ಮಡಿಕೇರಿ, ಜು. ೩: ಜಮ್ಮ ಕೊಡವ ಸಂಘಟನೆ ವತಿಯಿಂದ ಸಮಾಜ ಸೇವಕ ಕದ್ದಣಿಯಂಡ ಹರೀಶ್ ಬೋಪಣ್ಣ ಅವರ ಪ್ರಾಯೋಜಕತೆಯಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಕೊಡವ ತಕ್ಕ್ ಚುಟುಕ ಪೈಪೋಟಿ ಕಾರ್ಯಕ್ರಮ ಜೂನ್ ೩೦ರಂದು ಯಶಸ್ವಿಯಾಗಿ ಕೊನೆಗೊಂಡಿತು. ನೂರಕ್ಕೂ ಹೆಚ್ಚು ಬರಹಗಾರರು ಪಾಲ್ಗೊಂಡಿದ್ದ ಈ ಚುಟುಕ ಪೈಪೋಟಿ ಕಾರ್ಯಕ್ರಮದಲ್ಲಿ ಸಾಹಿತಿ ನಾಗೇಶ್ ಕಾಲೂರು ಅವರು ತೀರ್ಪುಗಾರರಾಗಿ ಭಾಗವಹಿಸಿದ್ದರು.
ಕೊಡವ ತಕ್ಕ್ ಚುಟುಕ ಪೈಪೋಟಿಯಲ್ಲಿ ತೀವ್ರ ಸ್ಪರ್ಧೆಯಲ್ಲಿದ್ದ ೬ ಜನರ ಪೈಕಿ ಸುಮನ್ ಸೀತಮ್ಮ ಬೊಳ್ಳೆರ ೧ನೆ, ತಿಲಕ್ ಬೊಟ್ಟಂಗಡ ೨ನೆ ಮತ್ತು ಪಾವನ ಸುಬ್ರಮಣಿ ಚೋನಿರ ೩ನೇ ಬಹುಮಾನ ಪಡೆದುಕೊಂಡರು. ಬೀನಾ ಕಾಳಯ್ಯ ಬಾದುಮಂಡ, ಶರತ್ ಸೋಮಣ್ಣ ಚೆಟ್ಟೋಳಿರ ಮತ್ತು ಡಿವಿತ ದೇಚಮ್ಮ ಕೋಟೆರ ಅವರುಗಳು ಮೆಚ್ಚುಗೆಗೆ ಪಾತ್ರರಾಗಿದ್ದರು. ಸಂಘಟನೆಯ ತಂಬಾAಡ ಡ್ಯಾನಿ ನಾಣಯ್ಯ ಸಂಚಾಲಕರಾಗಿ ಕಾರ್ಯನಿರ್ವಹಿಸಿದರು.