ವೀರಾಜಪೇಟೆ, ಜು. ೧: ಮದುವೆ ಕಾರ್ಯಕ್ರಮಕ್ಕೆ ಆಗಮಿಸಿದ್ದ ಬೆಂಗಳೂರು ಮೂಲದ ವ್ಯಕ್ತಿಯೋರ್ವರು ಇಲ್ಲಿನ ಲಾಡ್ಜ್ವೊಂದರಲ್ಲಿ ಸಾವನ್ನಪ್ಪಿದ ಘಟನೆ ಸಂಭವಿಸಿದೆ. ಬೆಂಗಳೂರು ರಾಮಮೂರ್ತಿ ನಗರದ ನಿವಾಸಿ ಕೃಷ್ಣಪ್ಪ ಎಂಬವರ ಪುತ್ರ ಮಧು (೩೩) ಮೃತಪಟ್ಟ ವ್ಯಕ್ತಿ.

ವೀರಾಜಪೇಟೆ ಸನಿಹ ಚೆಂಬೆಬೆಳ್ಳೂರು ಗ್ರಾಮದಲ್ಲಿ ತಾ. ೩೦ರಂದು ಸ್ನೇಹಿತರ ಮದುವೆಗೆಂದು ಮೂವರು ಸಂಗಡಿಗರೊAದಿಗೆ ಮಧು ಆಗಮಿಸಿದ್ದರು. ಮದುವೆ ಕಾರ್ಯಕ್ರಮ ಮುಗಿಸಿ ಹಿಂದಿರುಗುವ ವೇಳೆ ರಾತ್ರಿಯಾಗಿತ್ತು. ವೀರಾಜಪೇಟೆ ನಗರದ ದೊಡ್ಡಟ್ಟಿಚೌಕಿಯ ಸನಿಹದಲ್ಲಿರುವ ಕುಪ್ಪಂಡ ಕಾಂಪ್ಲೆಕ್ಸ್ನ ಕಾವೇರಿ ಲಾಡ್ಜ್ನಲ್ಲಿ ರೂಂ ಮಾಡಿ ತಂಗಿದ್ದರು. ಮದುವೆ ಸಡಗರದಿಂದ ಆಗಮಿಸಿದ ನಾಲ್ವರು ನಿದ್ದೆಗೆ ಜಾರಿದ್ದಾರೆ. ಮರುದಿನ ಬೆಳಿಗ್ಗೆ ಮೂವರು ಸ್ನೇಹಿತರು ಎದ್ದು ಹೊರಡಲು ತಯಾರಿಯಲ್ಲಿದ್ದರು. ಆದರೆ ಮಧು ಮಾತ್ರ ಯಾವುದೇ ಪ್ರತಿಕ್ರಿಯೆ ನೀಡದೆ ಮಲಗಿದ್ದರು. ಸ್ನೇಹಿತರು ಅವರನ್ನು ಮುಟ್ಟಿ ನೋಡಿದ ವೇಳೆ ದೇಹ ತಣ್ಣಗಾಗಿತ್ತು. ಸಂಶಯದಿAದ ಸ್ಥಳೀಯ ಕ್ಲಿನಿಕ್‌ನ ಆರೋಗ್ಯ ಸಹಾಯಕರಿಗೆ ಮಾಹಿತಿ ನೀಡಿದ್ದಾರೆ. ಆರೋಗ್ಯ ಸಹಾಯಕರು ಶರೀರವನ್ನು ಪರೀಕ್ಷೆ ಮಾಡಿ ಮೃತರಾಗಿದ್ದಾರೆ ಎಂದು ತಿಳಿಸಿದ್ದಾರೆ. ನಂತರದಲ್ಲಿ ವೀರಾಜಪೇಟೆ ನಗರ ಠಾಣೆಗೆ ಮಾಹಿತಿ ನೀಡಲಾಗಿ ಸ್ಥಳಕ್ಕೆ ಪೊಲೀಸರು ಆಗಮಿಸಿ ಸ್ಥಳ ಮಹಜರು ಮಾಡಿರು. ಮೃತರ ಸ್ನೇಹಿತರಾದ ಹರಿಪ್ರಸಾದ್ ಎಂಬವರು ನೀಡಿದ ದೂರಿನ ಮೇರೆಗೆೆ ನಗರ ಪೊಲೀಸ್ ಠಾಣೆಯಲ್ಲಿ ಸಂಶಯಾಸ್ಪದ ಸಾವು ಪ್ರಕರಣ ದಾಖಲಾಗಿದ್ದು, ಮುಂದಿನ ಕ್ರಮಕೈಗೊಂಡಿದ್ದಾರೆ.