ನಾಪೋಕ್ಲು, ಜು. ೨: ಭಾಗಮಂಡಲ ತ್ರಿವೇಣಿ ಸಂಗಮದಲ್ಲಿ ಕೊಡಗಿನ ಜನರಿಗೆ ಪಿಂಡ ಪ್ರದಾನ ಮಾಡಲು ಅವಕಾಶ ಕಲ್ಪಿಸಿಕೊಡ ಬೇಕೆಂದು ಭಾಗಮಂಡಲ-ತಲಕಾವೇರಿ ದೇವಳ ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷ ಹಾಗೂ ನಾಪೋಕ್ಲು ಕೊಡವ ಸಮಾಜದ ಕ್ರೀಡಾ ಸಾಂಸ್ಕೃತಿಕ ಮತ್ತು ಮನೋರಂಜನಾ ಕೂಟದ ಅಧ್ಯಕ್ಷ ಬಿದ್ದಾಟಂಡ ಎಸ್.ತಮ್ಮಯ್ಯ ಮನವಿ ಮಾಡಿದ್ದಾರೆ.

ಈ ಬಗ್ಗೆ ‘ಶಕ್ತಿ’ಗೆ ಹೇಳಿಕೆ ನೀಡಿದ ಅವರು, ಪಿಂಡ ಪ್ರದಾನ ಸಂಸ್ಕೃತಿ, ಸಂಪ್ರದಾಯದ ಒಂದು ಭಾಗವಾಗಿದೆ. ವ್ಯಕ್ತಿ ಮೃತನಾದ ೧೬ ದಿನದಲ್ಲಿ ಪಿಂಡ ಪ್ರಧಾನ ಮಾಡುವದು ಸಂಪ್ರದಾಯ ವಾಗಿದೆ. ಕೊರೊನಾ ಕಾರಣ ಹಾಗೂ ಸ್ವಾಭಾವಿಕವಾಗಿ ಹೆಚ್ಚಿನ ಜನ ಕಳೆದೆರಡು ತಿಂಗಳಲ್ಲಿ ಸಾವನ್ನಪ್ಪಿದ್ದಾರೆ. ಜಿಲ್ಲೆಯ ಜನ ಸೇರಿದಂತೆ ಬೆಂಗಳೂರು, ಮೈಸೂರು ಹಾಗೂ ಹೊರ ಊರಿನಲ್ಲಿ ನೆಲೆಸಿರುವ ಜನ ಕೂಡ ಪಿಂಡ ಪ್ರದಾನಕ್ಕೆ ಭಾಗಮಂಡಲಕ್ಕೆ ಆಗಮಿಸುತ್ತಾರೆ. ಪಿಂಡ ಪ್ರದಾನ ಮಾಡದ ಹೊರತು ಮೃತರ ಪತ್ನಿ, ಮಕ್ಕಳು ಮನೆಯಿಂದ ಹೊರ ಬರುವಂತಿಲ್ಲ. ಈ ಪರಿಸ್ಥಿತಿಯಲ್ಲಿ ಹೆಚ್ಚಿನ ನೌಕರರು ಕೂಡ ಇದ್ದಾರೆ. ಅವರಿಗೂ ನೌಕರಿಗೆ ತೆರಳಲು ಸಾಧ್ಯವಾಗುತ್ತಿಲ್ಲ ಎಂದು ತಿಳಿಸಿದ್ದಾರೆ. ಆದುದರಿಂದ ಭಾಗಮಂಡಲ ಕ್ಷೇತ್ರದ ತಕ್ಕಮುಖ್ಯಸ್ಥರು, ಜನಪ್ರತಿನಿಧಿಗಳು ಹಾಗೂ ದೇವಳದ ಆಡಳಿತ ಮಂಡಳಿ, ಜಿಲ್ಲಾಡಳಿತ ಮತ್ತು ಸಂಬAಧಿಸಿದವರ ಗಮನ ಸೆಳೆದು ಕೂಡಲೇ ಪಿಂಡ ಪ್ರದಾನಕ್ಕೆ ಅವಕಾಶ ಮಾಡಿಕೊಡಬೇಕೆಂದು ಮನವಿ ಮಾಡಿದ್ದಾರೆ.