ಸುಂಟಿಕೊಪ್ಪ, ಜು. ೩: ಸುಂಟಿಕೊಪ್ಪ ಬಿಜೆಪಿ ಸ್ಥಾನೀಯ ಸಮಿತಿಯ ಪದಾಧಿಕಾರಿಗಳು, ಗ್ರಾ.ಪಂ. ಬಿಜೆಪಿ ಬೆಂಬಲಿತ ಸದಸ್ಯರುಗಳು ಒಗ್ಗೂಡಿ ಮಾದಾಪುರ ರಸ್ತೆಯಲ್ಲಿರುವ ಹಿಂದೂ ರುದ್ರಭೂಮಿಯಲ್ಲಿ ಕಾಡು ಗಿಡಗುಂಟೆಗಳನ್ನು ಕಡಿದು ಶ್ರಮದಾನವನ್ನು ನೆÀರವೇರಿಸಿದರು.
ಮಾದಾಪುರ ರಸ್ತೆಯ ರುದ್ರಭೂಮಿಯ ಆವರಣದಲ್ಲಿ ಬೆಳೆದು ನಿಂತಿದ್ದ ಕಾಡು ಗಿಡ ಗಂಟಿಗಳನ್ನು ಕಡಿದು ಸ್ವಚ್ಛಗೊಳಿಸಿದರು. ಬಿಜೆಪಿ ಬೆಂಬಲಿತ ಗ್ರಾಮ ಪಂಚಾಯಿತಿ ಸದಸ್ಯರುಗಳಾದ ಪಿ.ಆರ್. ಸುನಿಲ್ಕುಮಾರ್, ಬಿ.ಎಂ. ಸುರೇಶ್, ವಸಂತಿ, ಮಂಜುಳಾ, ರಾಸತಿ, ಶಾಂತಿ, ಗೀತಾ ಬಿಜೆಪಿ ಶಕ್ತಿ ಕೇಂದ್ರದ ಪ್ರಮುಖರಾದ ಬಿ.ಕೆ. ಪ್ರಶಾಂತ್, ವಾಸು, ಸಹಪ್ರಮುಖ್ ಪ್ರಶಾಂತ್ ಜಿಲ್ಲಾ ಯುವ ಮೋರ್ಚಾ ಸದಸ್ಯ ಆನಂದ ಇದ್ದರು.