್ಡಪ್ರಸಕ್ತ ವರ್ಷ ಬಹುತೇಕ ಹಲಸು - ಮಾವು ಸೇರಿದಂತೆ ವಿವಿಧ ಬಗೆಯ ಹಣ್ಣು - ಹಂಪಲುಗಳು ಹೇರಳವಾಗಿದೆ.
್ಡಕಾಫಿ ತೋಟಗಳ ನಡುವೆ ಬಾಳೆ ಕೃಷಿ ಇರುವದು ಆನೆಗಳು ಕಾಫಿ ತೋಟಕ್ಕೆ ದಾಳಿಯಿಡಲು ಮತ್ತೂ ಒಂದು ಕಾರಣವಾಗಿದೆ.
್ಡಲಾಕ್ಡೌನ್ ಪರಿಸ್ಥಿತಿಯಿಂದ ಎಲ್ಲೆಡೆ ನಿಶ್ಯಬ್ಧದ ಸನ್ನಿವೇಶ ಇರುವದು ವನ್ಯಜೀವಿಗಳ ಸ್ವಚ್ಛಂದ ಓಡಾಟಕ್ಕೆ ಪೂರಕವಾಗಿದೆ.
್ಡಕಂದಾಯ ಗ್ರಾಮಗಳ ನಡುವಿನ ದೇವರಕಾಡುಗಳು, ಪಾಳುಬಿದ್ದ ಗದ್ದೆಗಳು, ನಿರ್ವಹಣೆ ಇಲ್ಲದ ತೋಟಗಳು, ಪ್ರಾಣಿಗಳು ಸೇರಿಕೊಳ್ಳಲು ಅವಕಾಶವಾದಂತಿವೆ.
್ಡಒಮ್ಮೆ ಅರಣ್ಯದಿಂದ ಹೊರಬಂದ ಪ್ರಾಣಿಗಳು ಮತ್ತೆ ಅರಣ್ಯ ಸೇರುತ್ತಿಲ್ಲ.
(ಮೊದಲ ಪುಟದಿಂದ)
್ಡಆನೆಗಳನ್ನು ಕಾಡಿಗಟ್ಟಲು ಅಗತ್ಯ ಸಹಕಾರವನ್ನು ಅರಣ್ಯ ಇಲಾಖೆಗೆ ಜನರೂ ನೀಡಬೇಕಿದೆ.
್ಡತೋಟ ಹಾನಿಗೀಡಾಗಲಿದೆ ಎಂದು ಒಂದು ತೋಟದವರು ಇನ್ನೊಂದು ತೋಟದ ಮೂಲಕ ಆನೆಗಳನ್ನು ಓಡಿಸಲು ಜನರು ಬಿಡುತ್ತಿಲ್ಲ.
್ಡಅರಣ್ಯ ಇಲಾಖಾ ಸಿಬ್ಬಂದಿಗಳಿಗೆ ಸೂಕ್ತ ವಾಹನ - ಸಾಮಗ್ರಿಯ ಅಗತ್ಯತೆಯೂ ಸಿಗುತ್ತಿಲ್ಲ.
್ಡಆನೆ ಕಂದಕ - ಸೋಲಾರ್ ಬೇಲಿಗಳ ನಿರ್ವಹಣೆ ಇನ್ನಷ್ಟು ಪರಿಣಾಮಕಾರಿಯಾಗಬೇಕಿದೆ.
್ಡಅರಣ್ಯದೊಳಗಿರುವ ಹಾಡಿಯ ಜನತೆಯಿಂದಲೂ ಇಲಾಖೆಗೆ ಅಗತ್ಯ ಸಹಕಾರಬೇಕಿದೆ.
್ಡಸದ್ಯದ ಪರಿಸ್ಥಿತಿಯಲ್ಲಿ ಆನೆಗಳ ಸಂತತಿ ನಿಯಂತ್ರಣಕ್ಕೆ ತಾತ್ಕಾಲಿಕವಾಗಿ ಸಂತಾನ ಹರಣ ಕ್ರಮದ ಅಗತ್ಯವೂ ಇದೆ ಎಂಬದೂ ಕೆಲವರ ಅಭಿಪ್ರಾಯವಾಗಿದೆ.
್ಡವನ್ಯಪ್ರಾಣಿಗಳ ಹಾವಳಿ ನಿಯಂತ್ರಣಕ್ಕೆAದೇ ಪ್ರತ್ಯೇಕ ಘಟಕವೊಂದನ್ನು ಅರಣ್ಯ ಇಲಾಖೆ ರಚಿಸಬೇಕಾಗಿದೆ.