ಮುಳ್ಳೂರು, ಜು. ೩: ಭಾರತೀಯ ಸಂಬಾರ ಮತ್ತು ಸಂಶೋಧನೆ ಮಂಡಳಿ ವತಿಯಿಂದ ಕೊಡಮಾಡುವ ೨೦೨೦-೨೧ನೇ ಸಾಲಿನ ಅತ್ಯುತ್ತಮ ಕಾಳುಮೆಣಸು ಬೆಳೆಗಾರ ಪ್ರಶಸ್ತಿಯನ್ನು ಸಮೀಪದ ಕೆರೆಹಳ್ಳಿ ಗ್ರಾಮದ ಕೆ.ಎಂ. ಕಾಂತರಾಜು ಪಡೆದುಕೊಂಡಿದ್ದಾರೆ. ಕೇರಳದ ಕಲ್ಲಿಕೋಟೆಯ ಭಾರತೀಯ ಸಂಬಾರ ಬೆಳೆಗಳ ಸಂಶೋಧನೆ ಮಂಡಳಿ ವತಿಯಿಂದ ಅತ್ಯುತ್ತಮ ಕಾಳುಮೆಣಸು ಬೆಳೆಗಾರ ಪ್ರಶಸ್ತಿಯನ್ನು ಕಾಂತರಾಜು ಅವರಿಗೆ ಕಲ್ಲಿಕೋಟೆಯಲ್ಲಿ ನಡೆದ ಭಾರತೀಯ ಸಂಬಾರ ಬೆಳೆಗಳ ಸಂಶೋಧನಾ ಮಂಡಳಿಯ ಪ್ರಶಸ್ತಿ ವಿತರಣಾ ಸಮಾರಂಭದಲ್ಲಿ ಅವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.