ಮಡಿಕೇರಿ, ಜು. ೪: ಪ್ರಸಕ್ತ ಶೈಕ್ಷಣಿಕ ಸಾಲಿನಿಂದ ಪದವಿಮಟ್ಟದಲ್ಲಿ ಆಯ್ಕೆ ಭಾಷೆಯಾಗಿ ಕೊಡವ ಭಾಷೆಯನ್ನು ಮಂಗಳೂರು ವಿಶ್ವ ವಿದ್ಯಾನಿಲಯದಲ್ಲಿ ಅಳವಡಿಸುವುದರಿಂದ ಕೊಡವ ಭಾಷೆಯ ಪಠ್ಯಕ್ರಮ ತಯಾರಿ ಸಭೆಯು ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷೆ ಡಾ. ಅಮ್ಮಾಟಂಡ ಪಾರ್ವತಿ ಅಪ್ಪಯ್ಯ ಅವರ ಅಧ್ಯಕ್ಷತೆಯಲ್ಲಿ ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯ ಕಚೇರಿಯಲ್ಲಿ ನಡೆಯಿತು.

ಸಮಿತಿ ಸದಸ್ಯರಾದ ಬಾಚರಣಿಯಂಡ ಪಿ. ಅಪ್ಪಣ್ಣ, ಬಾಚರಣಿಯಂಡ ರಾಣು ಅಪ್ಪಣ್ಣ, ಡಾ. ಉಳ್ಳಿಯಡ ಎಂ. ಪೂವಯ್ಯ, ಮುಲ್ಲೇಂಗಡ ಮಧೋಶ್ ಪೂವಯ್ಯ, ನಾಗೇಶ್ ಕಾಲೂರು ಮತ್ತು ಡಾ. ಮುಲ್ಲೇಂಗಡ ರೇವತಿ ಪೂವಯ್ಯ ಇವರುಗಳು ಸೇರಿ ಎಲ್ಲ ಪದವಿ ಮಟ್ಟದ ಎಲ್ಲಾ ಮೊದಲ ಸೆಮಿಸ್ಟರ್ ತರಗತಿಗಳಿಗೆ ಪಠ್ಯಕ್ರಮವನ್ನು ತಯಾರು ಮಾಡಿದರು.