ಕೋವಿಡ್ ಲಸಿಕೆ ನೀಡಲು ಸರ್ಕಾರ ಬದ್ಧವಾಗಿದೆ. ಜಿಲ್ಲೆಗೆ ಅಗತ್ಯವಿರುವ ಲಸಿಕೆಗಳನ್ನು ಕೂಡಲೇ ತರಿಸಿಕೊಳ್ಳಲು ಈಗಾಗಲೇ ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ಲಸಿಕೆ ಬಂದ ಕೂಡಲೇ ಅದನ್ನು ಹಂತಹAತವಾಗಿ ಪ್ರತಿಯೊಬ್ಬರಿಗೂ ನೀಡಲಾಗುವುದು. ಕಾಲೇಜು ವಿದ್ಯಾರ್ಥಿಗಳಿಗೂ ಕೂಡ ಲಸಿಕೆ ನೀಡಲು ಈಗಾಗಲೇ ಯೋಜನೆ ರೂಪಿಸಲಾಗಿದೆ ಎಂದು ಕೆ.ಜಿ. ಬೋಪಯ್ಯ ಅವರು ತಿಳಿಸಿದರು. ಲಾಕ್ ಡೌನ್ ಸಂದರ್ಭದಲ್ಲಿ ಸಂಕಷ್ಟ ಎದುರಿಸುತ್ತಿರುವ ಗ್ರಾಮದ ಕೆಲವು ಅರ್ಹ ಫಲಾನುಭವಿಗಳಿಗೆ ಆಹಾರ ಸಾಮಗ್ರಿಗಳ ಕಿಟ್‌ಗಳನ್ನು ಶಾಸಕರು ಇದೇ ಸಂದರ್ಭದಲ್ಲಿ ವಿತರಿಸಿದರು.

ಇದಕ್ಕೂ ಮೊದಲು ನಡೆದ ಕಾರ್ಯಕ್ರಮದಲ್ಲಿ ಶ್ಯಾಮ್ ಪ್ರಸಾದ್ ಮುಖರ್ಜಿ ಅವರ ಸ್ಮರಣಾ ಕಾರ್ಯಕ್ರಮದ ಅಂಗವಾಗಿ ಮಹಾವಿಷ್ಣು ದೇವಸ್ಥಾನದ ಆವರಣದಲ್ಲಿ ತೆಂಗಿನ ಗಿಡಗಳನ್ನು ನೆಟ್ಟರು.

ಬಳಿಕ, ಕೇಂದ್ರ ಸರಕಾರದ ಜಲ ಜೀವನ್ ಮಿಷನ್ ಯೋಜನೆಯಡಿ ವಿ. ಬಾಡಗ ಗ್ರಾಮದಲ್ಲಿ ನಿರ್ಮಾಣವಾಗುತ್ತಿರುವ ಶುದ್ಧ ಕುಡಿಯುವ ನೀರಿನ ಯೋಜನೆಯ ಕಾಮಗಾರಿಯನ್ನು ಪರಿಶೀಲಿಸಿದ ಶಾಸಕ ಕೆ.ಜಿ. ಬೋಪಯ್ಯ ಅವರು, ಕಾಮಗಾರಿಯನ್ನು ಕೂಡಲೇ ಪೂರ್ಣಗೊಳಿಸಿ ಜನರ ಸೇವೆಗಾಗಿ ಇದನ್ನು ಕಾರ್ಯಾರಂಭಗೊಳಿಸಬೇಕು ಎಂದು ಸಂಬAಧಿಸಿದ ಇಂಜಿನಿಯರ್ ಅವರಿಗೆ ಸೂಚಿಸಿದರು.

ಶಾಸಕರು ಗ್ರಾಮಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ, ಇತ್ತೀಚಿಗೆ ಕೋವಿಡ್‌ಗೆ ತುತ್ತಾಗಿ ನಿಧನರಾದ ವಿ. ಬಾಡಗದ ಶ್ರೀ ಮಹಾವಿಷ್ಣು ದೇವಾಲಯದ ಅರ್ಚಕರಾಗಿದ್ದ ಜಯರಾಮ್ ಅವರ ಮನೆಗೆ ತೆರಳಿ ಮೃತರ ಕುಟುಂಬದವರಿಗೆ ಸಾಂತ್ವನ ಹೇಳಿದರು.

ಶಾಸಕರ ಭೇಟಿ ಸಂದರ್ಭದಲ್ಲಿ ಕರ್ನಾಟಕ ಪಶ್ಚಿಮಘಟ್ಟ ಸಂರಕ್ಷಣಾ ಕಾರ್ಯಪಡೆಯ ಅಧ್ಯಕ್ಷ ಶಾಂತೆಯAಡ ರವಿ ಕುಶಾಲಪ್ಪ, ಮಡಿಕೇರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ರಮೇಶ್ ಹೊಳ್ಳ ,ಕೊಡಗು ಜಿ. ಪಂ. ಮಾಜಿ ಉಪಾಧ್ಯಕ್ಷೆ ಕಂಜಿತAಡ ಅನಿತಾ ದೇವಯ್ಯ, ಬಿಟ್ಟಂಗಾಲ ಬಿಜೆಪಿ ಶಕ್ತಿ ಕೇಂದ್ರದ ಪ್ರಮುಖ್ ಎ.ಪಿ. ದಿನೇಶ್, ಸಹ ಪ್ರಮುಖ್ ಕುಪ್ಪಂಡ ದಿಲನ್ ಬೋಪಣ್ಣ, ವೀರಾಜಪೇಟೆ ಫೆಡರೇಶನ್ ನಿರ್ದೇಶಕರಾದ ಮುಲ್ಲೆಂಗಡ ಕುಟ್ಟಪ್ಪ, ಬಿಟ್ಟಂಗಾಲ ಗ್ರಾ.ಪಂ. ಸದಸ್ಯೆ ಅಮ್ಮೆಕಂಡ ಜನಿತ, ಗ್ರಾಮದ ಬಿಜೆಪಿಯ ಹಿರಿಯ ಪ್ರಮುಖರಾದ ನಂಬುಡುಮಾಡ ಮುದ್ದಪ್ಪ, ಕೊಂಗAಡ ಅರುಣ್ ಮೇದಪ್ಪ, ಕರ್ತಮಾಡ ರವಿ ಮೊಣ್ಣಪ್ಪ ಸೇರಿದಂತೆ ಮೊದಲಾದವರು ಉಪಸ್ಥಿತರಿದ್ದರು.ಪೊನ್ನಂಪೇಟೆ: ಜನ ಜೀವನವನ್ನೇ ತಲ್ಲಣಗೊಳಿಸಿರುವ ಮಹಾಮಾರಿ ಕೋವಿಡ್ ಅನ್ನು ಪರಿಣಾಮಕಾರಿಯಾದ ಜಾಗೃತಿಯ ಮೂಲಕ ಪ್ರತಿರೋಧಿಸುವುದೇ ಇದೀಗ ಇರುವ ಮಾರ್ಗವಾಗಿದೆ. ಆದ್ದರಿಂದ ಕೋವಿಡ್ ಕುರಿತ ಜಾಗೃತಿ ಗ್ರಾಮೀಣ ಪ್ರದೇಶಗಳಲ್ಲಿ ಹೆಚ್ಚಾಗಿ ಆಗಬೇಕಿದೆ ಎಂದು ಶಾಸಕ ಕೆ.ಜಿ. ಬೋಪಯ್ಯ ಅವರು ಹೇಳಿದ್ದಾರೆ.

ಬಿಟ್ಟಂಗಾಲ ಸಮೀಪದ ವಿ. ಬಾಡಗದ ಬಿ.ಜೆ.ಪಿ. ಬೂತ್ ಸಮಿತಿಯ ವತಿಯಿಂದ ಅಲ್ಲಿನ ಶ್ರೀ ಮಹಾವಿಷ್ಣು ದೇವಾಲಯದ ಆವರಣದಲ್ಲಿ ಆಯೋಜಿಸಲಾಗಿದ್ದ ವಿವಿಧ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಈ ಸಾಂಕ್ರಾಮಿಕ ವೈರಾಣುವನ್ನು ಪ್ರತಿರೋಧಿಸಲು ಸರಕಾರ ಜಾರಿಗೆ ತಂದಿರುವ ಮಾನದಂಡಗಳನ್ನು ಪ್ರತಿಯೊಬ್ಬರು ಕಡ್ಡಾಯವಾಗಿ ಪಾಲಿಸಬೇಕಾಗಿದೆ. ಕೋವಿಡ್ ನಿಯಂತ್ರಣದ ಹೊಣೆಗಾರಿಕೆಯನ್ನು ಕೇವಲ ಸರ್ಕಾರ ಅಥವಾ ಜಿಲ್ಲಾಡಳಿತದ ಮೇಲೆ ಹೊರಿಸಿ ಕೈಕಟ್ಟಿ ಕುಳಿತು ಕೊಳ್ಳುವುದು ಸಾಧ್ಯವಿಲ್ಲ. ಈ ಕುರಿತು ಪ್ರತಿಯೊಬ್ಬ ನಾಗರಿಕರು ಜವಾಬ್ದಾರಿಯುತವಾಗಿ ವರ್ತಿಸಬೇಕಾಗಿದೆ ಎಂದು ಬೋಪಯ್ಯ ಅವರು ಕಿವಿಮಾತು ಹೇಳಿದರು.

ಪ್ರತಿಯೊಬ್ಬರಿಗೂ ಕೋವಿಡ್ ಲಸಿಕೆ ನೀಡಲು ಸರ್ಕಾರ ಬದ್ಧವಾಗಿದೆ. ಜಿಲ್ಲೆಗೆ ಅಗತ್ಯವಿರುವ ಲಸಿಕೆಗಳನ್ನು ಕೂಡಲೇ ತರಿಸಿಕೊಳ್ಳಲು ಈಗಾಗಲೇ ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ಲಸಿಕೆ ಬಂದ ಕೂಡಲೇ ಅದನ್ನು ಹಂತಹAತವಾಗಿ ಪ್ರತಿಯೊಬ್ಬರಿಗೂ ನೀಡಲಾಗುವುದು. ಕಾಲೇಜು ವಿದ್ಯಾರ್ಥಿಗಳಿಗೂ ಕೂಡ ಲಸಿಕೆ ನೀಡಲು ಈಗಾಗಲೇ ಯೋಜನೆ ರೂಪಿಸಲಾಗಿದೆ ಎಂದು ಕೆ.ಜಿ. ಬೋಪಯ್ಯ ಅವರು ತಿಳಿಸಿದರು. ಲಾಕ್ ಡೌನ್ ಸಂದರ್ಭದಲ್ಲಿ ಸಂಕಷ್ಟ ಎದುರಿಸುತ್ತಿರುವ ಗ್ರಾಮದ ಕೆಲವು ಅರ್ಹ ಫಲಾನುಭವಿಗಳಿಗೆ ಆಹಾರ ಸಾಮಗ್ರಿಗಳ ಕಿಟ್‌ಗಳನ್ನು ಶಾಸಕರು ಇದೇ ಸಂದರ್ಭದಲ್ಲಿ ವಿತರಿಸಿದರು.

ಇದಕ್ಕೂ ಮೊದಲು ನಡೆದ ಕಾರ್ಯಕ್ರಮದಲ್ಲಿ ಶ್ಯಾಮ್ ಪ್ರಸಾದ್ ಮುಖರ್ಜಿ ಅವರ ಸ್ಮರಣಾ ಕಾರ್ಯಕ್ರಮದ ಅಂಗವಾಗಿ ಮಹಾವಿಷ್ಣು ದೇವಸ್ಥಾನದ ಆವರಣದಲ್ಲಿ ತೆಂಗಿನ ಗಿಡಗಳನ್ನು ನೆಟ್ಟರು.

ಬಳಿಕ, ಕೇಂದ್ರ ಸರಕಾರದ ಜಲ ಜೀವನ್ ಮಿಷನ್ ಯೋಜನೆಯಡಿ ವಿ. ಬಾಡಗ ಗ್ರಾಮದಲ್ಲಿ ನಿರ್ಮಾಣವಾಗುತ್ತಿರುವ ಶುದ್ಧ ಕುಡಿಯುವ ನೀರಿನ ಯೋಜನೆಯ ಕಾಮಗಾರಿಯನ್ನು ಪರಿಶೀಲಿಸಿದ ಶಾಸಕ ಕೆ.ಜಿ. ಬೋಪಯ್ಯ ಅವರು, ಕಾಮಗಾರಿಯನ್ನು ಕೂಡಲೇ ಪೂರ್ಣಗೊಳಿಸಿ ಜನರ ಸೇವೆಗಾಗಿ ಇದನ್ನು ಕಾರ್ಯಾರಂಭಗೊಳಿಸಬೇಕು ಎಂದು ಸಂಬAಧಿಸಿದ ಇಂಜಿನಿಯರ್ ಅವರಿಗೆ ಸೂಚಿಸಿದರು.

ಶಾಸಕರು ಗ್ರಾಮಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ, ಇತ್ತೀಚಿಗೆ ಕೋವಿಡ್‌ಗೆ ತುತ್ತಾಗಿ ನಿಧನರಾದ ವಿ. ಬಾಡಗದ ಶ್ರೀ ಮಹಾವಿಷ್ಣು ದೇವಾಲಯದ ಅರ್ಚಕರಾಗಿದ್ದ ಜಯರಾಮ್ ಅವರ ಮನೆಗೆ ತೆರಳಿ ಮೃತರ ಕುಟುಂಬದವರಿಗೆ ಸಾಂತ್ವನ ಹೇಳಿದರು.

ಶಾಸಕರ ಭೇಟಿ ಸಂದರ್ಭದಲ್ಲಿ ಕರ್ನಾಟಕ ಪಶ್ಚಿಮಘಟ್ಟ ಸಂರಕ್ಷಣಾ ಕಾರ್ಯಪಡೆಯ ಅಧ್ಯಕ್ಷ ಶಾಂತೆಯAಡ ರವಿ ಕುಶಾಲಪ್ಪ, ಮಡಿಕೇರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ರಮೇಶ್ ಹೊಳ್ಳ ,ಕೊಡಗು ಜಿ. ಪಂ. ಮಾಜಿ ಉಪಾಧ್ಯಕ್ಷೆ ಕಂಜಿತAಡ ಅನಿತಾ ದೇವಯ್ಯ, ಬಿಟ್ಟಂಗಾಲ ಬಿಜೆಪಿ ಶಕ್ತಿ ಕೇಂದ್ರದ ಪ್ರಮುಖ್ ಎ.ಪಿ. ದಿನೇಶ್, ಸಹ ಪ್ರಮುಖ್ ಕುಪ್ಪಂಡ ದಿಲನ್ ಬೋಪಣ್ಣ, ವೀರಾಜಪೇಟೆ ಫೆಡರೇಶನ್ ನಿರ್ದೇಶಕರಾದ ಮುಲ್ಲೆಂಗಡ ಕುಟ್ಟಪ್ಪ, ಬಿಟ್ಟಂಗಾಲ ಗ್ರಾ.ಪಂ. ಸದಸ್ಯೆ ಅಮ್ಮೆಕಂಡ ಜನಿತ, ಗ್ರಾಮದ ಬಿಜೆಪಿಯ ಹಿರಿಯ ಪ್ರಮುಖರಾದ ನಂಬುಡುಮಾಡ ಮುದ್ದಪ್ಪ, ಕೊಂಗAಡ ಅರುಣ್ ಮೇದಪ್ಪ, ಕರ್ತಮಾಡ ರವಿ ಮೊಣ್ಣಪ್ಪ ಸೇರಿದಂತೆ ಮೊದಲಾದವರು ಉಪಸ್ಥಿತರಿದ್ದರು.ಸುಂಟಿಕೊಪ್ಪ: ಬೆಂಗಳೂರಿನ ಸಿಸ್ಕೋ ಕಂಪೆನಿಯ ಸಹಭಾಗಿತ್ವದಲ್ಲಿ ಬೆಂಗಳೂರಿನ ಜಾಗೃತಿ ಟ್ರಸ್ಟ್ ವತಿಯಿಂದ ಶನಿವಾರ ಕೆದಕಲ್, ಮುಕ್ಕೋಡ್ಲು, ಹಟ್ಟಿಹೊಳೆ, ಗರ್ವಾಲೆ, ಸೂರ್ಲಬ್ಬಿ, ಮಾದಾಪುರ, ಹರದೂರು, ಕಾನ್ ಬೈಲ್, ೭ನೇ ಹೊಸಕೋಟೆ, ಕಂಬಿಬಾಣೆ ಹಾಗೂ ಕೊಡಗರಹಳ್ಳಿ ವ್ಯಾಪ್ತಿಯ ಆಶಾ ಕಾರ್ಯಕರ್ತೆಯರಿಗೆ ಆಹಾರ ಕಿಟ್ ಮತ್ತು ಕೊಡೆಗಳನ್ನು ವಿತರಿಸಲಾಯಿತು.

ಜಾಗೃತಿ ಟ್ರಸ್ಟಿನ ಶಿವಪ್ರಸಾದ್ (ಶರಣ್) ಮಾತನಾಡಿ, ಕೋವಿಡ್ ಸಂದರ್ಭದಲ್ಲಿ ಆಶಾ ಕಾರ್ಯಕರ್ತರು ತಮ್ಮ ಜೀವದ ಹಂಗನ್ನು ತೊರೆದು ಸುದೀರ್ಘ ಸೇವೆಯಲ್ಲಿ ತೊಡಗಿರುವುದು ಶ್ಲಾಘನೀಯ. ನಿಮ್ಮ ಸೇವೆಯನ್ನು ನೆನೆಸಿಕೊಳ್ಳುವುದಕ್ಕೂ ಸಾದ್ಯವಾಗುವುದಿಲ್ಲ. ಆ ನಿಟ್ಟಿನಲ್ಲಿ ನಮ್ಮ ಸಂಸ್ಥೆಯ ವತಿಯಿಂದ ಈ ವಸ್ತುಗಳನ್ನು ನೀಡುತ್ತಿದ್ದೇವೆ ಎಂದರು.

ಬೆAಗಳೂರು ಸಿಸ್ಕೋ ಸಂಸ್ಥೆಯ ಬಾನಂಡ ಸಂಪತ್, ಪ್ರೇಮ್, ಶರತ್, ಶಿವು, ಕೆದಕಲ್ ಗಾಮ ಪಂಚಾಯಿತಿ ಪಿಡಿಓ ರಾಜಶೇಖರ್, ೭ನೇ ಹೊಕೋಟೆ ಗ್ರಾ.ಪಂ. ಕಾರ್ಯದರ್ಶಿ ಸುನೀತ, ಕಂಬಿಬಾಣೆ ಗ್ರಾ.ಪಂ. ಅಧ್ಯಕ್ಷೆ ಮಧು ನಾಗಪ್ಪ, ಪಿಡಿಓ ಮಧುಮತಿ, ಕೊಡಗರಹಳ್ಳಿ ಗ್ರಾ.ಪಂ. ಪಿಡಿಓ ಧನ್ಯ, ಸಿಬ್ಬಂದಿ ಧನಂಜಯ, ಹರದೂರು ಗ್ರಾ.ಪಂ. ಅಧ್ಯಕ್ಷ ಪದ್ಮನಾಭ, ಮಾದಾಪುರ ಗ್ರಾ.ಪಂ. ಪಿಡಿಓ ಪೂರ್ಣ ಕುಮಾರ್ ಸೇರಿದಂತೆ ಇತರರು ಇದ್ದರು.ಮಡಿಕೇರಿ: ಕೋವಿಡ್‌ನಿಂದ ಸಂಕಷ್ಟಕ್ಕೀಡಾದ ಮಡಿಕೇರಿಯ ಮಲ್ಲಿಕಾರ್ಜುನ ನಗರದ ೨೦ ಕುಟುಂಬಗಳಿಗೆ ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಮಿತಿ ವತಿಯಿಂದ ಆಹಾರ ಕಿಟ್ ವಿತರಿಸಲಾಯಿತು.

ದ.ಸಂ.ಸ. ಜಿಲ್ಲಾ ಸಂಚಾಲಕ ದಿವಾಕರ್ ಹೆಚ್.ಎಲ್., ತಾಲೂಕು ಸಂಚಾಲಕ ದೀಪಕ್ ಎ.ಪಿ. ಮಾತನಾಡಿ, ಸಂಕಷ್ಟದಲ್ಲಿರುವ ಜನರ ಕಷ್ಟಸುಖಗಳಲ್ಲಿ ಭಾಗಿಯಾಗುವ ಸಲುವಾಗಿ ಆಹಾರ ಕಿಟ್ ವಿತರಿಸುತ್ತಿದ್ದೇವೆ ಎಂದರು. ಸಂಘಟನೆಯ ಕಾರ್ಯಕರ್ತರು ಹಾಜರಿದ್ದರು.ಗೋಣಿಕೊಪ್ಪ ವರದಿ: ಸ್ವಯಂ ಪ್ರೇರಣ ಬಳಗದ ವತಿಯಿಂದ ಪಾಲಿಬೆಟ್ಟ ಚೆಷೈರ್ ಹೋಂ ವಿಶೇಷಚೇತನ ಮಕ್ಕಳ ಶಾಲೆಯ ವಿದ್ಯಾರ್ಥಿಗಳಿಗೆ ಆಹಾರ ಕಿಟ್ ವಿತರಿಸಲಾಯಿತು. ವೀರಾಜಪೇಟೆ ತಹಶೀಲ್ದಾರ್ ಆರ್. ಯೋಗಾನಂದ ಅವರು ವಿತರಣೆ ಮಾಡಿದರು. ವಿದ್ಯಾರ್ಥಿಗಳ ಪಾಲಕರು ಕಿಟ್ ಸ್ವೀಕರಿಸಿದರು.

ಸ್ವಯಂ ಪ್ರೇರಣ ಬಳಗದ ಅಧ್ಯಕ್ಷೆ ಕೊಣಿಯಂಡ ಕಾವ್ಯ ಸಂಜು, ಉಪಾಧ್ಯಕ್ಷೆ ಲತಾ ಪೂಣಚ್ಚ, ಕಾರ್ಯದರ್ಶಿ ಮೀನಾ ಗಣಪತಿ, ಪಾಲಿಬೆಟ್ಟ ಚೆಷೈರ್ ಹೋಂ ಅಂಗವಿಕಲ ಮಕ್ಕಳ ಶಾಲೆಯ ಆಡಳಿತ ಮಂಡಳಿ ಅಧ್ಯಕ್ಷೆ ಗೀತಾ ಚೆಂಗಪ್ಪ, ಪದಾಧಿಕಾರಿಯಾದ ಪುನಿತ ರಾಮಸ್ವಾಮಿ, ಡಾ. ಎ.ಸಿ. ಗಣಪತಿ, ಮುಖ್ಯ ಶಿಕ್ಷಕ ಶಿವರಾಜ್ ಇದ್ದರು.ಸಿದ್ದಾಪುರ: ಮಾಲ್ದಾರೆ ಗ್ರಾ.ಪಂ. ವ್ಯಾಪ್ತಿಯಲ್ಲಿ ಮಾಲ್ದಾರೆ ವಲಯ ಕಾಂಗ್ರೆಸ್ ವತಿಯಿಂದ ಕೊರೊನಾ ವಾರಿಯರ್ಸ್ಗೆ ಆಹಾರ ದಾನದ್ಯದ ಕಿಟ್ ವಿತರಿಸಿ ಮಾತನಾಡಿದ ಕಾಂಗ್ರೆಸ್ ರಾಜ್ಯ ಕಾನೂನು ಘಟಕದ ಅಧ್ಯಕ್ಷ ಎ.ಎಸ್ ಪೊನ್ನಣ್ಣ ಅವರು, ಜಿಲ್ಲೆಯ ಜಿಲ್ಲಾಧಿಕಾರಿಗಳು ಸೇರಿದಂತೆ ಜಿಲ್ಲಾ ಆಡಳಿತದ ಅಧಿಕಾರಿಗಳು ಉತ್ತಮ ರೀತಿಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಆದರೆ ಅವರಿಗೆ ಸ್ವತಂತ್ರö್ಯವಾಗಿ ಕೆಲಸ ನಿರ್ವಹಿಸಲು ಜನಪ್ರತಿನಿಧಿಗಳು ಬಿಡುತ್ತಿಲ್ಲ. ಇದರಿಂದಾಗಿ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ರಾಜ್ಯ ಕಾಂಗ್ರೆಸ್ ಸೂಚನೆ ಮೇರೆಗೆ ಸೋಂಕಿತರನ್ನು ತುರ್ತಾರಿ ಕರೆದುಕೊಂಡು ಹೋಗಲು ಪಕ್ಷದ ವತಿಯಿಂದ ೪೮೦ ತುರ್ತು ಚಿಕಿತ್ಸಾ ವಾಹನ ಕಲ್ಪಿಸಲಾಗಿದೆ ಎಂದು ಮಾಹಿತಿ ನೀಡಿದರು. ಪಕ್ಷವು ಕೋವಿಡ್-೧೯ ರ ಸಮಯದಲ್ಲಿ ಜನಸೇವೆಯಲ್ಲಿ ತೊಡಗಿಸಿಕೊಂಡಿದೆ ಎಂದರು. ಈಲ್ಲೆಯಲ್ಲಿ ಸುಸಜ್ಜಿತ ಆಸ್ಪತ್ರೆಯನ್ನು ಕಲ್ಪಿಸುವುದಾಗಿ ಸಂಸದ ಪ್ರತಾಪ್ ಸಿಂಹ ಕಳೆದ ಐದು ವರ್ಷಗಳ ಹಿಂದೆ ಭರವಸೆಯನ್ನು ನೀಡಿದ್ದರು. ಆದರೆ ಈವರೆಗೂ ಸುಸಜ್ಜಿತ ಆಸ್ಪತ್ರೆ ನಿರ್ಮಾಣವಾಗಿಲ್ಲ ಎಂದರು. ಮಾಲ್ದಾರೆ ವಲಯ ಕಾಂಗ್ರೆಸ್ ಅಧ್ಯಕ್ಷ ಸಜಿ ಥೋಮಸ್ ಮಾತನಾಡಿ, ಮಾಲ್ದಾರೆ ವ್ಯಾಪ್ತಿಯಲ್ಲಿ ಬಡ ಕೂಲಿ ಕಾರ್ಮಿಕರು ಅಧಿಕವಾಗಿದ್ದು, ಈ ಮಂದಿಗೆ ಸಮರ್ಪಕವಾಗಿ ಲಸಿಕೆ ಲಭಿಸಿರುವುದಿಲ್ಲ. ಜನಸಾಮಾನ್ಯರು ಲಸಿಕೆಗಾಗಿ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಕೂಡಲೇ ಜಿಲ್ಲಾಡಳಿತ ಜನಸಾಮಾನ್ಯರಿಗೆ ಲಸಿಕೆ ಒದಗಿಸಬೇಕೆಂದು ಒತ್ತಾಯಿಸಿದರು.

ಈ ಸಂದರ್ಭ ವಲಯ ಕಾಂಗ್ರೆಸ್ ವತಿಯಿಂದ ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತರಿಗೆ ಅಗತ್ಯ ಆಹಾರ ಕಿಟ್ ವಿತರಿಸಿದರು. ಮಾಲ್ದಾರೆಯ ಜನಪರ ಸಂಘಟನೆಗೆ ಎ.ಎಸ್. ಪೊನ್ನಣ್ಣ ಅವರು, ಸ್ಯಾನಿಟೈಸರ್ ಸಿಂಪಡಿಸುವ ಯಂತ್ರ ಹಾಗೂ ಔಷಧಿಯನ್ನು ನೀಡಿದರು. ಕಾರ್ಯಕ್ರಮದಲ್ಲಿ ವೀರಾಜಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಟ್ಟಡ ರಂಜಿ ಪೂಣಚ್ಚ, ಕಿಸಾನ್ ಘಟಕದ ರಾಜ್ಯ ಕಾರ್ಯದರ್ಶಿ ಗೋಪಾಲಕೃಷ್ಣ, ಪ್ರಮುಖರಾದ ಟಾಟು ಮೊಣ್ಣಪ್ಪ, ಡಿ.ಪಿ. ರಾಜೇಶ್, ಸತೀಶ್ ಕುಮಾರ್, ಬಾವ ಮಾಲ್ದಾರೆ, ಮಹಮ್ಮದ್ ಆಲಿ, ಗ್ರಾ.ಪಂ. ಉಪಾಧ್ಯಕ್ಷೆ ಶೈಲ, ಸದಸ್ಯರಾದ ಕಿರಣ್ ಇನ್ನಿತರರು ಇದ್ದರು.