ಮಡಿಕೇರಿ, ಜು. ೪: ೨೦೨೧-೨೨ನೇ ಸಾಲಿನ ಭಾರತ ಸರಕಾರದ ಪ್ರಧಾನ ಮಂತ್ರಿಗಳ ಉದ್ಯೋಗ ಸೃಜನ (ಪಿ.ಎಂ.ಇ.ಜಿ.ಪಿ) ಕಾರ್ಯಕ್ರಮದಡಿಯಲ್ಲಿ ಕೈಗಾರಿಕೆ, ಉತ್ಪಾದನ, ಸೇವಾ ಘಟಕಗಳಿಗೆ ಸಾಲ ಸೌಲಭ್ಯ ಪಡೆಯಲು ಆನ್‌ಲೈನ್ ಮುಖಾಂತರ ಎಸ್.ಸಿ, ಎಸ್.ಟಿ, ಹಿಂದುಳಿದ ವರ್ಗ, ಅಲ್ಪಸಂಖ್ಯಾತರು, ಮಾಜಿ ಸೈನಿಕರು, ಅಂಗವಿಕಲರು, ಮಹಿಳೆಯರು, ಸಾಮಾನ್ಯ ವರ್ಗ, ಎಲ್ಲಾ ವರ್ಗದ ನಿರುದ್ಯೋಗಿ ಯುವಕ-ಯುವತಿಯರಿಂದ ಅರ್ಜಿ ಸ್ವೀಕರಿಸಲು ಆನ್‌ಲೈನ್ ಅರ್ಜಿ ಆಹ್ವಾನಿಸಲಾಗಿದೆ.

ಸ್ವದ್ಯೋಗ ಮಾಡಿಕೊಳ್ಳುವವರಿಗೆ, ಗ್ರಾಮೀಣ ಪ್ರದೇಶಗಳಲ್ಲಿ ಉದ್ದಿಮೆ ಘಟಕಗಳನ್ನು ಸ್ಥಾಪಿಸುವವರಿಗೆ ಬ್ಯಾಂಕಿನಿAದ ಗರಿಷ್ಠ ರೂ.೨೫ ಲಕ್ಷಗಳವರೆಗೆ ಸಾಲ ನೀಡಿ ಗರಿಷ್ಠ ಶೇ. ೨೫ ರಿಂದ ೩೫ ರವರೆಗೆ ಸಹಾಯಧನ ನೀಡಲಾಗುವುದು. ಈ ಸೌಲಭ್ಯ ಪಡೆಯಲು ಆನ್‌ಲೈನ್ ಮೂಲಕ ತಿತಿತಿ.ಞviಛಿ.oಡಿg.iಟಿ (ಠಿmegಠಿ oಟಿಟiಟಿe ಚಿಠಿಠಿಟiಛಿಚಿಣioಟಿ) ನಲ್ಲಿ ಅರ್ಜಿ ಸಲ್ಲಿಸುವಾಗ (ಂಉಇಓಅಙ ಅಔಆಇ ಏಗಿIಃ) ಎಂದು ಅರ್ಜಿಯಲ್ಲಿ ಅಳವಡಿಸಿ ಅದರ ಪ್ರತಿಯೊಂದಿಗೆ ೨ ಸೆಟ್‌ನಲ್ಲಿ ದಾಖಲಾತಿಗಳೊಂದಿಗೆ ವಿಳಾಸ: ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿಯ ಜಿಲ್ಲಾ ಕಚೇರಿ, ಜಿಲ್ಲಾ ಕೈಗಾರಿಕ ಕೇಂದ್ರದ ಕಟ್ಟಡ, ಕೊಹಿನೂರು ರಸ್ತೆ, ಮಡಿಕೇರಿ-೫೭೧೨೦೧, ಇದಕ್ಕೆ ಕಳುಹಿಸಬೇಕಾಗಿದೆ ಎಂದು ಪ್ರಭಾರ ಜಿಲ್ಲಾ ಖಾದಿ ಗ್ರಾಮೋದ್ಯೋಗ ಅಧಿಕಾರಿ ಹೆಚ್.ಆರ್. ರಾಮಕೃಷ್ಣ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಅಪೂರ್ಣವಾಗಿ ಭರ್ತಿ ಮಾಡಿದ ಅರ್ಜಿಗಳನ್ನು ಸ್ವೀಕರಿಸುವುದಿಲ್ಲ. ಹೆಚ್ಚಿನ ವಿವರಗಳಿಗೆ ಜಿಲ್ಲಾ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ ಕಚೇರಿಯನ್ನು ಸಂಪರ್ಕಿಸಬಹುದು (ದೂ.೦೮೨೭೨-೨೨೫೯೪೬, ೯೪೮೦೮೨೫೬೩೦).