ಮಡಿಕೇರಿ, ಜು. ೪: ಕೊಡಗು ಜಿಲ್ಲೆಯಲ್ಲಿ ಕೋವಿಡ್ ಪಾಸಿಟಿವಿಟಿ ರೇಟ್ ಕಡಿಮೆಯಾಗದ ಹಿನ್ನೆಲೆ ಕೆಲ ಸಡಿಲಿಕೆ ಯೊಂದಿಗೆ ಲಾಕ್‌ಡೌನ್ ಜು. ೧೯ರ ವರೆಗೆ ಮುಂದುವರೆಸಲಾಗಿದೆ.

ಈ ಹಿಂದೆ ವಾರದ ಮೂರು ದಿನ ಬೆಳಿಗ್ಗೆ ೬ ರಿಂದ ಮಧ್ಯಾಹ್ನ ೧ ಗಂಟೆಯವರೆಗೆ ಅಗತ್ಯ ಸಾಮಗ್ರಿ ಖರೀದಿಗೆ ಅವಕಾಶ ನೀಡಲಾಗಿತ್ತು. ಇದೀಗ ಸೋಮವಾರದಿಂದ ಶುಕ್ರವಾರದವರೆಗೆ ಬೆಳಿಗ್ಗೆ ೬ ರಿಂದ ೨ ಗಂಟೆಯವರೆಗೆ ಅಗತ್ಯ ಸಾಮಗ್ರಿ ಖರೀದಿಗೆ ಸಮಯ ವಿಸ್ತರಿಸಿ ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಆದೇಶ ಹೊರಡಿಸಿದ್ದಾರೆ.

ಕಂಟೈನ್‌ಮೆAಟ್ ವಲಯದಲ್ಲಿ ಯಾವುದೇ ಚಟುವಟಿಕೆ ನಡೆಸಲು ಅವಕಾಶವಿಲ್ಲ. ಅತ್ಯವಶ್ಯಕ ಸೇವೆಗಳಡಿ ಬರುವ ತರಕಾರಿ, ಹಣ್ಣು-ಹಂಪಲು, ದಿನಸಿ, ಕೃಷಿಗೆ ಸಂಬAಧಿಸಿದ ಅಂಗಡಿ ಮಳಿಗೆ ಮತ್ತು ದಾಸ್ತಾನು ಕೇಂದ್ರಗಳು, ಮೀನು ಮತ್ತು ಮಾಂಸದ ಮಳಿಗೆಗಳನ್ನು, ಹಾಪ್‌ಕಾಮ್ಸ್ ಮಳಿಗೆಗಳನ್ನು ಸೋಮವಾರದಿಂದ ಶುಕ್ರವಾರದವರೆಗೆ ಬೆಳಿಗ್ಗೆ ೬ ಗಂಟೆಯಿAದ ಮಧ್ಯಾಹ್ನ ೨ ಗಂಟೆಯವರೆಗೆ ಮಾತ್ರ ತೆರೆಯಲು ಅನುಮತಿ ನೀಡಲಾಗಿದೆ.

ರಸಗೊಬ್ಬರ ಸಾಗಾಟಕ್ಕೆ ವಿನಾಯಿತಿ

ಕೃಷಿ ಪರಿಕರವಾದ ರಸಗೊಬ್ಬರವನ್ನು ರೈತರು ಈಗಾಗಲೇ ನಿಗದಿಪಡಿಸಿರುವ ದಿನಗಳಲ್ಲಿ ರಸೀದಿ ಪಡೆದು ಖರೀದಿಸಲು ಹಾಗೂ ಖರೀದಿಸಿದ ಸ್ಥಳದಿಂದ ರೈತರ ಕೃಷಿ ಚಟುವಟಿಕೆಯ ಸ್ಥಳಕ್ಕೆ ಅದೇ ದಿನದಂದು ಸಾಗಿಸಲು ಅವಕಾಶ ಕಲ್ಪಿಸಲಾಗಿದೆ. ಸಾಗಾಣಿಕೆ ಸಮಯ ದಲ್ಲಿ ಅಧಿಕೃತ ರಶೀದಿಯನ್ನು ಹೊಂದಿರ ಬೇಕಾಗುತ್ತದೆ.

(ಮೊದಲ ಪುಟದಿಂದ) ಜಿಲ್ಲೆಯ ಸಾರ್ವಜನಿಕರಿಗೆ ಮಳೆಗಾಲಕ್ಕೆ ಮತ್ತು ಕೃಷಿ ಚಟುವಟಿಕೆಗಳಿಗೆ ಅಗತ್ಯವಿರುವ ರೈನ್ಕೋಟ್, ಛತ್ರಿ, ಟಾರ್ಪಲ್‌ಗಳು, ಬಟ್ಟೆಬರೆ, ಚಪ್ಪಲಿ, ಗಂಬೂಟು ಮುಂತಾದ ವಸ್ತುಗಳ ಅವಶ್ಯಕತೆ ಇರುವುದರಿಂದ ಇಂತಹ ವಸ್ತುಗಳ ಮಾರಾಟ ಮಳಿಗೆಯನ್ನು ತೆರೆಯಲು ನಿಗದಿತ ಸಮಯದಲ್ಲಿ ಮಾತ್ರ ಅವಕಾಶ ಕಲ್ಪಿಸಿದೆ.

ತುರ್ತು ಸೇವೆ ೨೪x೭

ಪಡಿತರ ನ್ಯಾಯಬೆಲೆ ಮಳಿಗೆಗಳು ಸೋಮವಾರದಿಂದ ಶುಕ್ರವಾರದವರೆಗೆ ಮಾತ್ರ ತೆರೆಯಲು ಅನುಮತಿಸಿದೆ. ಸ್ಟಾಂಡ್ ಅಲೋನ್ ಹಾಲಿನ ಬೂತ್‌ಗಳು, ದಿನಪತ್ರಿಕೆಗಳ ಸೆಗ್ರಿಗೇಷನ್ ಮತ್ತು ವಿತರಣೆಗೆ ಪ್ರತಿದಿನ ಬೆಳಿಗ್ಗೆ ೬ ಗಂಟೆಯಿAದ ಮಧ್ಯಾಹ್ನ ೨ ಗಂಟೆಯವರೆಗೆ ಅನುಮತಿಸಿದೆ. ಆಸ್ಪತ್ರೆ, ಔಷಧಾಲಯ, ವೈದ್ಯಕೀಯ ಸೇವೆಗಳು, ಪೆಟ್ರೋಲ್ ಬಂಕ್‌ಗಳು, ಎಲ್.ಪಿ.ಜಿ ಕೇಂದ್ರಗಳ ೨೪ಘಿ೭ ಕಾರ್ಯಚಟುವಟಿಕೆಗೆ ಅನುಮತಿಸಲಾಗಿದೆ.

ಪಾರ್ಸಲ್ ಸೇವೆ

ಹೊಟೇಲ್, ರೆಸ್ಟೋರೆಂಟ್‌ಗಳಿAದ ಆಹಾರವನ್ನು ಟೇಕ್ ಅವೆ (ಪಾರ್ಸಲ್) ರೂಪದಲ್ಲಿ ಸೋಮವಾರದಿಂದ ಶುಕ್ರವಾರದವರೆಗೆ ಬೆಳಿಗ್ಗೆ ೬ ಗಂಟೆಯಿAದ ಮಧ್ಯಾಹ್ನ ೨ ಗಂಟೆಯವರೆಗೆ ಪಡೆಯಲು ಅನುಮತಿಸಿದೆ. ಹಾಗೆಯೇ ಹೊಟೇಲ್, ರೆಸ್ಟೋರೆಂಟ್‌ಗಳಿAದ ಹೋಮ್ ಡೆಲಿವರಿ ನೀಡಲು ಬೆಳಿಗ್ಗೆ ೬ ರಿಂದ ಸಂಜೆ ೮ ರವರೆಗೆ ಅನುಮತಿಸಿದೆ.

ಬಾರ್‌ನಲ್ಲಿ ನಿಗದಿತ ಸಮಯದಲ್ಲಿ ಪಾರ್ಸಲ್ ಸೇವೆಗೆ ಮಾತ್ರ ಅನುಮತಿಸಿದೆ. ಜಿಲ್ಲೆಗೆ ಆಗಮಿಸುವವರನ್ನು ಪ್ರತೀ ಚೆಕ್‌ಪೋಸ್ಟ್ಗಳಲ್ಲಿ ವಿಚಾರಣೆ ನಡೆಸಿ, ಕೊಡಗು ಜಿಲ್ಲೆಯಲ್ಲಿ ವಾಸ್ತವ್ಯ ಹೂಡುವುದಾದಲ್ಲಿ ಎಲ್ಲಿ ತಂಗುತ್ತಾರೆ ಎಂಬ ಬಗ್ಗೆ ಪೂರ್ಣ ವಿಳಾಸ, ಮೊಬೈಲ್ ಸಂಖ್ಯೆಯನ್ನು ಪಡೆದುಕೊಳ್ಳುವುದು ಹಾಗೂ ಹೊರ ಜಿಲ್ಲೆಯಿಂದ ಆಗಮಿಸಿದವರು ಕಡ್ಡಾಯವಾಗಿ ೧೪ ದಿನಗಳ ಕಾಲ ಹೋಂ ಕ್ವಾರಂಟೈನಲ್ಲಿ ಇರಲು ಸೂಚಿಸಲಾಗಿದೆ.

ನೆಗೆಟಿವ್ ವರದಿ ಕಡ್ಡಾಯ

ಸರ್ಕಾರದ ಇತ್ತೀಚಿನ ಸುತ್ತೋಲೆಯಂತೆ ನೆರೆಯ ಕೇರಳ ರಾಜ್ಯದಿಂದ ಜಿಲ್ಲೆಗೆ ಆಗಮಿಸುವವರು ಕಡ್ಡಾಯವಾಗಿ ೭೨ ಗಂಟೆಗಳ ಅವಧಿಯೊಳಗಿನ ಕೋವಿಡ್ ನೆಗೆಟಿವ್ ವರದಿ (ಆರ್.ಟಿ.ಪಿ.ಸಿ.ಆರ್) ಹೊಂದಿರುವುದು ಕಡ್ಡಾಯವಾಗಿದೆ. ರಾಜ್ಯ ಸರ್ಕಾರದ ಮತ್ತು ಅದರ ಸ್ವಾಯತ್ತ ಸಂಸ್ಥೆಗಳು, ನಿಗಮಗಳು ಇತ್ಯಾದಿಗಳ ಅಧಿಕಾರಿ, ಸಿಬ್ಬಂದಿಗಳ ಕರ್ತವ್ಯದ ನಿಮಿತ್ತ ಹಾಗೂ ಕೋವಿಡ್-೧೯ ನಿಯಂತ್ರಣ ಕಾರ್ಯದಲ್ಲಿ ತೊಡಗಿರುವ ಅಧಿಕಾರಿ, ನೌಕರರ ಸಂಚಾರಕ್ಕೆ ಅವಕಾಶ ಇರುತ್ತದೆ. ಆದರೂ, ಆಯಾ ಕಚೇರಿಯಿಂದ ನೀಡಲ್ಪಟ್ಟ ಅಧಿಕೃತ ಗುರುತಿನ ಚೀಟಿ ಹೊಂದಿರತಕ್ಕದ್ದು ಮತ್ತು ಪರಿಶೀಲನೆ ವೇಳೆ ಹಾಜರುಪಡಿಸಲು ಸೂಚಿಸಲಾಗಿದೆ.

ಜಿಲ್ಲೆಯಾದ್ಯಂತ ಯಾವುದೇ ವ್ಯಕ್ತಿಗಳು ಸಕಾರಣವಿಲ್ಲದೆ ಅನಗತ್ಯ ಸಂಚರಿಸುವುದು, ತಿರುಗಾಡುವುದನ್ನು ಕಡ್ಡಾಯವಾಗಿ ನಿಷೇಧಿಸಿದೆ. ಹಾಲಿ ಜಿಲ್ಲೆಯಲ್ಲಿ ಚಾಲ್ತಿಯಲ್ಲಿರುವ ಮಾರ್ಗಸೂಚಿಯಂತೆ ಪ್ರವಾಸೋದ್ಯಮ ಚಟುವಟಿಕೆಗೆ ನಿರ್ಬಂಧವಿದ್ದು, ಹೋಂಸ್ಟೇ, ಹೊಟೇಲ್, ಲಾಡ್ಜ್, ರೆಸಾರ್ಟ್ಗಳಲ್ಲಿ ಆತಿಥ್ಯ ಸೇವೆಗಳನ್ನು ನಿರ್ಬಂಧಿಸಲಾಗಿದೆ.

ಪ್ರತಿ ದಿನ ರಾತ್ರಿ ೯ ರಿಂದ ಬೆಳಿಗ್ಗೆ ೬ ರವರೆಗೆ ರಾತ್ರಿ ಕರ್ಫ್ಯೂ ಜಾರಿಯಲ್ಲಿರುತ್ತದೆ. ಶುಕ್ರವಾರ ರಾತ್ರಿ ೯ ರಿಂದ ಸೋಮವಾರ ಬೆಳಿಗ್ಗೆ ೬ ರವರೆಗೆ ವಾರಾಂತ್ಯ ಕರ್ಫ್ಯೂ ಜಾರಿಯಲ್ಲಿರುತ್ತದೆ. ಈ ಅವಧಿಯಲ್ಲಿ ತುರ್ತು ಅತ್ಯವಶ್ಯಕ, ವೈದ್ಯಕೀಯ, ಸರಕುಸಾಗಾಣಿಕೆ ಮತ್ತು ತುರ್ತು ಸೇವೆಗಳ ಹೊರತುಪಡಿಸಿ ಇತರೇ ಯಾವುದೇ ಚಟುವಟಿಕೆಗಳಿಗೆ ಅವಕಾಶವಿರುವುದಿಲ್ಲ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.