ಸೋಮವಾರಪೇಟೆ, ಜು. ೩: ಬೇಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಳ್ಳದಿಣ್ಣೆ-ಕುಸುಬೂರು ಗ್ರಾಮದಲ್ಲಿ ಕೋವಿಡ್ ಪರೀಕ್ಷಾ ಶಿಬಿರ ನಡೆಸಲಾಯಿತು.

೧೫ಕ್ಕಿಂತ ಹೆಚ್ಚು ಕೋವಿಡ್ ಸೋಂಕು ಇರುವ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಮನೆ ಮನೆಗೆ ತೆರಳಿ ಕೋವಿಡ್ ಪರೀಕ್ಷೆ ಮಾಡುವ ಉದ್ದೇಶದಿಂದ ಪಂಚಾಯಿತಿಗೊಳಪಡುವ ಗ್ರಾಮಗಳಲ್ಲಿ ಶಿಬಿರವನ್ನು ಆಯೋಜಿಸಲಾಗಿದೆ ಎಂದು ಬೇಳೂರು ಗ್ರಾ.ಪಂ. ಅಧ್ಯಕ್ಷ ಪ್ರಶಾಂತ್ ಪೂಜಾರಿ ಹೇಳಿದರು.

ಬಿಳಿಗೇರಿ ಪ್ರಾಥಮಿಕ ಆರೋಗ್ಯ ಕೇಂದ್ರದ ಡಾ. ಸುಕೃತರವರ ನೇತೃತ್ವದಲ್ಲಿ ನಡೆದ ಶಿಬಿರದಲ್ಲಿ ಆಶಾ ಕಾರ್ಯಕರ್ತೆಯರಾದ ಅಮುದಾ, ನಾಗಮಣಿ, ಭವ್ಯ, ಗಾಯತ್ರಿ ಹಾಗೂ ಕೆಂಚಮ್ಮನಬಾಣೆ ಅಂಗನವಾಡಿ ಕೇಂದ್ರದ ಕಾರ್ಯಕರ್ತೆ ಜಯಲಲಿತಾ ಹಾಗೂ ಜಗದೀಶ್ ಸಹಕರಿಸಿದರು. ಶಿಬಿರದಲ್ಲಿ ಸುಮಾರು ೭೦ ಮಂದಿ ಪರೀಕ್ಷೆ ಮಾಡಿಸಿಕೊಂಡರು. ಶಿಬಿರಾರ್ಥಿಗಳು ವೈದ್ಯರ ದಿನಾಚರಣೆ ಅಂಗವಾಗಿ ಚಪ್ಪಾಳೆ ತಟ್ಟುವ ಮೂಲಕ ವೈದ್ಯ ಸಮುದಾಯಕ್ಕೆ ಶುಭಕೋರಿದರು. ಈ ಸಂದರ್ಭ ಬೇಳೂರು ಗ್ರಾ.ಪಂ. ಸದಸ್ಯರುಗಳಾದ ಭಾಗೀರಥಿ, ಭಾಸ್ಕರ್, ಕೆ.ಪಿ. ಸುದರ್ಶನ್, ಗ್ರಾಮಾಭಿವೃದ್ಧಿ ಅಧಿಕಾರಿ ಅಂಜನಾದೇವಿ, ಕಾರ್ಯದರ್ಶಿ ಶರಣಪ್ಪ, ಗ್ರಾಮ ಲೆಕ್ಕಿಗೆ ಶ್ವೇತಾ ಹಾಗೂ ರಮಾ ಹಾಜರಿದ್ದರು.