*ಸಿದ್ದಾಪುರ, ಜು. ೧ : ವಾಲ್ನೂರು- ತ್ಯಾಗತ್ತೂರು ಭಾಗದಿಂದ ಅಮ್ಮಂಗಾಲದವರೆಗೆ ಸುಮಾರು ೮ ಕಿ.ಮೀ. ದೂರ ಇರುವ ನಾಲೆ ಯೊಂದರಿAದ ಪ್ರತಿವರ್ಷ ನಿರ್ವಹಣೆಗಾಗಿ ಲಕ್ಷಾಂತರ ಹಣ ದುಂದು ವೆಚ್ಚವಾಗುತ್ತಿದ್ದು, ಶಾಶ್ವತವಾದ ಕಾಂಕ್ರಿಟ್ ನಾಲೆಯನ್ನು ನಿರ್ಮಿಸ ಬೇಕೆಂದು ಸ್ಥಳೀಯ ಗ್ರಾಮಸ್ಥರು *ಸಿದ್ದಾಪುರ, ಜು. ೧ : ವಾಲ್ನೂರು- ತ್ಯಾಗತ್ತೂರು ಭಾಗದಿಂದ ಅಮ್ಮಂಗಾಲದವರೆಗೆ ಸುಮಾರು ೮ ಕಿ.ಮೀ. ದೂರ ಇರುವ ನಾಲೆ ಯೊಂದರಿAದ ಪ್ರತಿವರ್ಷ ನಿರ್ವಹಣೆಗಾಗಿ ಲಕ್ಷಾಂತರ ಹಣ ದುಂದು ವೆಚ್ಚವಾಗುತ್ತಿದ್ದು, ಶಾಶ್ವತವಾದ ಕಾಂಕ್ರಿಟ್ ನಾಲೆಯನ್ನು ನಿರ್ಮಿಸ ಬೇಕೆಂದು ಸ್ಥಳೀಯ ಗ್ರಾಮಸ್ಥರು ಲಕ್ಷಾಂತರ ಹಣ ಖರ್ಚು ಮಾಡುತ್ತದೆ. ಇದು ಮಣ್ಣಿನ ನಾಲೆಯಾಗಿರುವು ದರಿಂದ ಆಗ್ಗಿಂದಾಗೆ ಕುಸಿತ ಉಂಟಾಗಿ ಪಕ್ಕದಲ್ಲೇ ಇರುವ ತೋಡು ನೀರಿನ ಹರಿವಿಗೂ ತಡೆಯುಂಟಾಗುತ್ತಿದೆ. ಅಲ್ಲದೆ ಬರೆ ಕೂಡ ಕುಸಿತ ಉಂಟಾಗಿ ಗದ್ದೆಗಳಿಗೂ ನೀರು ಹರಿದು ಹಾನಿಯಾಗುತ್ತಿದೆ.

ಇದರಿಂದ ಬೇಸರಗೊಂಡಿರುವ ಸ್ಥಳೀಯ ಕೃಷಿಕರು ಹಾಗೂ ಗ್ರಾಮಸ್ಥರು ಶಾಶ್ವತವಾದ ಕಾಂಕ್ರಿಟ್ ನಾಲೆ ನಿರ್ಮಾಣವಾದರೆ ಮಾತ್ರ ಇಲ್ಲಿನ ಕೃಷಿ ಕಾರ್ಯಕ್ಕೆ ಸಹಕಾರಿಯಾಗಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಪ್ರತಿವರ್ಷ ನಿರ್ವಹಣೆಯ ಹೆಸರಿನಲ್ಲಿ ಖರ್ಚಾಗುತ್ತಿರುವ ಸರ್ಕಾರದ ಹಣ ಉಳಿಸುವುದಕ್ಕೂ ಇದು ನೆರವಾಗಲಿದೆ ಎಂದು ತಿಳಿಸಿದ್ದಾರೆ.

ಇನ್ನಾದರೂ ಶೀಘ್ರ ಕಾಂಕ್ರಿಟ್ ನಾಲೆ ನಿರ್ಮಾಣಕ್ಕೆ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಯೋಜನೆ ರೂಪಿಸಬೇಕಾಗಿದೆ.