ನಾಪೋಕ್ಲು, ಜು. ೩: ಪ್ರಾಕೃತಿಕ ವಿಕೋಪ, ಅತಿವೃಷ್ಟಿಗೆ ಸಿಲುಕಿ ಕಳೆದ ಮೂರು ವರ್ಷಗಳಿಂದ ನಲುಗಿರುವ ಬೆಳೆಗಾರರು, ಇದೀಗ ವನ್ಯಜೀವಿಗಳ ಉಪಟಳಕ್ಕೆ ಸಿಲುಕಿ ಅತಂತ್ರ ಬದುಕಿನ ಆತಂಕಕ್ಕೆ ತಳ್ಳಲ್ಪಟ್ಟಿದ್ದಾರೆ.

ನಾಪೋಕ್ಲು ಸಮೀಪದ ತಡಿಯಂಡಮೋಳ್ ಬೆಟ್ಟದ ತಪ್ಪಲಿನ ಕಕ್ಕಬ್ಬೆಯ ಮರಂದೋಡ ಗ್ರಾಮದ ಚಂಡೀರ ಕುಟುಂಬಸ್ಥರ ಭತ್ತದ ಗದ್ದೆ, ಕಾಫಿ ತೋಟಗಳು ಕಾಡಾನೆಗ¼ ದಾಳಿಗೆ ಸಿಲುಕಿ, ಅಪಾರ ಹಾನಿ ಉಂಟಾಗಿದೆ.

ಗ್ರಾಮದ ನಿವಾಸಿ ಚಂಡೀರ ಸುಂದರ ಅವರು ಸುಮಾರು ಎರಡು ಎಕರೆ ಪ್ರದೇಶದಲ್ಲಿ ಕಾಫಿ ತೋಟವನ್ನು ಮಾಡಿ ಬದುಕು ಕಟ್ಟಿಕೊಂಡಿದ್ದಾರೆ. ಇವರ ತೋಟಕ್ಕೆ ಕಳೆದೊಂದು ವಾರದ ಅವಧಿಯಲ್ಲಿ ಲಗ್ಗೆ ಇಟ್ಟಿರುವ ಕಾಡಾನೆಗಳು ಹಾನಿಯನ್ನುಂಟುಮಾಡಿವೆ. ೩೦ ರಿಂದ ೩೫ ಬೆಳೆದು ನಿಂತ ಕಾಫಿ, ಅಡಿಕೆ, ಗಿಡಗಳು ನಾಶವಾಗಿದ್ದು, ಅರೇಬಿಕಾ ಕಾಫಿ ಗಿಡಗಳು ಸಾಕಷ್ಟು ಸಂಖ್ಯೆಯಲ್ಲಿ ಹಾಳಾಗಿವೆ. ಕಾಡಾನೆಗಳ ದಾಂಧಲೆಯಿAದ ಕೈಗೆ ಬರಬಹುದಾಗಿದ್ದ ಸುಮಾರು ಹತ್ತು ಚೀಲದಷ್ಟು ಕಾಫಿ ಫಸಲು ಮಣ್ಣಲ್ಲಿ ಮಣ್ಣಾಗಿದೆ. ಇದರೊಂದಿಗೆ ತೋಟದಲ್ಲಿದ್ದ ಸಾಕಷ್ಟು ಸಣ್ಣ ಪುಟ್ಟ ಮರಗಳು, ನಾಲ್ಕೆöÊದು ತೆಂಗಿನ ಮರಗಳು ಧರೆಗುರುಳಿವೆ.

ಗ್ರಾಮದ ಚಂಡೀರ ಕುಟುಂಬದ ಕುಸುಮ, ಪೂಣಚ್ಚ ಎಂಬವರ ತೋಟಗಳಿಗೂ ಸಾಕಷ್ಟು ಹಾನಿ ಸಂಭವಿಸಿದೆ. ಚಂಡೀರ ರನ್ನು ಎಂಬವರ ಒಂದು ಎಕರೆಯಷ್ಟು ಬಾಳೆ ಕೃಷಿ ನಾಶವಾಗಿದ್ದರೆ, ಚಂಡೀರ ಜಗದೀಶ್ ಅವರ ತೋಟದ ಅಡಿಕೆ, ಬಾಳೆ ಕೃಷಿಗೆ ಕಾಡಾನೆಗಳು ಸಾಕಷ್ಟು ಹಾನಿ ಮಾಡಿದೆ.

ಇಲ್ಲಿಯವರೆಗೆ ನಾಶವಾದ ಬೆಳೆಗೆ ಅರಣ್ಯ ಇಲಾಖೆಯಿಂದ ಪರಿಹಾರ ದೊರಕಿಲ್ಲವೆಂದು ಚಂಡೀರ ಸುಂದರ ತೀವ್ರ ಅಸಮಾಧಾನ ವ್ಯಕ್ತಪಡಿಸಿ, ಜನಪ್ರತಿನಿಧಿಗಳು ಈ ನಿಟ್ಟಿನಲ್ಲಿ ಗಮನ ಹರಿಸಿ ಸೂಕ್ತ ಪರಿಹಾರ ದೊರಕಿಸಿಕೊಡಲು ಮುಂದಾಗಬೇಕೆAದು ಮನವಿ ಮಾಡಿದ್ದಾರೆ.

-ದುಗ್ಗಳ ಸದಾನಂದ