ಮಡಿಕೇರಿ: ಕೆಪಿಸಿಸಿ ಸದಸ್ಯ ಹಾಗೂ ಕಾಂಗ್ರೆಸ್ ಕೋವಿಡ್ ಮೇಲ್ವಿಚಾರಣೆ ಹಾಗೂ ನಿರ್ವಹಣೆ ಸಮಿತಿ ಸದಸ್ಯ ಮೆಹರೋಜ್ ಖಾನ್ ಅವರು ಜಿಲ್ಲೆಯಲ್ಲಿ ಸುಮಾರು ೩೦೦ ಕಿಟ್‌ಗಳನ್ನು ವಿತರಿಸಿದರು.
ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಸೇವಾದಳ ಸದಸ್ಯರು, ಗೃಹ ಸಂಪರ್ಕ ತಡೆಯಲ್ಲಿರುವವರು ಹಾಗೂ ಪತ್ರಿಕಾ ಭವನದಲ್ಲಿ ಪತ್ರಕರ್ತರಿಗೆ ಅಗತ್ಯ ವಸ್ತುಗಳ ಕಿಟ್ ಹಾಗೂ ಮುಂಚೂಣಿ ಕಾರ್ಯಕರ್ತರಿಗೆ ಪಿಪಿಇ ಕಿಟ್ ಹಾಗೂ ಔಷಧ ಕಿಟ್‌ಗಳನ್ನು ವಿತರಿಸಿದರು.
ಬಳಿಕ ಮಾತನಾಡಿದ ಅವರು, ಪ್ರಸ್ತುತ ಪರಿಸ್ಥಿತಿಯಲ್ಲಿ ಕಾಂಗ್ರೆಸ್ ಪಕ್ಷ ಜನಪರವಾಗಿ ಕೆಲಸ ಮಾಡುತ್ತಿದೆ. ನೊಂದವರಿಗೆ ಸ್ಪಂದಿಸುತ್ತ ರಾಜಕೀಯವಲ್ಲದೆ ಸಾಮಾಜಿಕವಾಗಿ ದುಡಿಯುತ್ತಿದೆ. ಇದುವರೆಗೂ ನೂರಾರೂ ಕೋಟಿ ರೂಪಾಯಿ ಹಣವನ್ನು ಪಕ್ಷ ನೊಂದವರಿಗಾಗಿ ಮೀಸಲಿರಿಸಿ ಕಷ್ಟಗಳಿಗೆ ಸ್ಪಂದಿಸಿದೆ ಎಂದರು.
ಈ ಸಂದರ್ಭ ವಿಧಾನ ಪರಿಷತ್ ಸದಸ್ಯೆ ಶಾಂತೆಯAಡ ವೀಣಾ ಅಚ್ಚಯ್ಯ, ಕಾಂಗ್ರೆಸ್ ಕಾರ್ಯಾಧ್ಯಕ್ಷ ತೀತಿರ ಧರ್ಮಜ ಉತ್ತಪ್ಪ, ಮಾಜಿ ಅಧ್ಯಕ್ಷ ಟಿ.ಪಿ. ರಮೇಶ್, ಮಹಿಳಾ ಘಟಕದ ಅಧ್ಯಕ್ಷೆ ಸುರಯ್ಯ ಅಬ್ರಾರ್, ಸೇವಾದಳ ಅಧ್ಯಕ್ಷ ಚಿಲುವಂಡ ಕಾವೇರಪ್ಪ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಥೆರೆಸಾ ವಿಕ್ಟರ್, ಪ್ರಮಖರಾದ ಕಾನೆಹಿತ್ಲು ಮೊಣ್ಣಪ್ಪ, ಸಾಮಾಜಿಕ ಜಾಲತಾಣ ಘಟಕದ ಅಧ್ಯಕ್ಷ ಸೂರಜ್ ಹೊಸೂರು, ಮಾಜಿ ಜಿ.ಪಂ ಸದಸ್ಯ ಪಿ.ಎಂ. ಲತೀಫ್ ಸೇರಿದಂತೆ ಇನ್ನಿತರರು ಹಾಜರಿದ್ದರು. ಪತ್ರಿಕಾ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷೆ ಸವಿತಾ ರೈ, ಕೊಡಗು ಪ್ರೆಸ್‌ಕ್ಲಬ್ ಅಧ್ಯಕ್ಷ ಅಜ್ಜಮಾಡ ರಮೇಶ್ ಕುಟ್ಟಪ್ಪ ಉಪಸ್ಥಿತರಿದ್ದರು.ಸೋಮವಾರಪೇಟೆ: ಕೊಡಗು ಜಿಲ್ಲಾ ವೀರಶೈವ ಲಿಂಗಾಯತ ಜಂಗಮ ಅರ್ಚಕರು ಹಾಗೂ ಪುರೋಹಿತರಿಗೆ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಅವರು ಆಹಾರ ಸಾಮಗ್ರಿಗಳ ಕಿಟ್ ವಿತರಿಸಿದರು.
ಇಲ್ಲಿನ ವಿರಕ್ತ ಮಠದ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ, ಜಿಲ್ಲೆಯ ವಿವಿಧ ಭಾಗಗಳಿಂದ ಆಗಮಿಸಿದ್ದ ೬೦ಕ್ಕೂ ಅಧಿಕ ಅರ್ಚಕರಿಗೆ ಕಿಟ್ ವಿತರಿಸಲಾಯಿತು. ಈ ಸಂದರ್ಭ ಕಿರಿಕೊಡ್ಲಿ ಮಠಾಧೀಶರಾದ ಶ್ರೀಸದಾಶಿವ ಸ್ವಾಮೀಜಿ, ವಿಧಾನ ಪರಿಷತ್ ಸದಸ್ಯ ಸುನಿಲ್ ಸುಬ್ರಮಣಿ, ಜಿ.ಪಂ. ಮಾಜಿ ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್, ಪೊಲೀಸ್ ಇನ್ಸ್ಪೆಕ್ಟರ್ ಪರಶಿವಮೂರ್ತಿ, ಅರ್ಚಕರ ಸಂಘದ ಅಧ್ಯಕ್ಷ ಮೋಹನ್‌ಮೂರ್ತಿ ಶಾಸ್ತಿç ಸೇರಿದಂತೆ ಇತರರು ಉಪಸ್ಥಿತರಿದ್ದರು.ನಾಪೋಕ್ಲು: ಕುಂಜಿಲ-ಕಕ್ಕಬ್ಬೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೊರೊನಾ ಸೋಂಕಿತರಿಗೆ ಗ್ರಾಮ ಪಂಚಾಯಿತಿ ಸದಸ್ಯರ ಮಾಸಿಕ ವೇತನದಿಂದ ಅಗತ್ಯ ವಸ್ತುಗಳ ಕಿಟ್ ವಿತರಿಸಲಾಯಿತು.
ಈ ಸಂದರ್ಭ ಗ್ರಾಮ ಪಂಚಾಯಿತಿ ಅಧ್ಯಕ್ಷ ಕಲಿಯಂಡ ಸಂಪನ್ ಅಯ್ಯಪ್ಪ, ಉಪಾಧ್ಯಕ್ಷೆ ರಶೀನಾ ಹಾಗೂ ಸದಸ್ಯರು ಇದ್ದರು.ಸೋಮವಾರಪೇಟೆ: ಇಲ್ಲಿನ ಪಟ್ಟಣ ಪಂಚಾಯಿತಿಯಲ್ಲಿ ಕೆಲಸ ಮಾಡುತ್ತಿರುವ ಪೌರ ಕಾರ್ಮಿಕರಿಗೆ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಅವರು ಆಹಾರ ಸಾಮಗ್ರಿಗಳ ಕಿಟ್ ವಿತರಿಸಿದರು.
ಪೌರ ಕಾರ್ಮಿಕರು ಪಟ್ಟಣದ ಸ್ವಚ್ಛತೆಯೊಂದಿಗೆ ತಮ್ಮ ಆರೋಗ್ಯದ ಸ್ವಚ್ಛತೆಯತ್ತಲೂ ಗಮನ ಹರಿಸಬೇಕು. ಕೊರೊನಾ ವೈರಸ್ ವಿರುದ್ಧ ಜಾಗ್ರತೆ ವಹಿಸಬೇಕು. ಮೂಗು ಮತ್ತು ಬಾಯಿ ಮುಚ್ಚುವಂತೆ ಮಾಸ್ಕ್ ಧರಿಸಬೇಕು ಎಂದರು.
ಕಾರ್ಯಕ್ರಮದಲ್ಲಿ ಪ.ಪಂ. ವ್ಯಾಪ್ತಿಯ ೩೩ ಮಂದಿ ಪೌರ ಕಾರ್ಮಿಕರು, ಐವರು ಆ್ಯಂಬ್ಯುಲೆನ್ಸ್ ಸಿಬ್ಬಂದಿಗಳು, ನಾಲ್ವರು ಅಂಗನವಾಡಿ ಕಾರ್ಯಕರ್ತೆಯರಿಗೆ ಕಿಟ್ ವಿತರಿಸಲಾಯಿತು.
ಈ ಸಂದರ್ಭ ಕಿರಿಕೊಡ್ಲಿ ಮಠಾಧೀಶ ಶ್ರೀ ಸದಾಶಿವ ಸ್ವಾಮೀಜಿ, ವಿಧಾನ ಪರಿಷತ್ ಸದಸ್ಯ ಸುನಿಲ್ ಸುಬ್ರಮಣಿ, ಮಾಜಿ ಸದಸ್ಯ ಎಸ್.ಜಿ. ಮೇದಪ್ಪ, ಜಿ.ಪಂ. ಮಾಜಿ ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್, ತಾ.ಪಂ. ಮಾಜಿ ಉಪಾಧ್ಯಕ್ಷ ಅಭಿಮನ್ಯುಕುಮಾರ್, ಬಿಜೆಪಿ ಮಂಡಲ ಅಧ್ಯಕ್ಷ ಮನುಕುಮಾರ್ ರೈ, ಪ.ಪಂ. ಪ್ರಭಾರ ಅಧ್ಯಕ್ಷ ಸಂಜೀವ, ಮುಖ್ಯಾಧಿಕಾರಿ ನಾಚಪ್ಪ ಸೇರಿದಂತೆ ಸದಸ್ಯರು ಉಪಸ್ಥಿತರಿದ್ದರು.*ವೀರಾಜಪೇಟೆ: ಕೊರೊನಾ ಸಂಕಷ್ಟದ ಬಳಿಕ ಕಟ್ಟಡ ಕಾರ್ಮಿಕರು, ಕಾರ್ಪೆಂಟರ್‌ಗಳು ಹಾಗೂ ಇತರ ನಿರ್ಮಾಣ ಕಾರ್ಮಿಕರು ಕಷ್ಟದಲ್ಲಿರುವುದನ್ನು ಮನಗಂಡು ಅವರಿಗೆ ಹಲವು ಉಪಯುಕ್ತ ಕಿಟ್‌ಗಳನ್ನು ಸರ್ಕಾರದ ವತಿಯಿಂದ ವೀರಾಜಪೇಟೆ ಕ್ಷೇತ್ರದ ಶಾಸಕ ಕೆ.ಜಿ. ಬೋಪಯ್ಯ ವಿತರಣೆ ಮಾಡಿದರು.
ವೀರಾಜಪೇಟೆ ತಾಲೂಕು ಕಚೇರಿಯ ಆವರಣದಲ್ಲಿ ಪರಿಕರಗಳ ಕಿಟ್, ಕಾರ್ಪೆಂಟರ್ ಕಿಟ್, ಮಹಿಳಾ ಕಾರ್ಮಿಕರಿಗೆ ಸುರಕ್ಷತಾ ಕಿಟ್‌ಗಳನ್ನೂ ನೀಡಲಾಯಿತು. ಈ ಸಂದರ್ಭ ತಾಲೂಕು ದಂಡಾಧಿಕಾರಿ ಯೋಗಾನಂದ, ಪಟ್ಟಣ ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷೆ ಸುನಿತಾ, ಕಾರ್ಮಿಕ ಇಲಾಖೆ ಅಧಿಕಾರಿ ಜಯಣ್ಣ ಹಾಜರಿದ್ದರು.ಚೆಯ್ಯಂಡಾಣೆ: ವೀರಾಜಪೇಟೆ ಸಮೀಪದ ಆರ್ಜಿ ಗ್ರಾಮದಲ್ಲಿ ಕಾರ್ಯಾಚರಿಸುವ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿನ ಹೋಂಕ್ವಾರೆAಟೈನ್‌ನಲ್ಲಿ ಕಾರ್ಯನಿರ್ವಹಿಸುವ ಆರೋಗ್ಯ ಸಿಬ್ಬಂದಿಗಳಿಗೆ ಆಲ್ ಇಂಡಿಯಾ ಮುಸ್ಲಿಂ ಡೆವಲಪ್‌ಮೆಂಟ್ ಫೋರಂನ ವೀರಾಜಪೇಟೆ ತಾಲೂಕು ಸಮಿತಿ ಅಧ್ಯಕ್ಷ ಫತಾಯಿ ಕಡಂಗ ಅವರ ಮುಂದಾಳತ್ವದಲ್ಲಿ ಮಾಸ್ಕ್ ವಿತರಿಸಲಾಯಿತು.
ಈ ಸಂದರ್ಭ ಸಂಘಟನೆಯ ಪದಾಧಿಕಾರಿಗಳಾದ ಅಬ್ದುಲ್ ಮಜೀದ್ ಚೊಕಂಡಹಳ್ಳಿ, ಅಶ್ರಫ್ ಸಿ.ಎ. ಕಡಂಗ, ಸೈಫುದ್ದೀನ್ ಚಾಮಿಯಾಲ್, ರಜಾಕ್ ಸಿ.ಎ. ಚೆಯ್ಯಂಡಾಣೆ ಹಾಜರಿದ್ದರು.ಚೆಟ್ಟಳ್ಳಿ: ಚೆಟ್ಟಳ್ಳಿಯ ಅವರ್ಸ್ ಕ್ಲಬ್‌ನ ಕೆಲವು ಮಹಿಳಾ ಸದಸ್ಯರು ಚೆಟ್ಟಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಸಾನಿಟೈಸರ್, ಮಾಸ್ಕ್, ಪಿಪಿಇ ಕಿಟ್ ನೀಡಿದರು.
ಕ್ಲಬ್‌ನ ಸದಸ್ಯರುಗಳಾದ ಕೊಂಗೇಟಿರ ಕುಸುಮ ಪೊನ್ನಪ್ಪ, ಕೊಂಗAಡ ವಿಜಯ್ ಮುತ್ತಣ್ಣ, ಮುಳ್ಳಂಡ ಸುಶೀಲ ತಮ್ಮಯ್ಯ, ಮನೆಪಂಡ ಅಂಜಲಿ ಸೋಮಯ್ಯ, ಕೊಂಗೇಟಿರ ಸಂಗೀತ ಅಚ್ಚಪ್ಪ, ಕೇಟೋಳಿರ ವೀಣಾ ಚಂಗಪ್ಪ, ಬಿದ್ದಂಡ ನಳಿನಿ ಅಚ್ಚಯ್ಯ, ಕಾಯಪಂಡ ಸುಮಾ ತಿಮ್ಮಯ್ಯ, ಐಚೆಟ್ಟಿರ ದೇಚಿ ಕುಟ್ಟಪ್ಪ, ಕೊಂಗೇಟಿರ ದೇಚು ಮುದ್ದಯ್ಯ ಒಟ್ಟುಸೇರಿ ಕೊರೊನಾ ನಿಯಂತ್ರಣಕ್ಕೆ ಬೇಕಾದ ಸ್ಯಾನಿಟೈಸರ್, ಮಾಸ್ಕ್, ಪಿಪಿಇ ಕಿಟ್‌ಗಳನ್ನು ಸ್ವಂತ ಖರ್ಚಿನಿಂದ ಖರೀದಿಸಿ ಚೆಟ್ಟಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ನೀಡಿದರು. ಕೊಂಗೇಟಿರ ದೇಚು ಮುದ್ದಯ್ಯ ೫೦೦ ಮಾಸ್ಕ್ಗಳನ್ನು ನೀಡಿದರು.
ಈ ಸಂದರ್ಭ ಚೆಟ್ಟಳ್ಳಿ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಗೌತಮ್, ಶುಶ್ರೂಷಕಿಯರು ಹಾಗೂ ಆಶಾ ಕಾರ್ಯಕರ್ತೆಯರು ಹಾಜರಿದ್ದರು.ಚೆಟ್ಟಳ್ಳಿ: ಚೆಟ್ಟಳ್ಳಿಯ ಅವರ್ಸ್ ಕ್ಲಬ್‌ನ ಕೆಲವು ಮಹಿಳಾ ಸದಸ್ಯರು ಚೆಟ್ಟಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಸಾನಿಟೈಸರ್, ಮಾಸ್ಕ್, ಪಿಪಿಇ ಕಿಟ್ ನೀಡಿದರು.
ಕ್ಲಬ್‌ನ ಸದಸ್ಯರುಗಳಾದ ಕೊಂಗೇಟಿರ ಕುಸುಮ ಪೊನ್ನಪ್ಪ, ಕೊಂಗAಡ ವಿಜಯ್ ಮುತ್ತಣ್ಣ, ಮುಳ್ಳಂಡ ಸುಶೀಲ ತಮ್ಮಯ್ಯ, ಮನೆಪಂಡ ಅಂಜಲಿ ಸೋಮಯ್ಯ, ಕೊಂಗೇಟಿರ ಸಂಗೀತ ಅಚ್ಚಪ್ಪ, ಕೇಟೋಳಿರ ವೀಣಾ ಚಂಗಪ್ಪ, ಬಿದ್ದಂಡ ನಳಿನಿ ಅಚ್ಚಯ್ಯ, ಕಾಯಪಂಡ ಸುಮಾ ತಿಮ್ಮಯ್ಯ, ಐಚೆಟ್ಟಿರ ದೇಚಿ ಕುಟ್ಟಪ್ಪ, ಕೊಂಗೇಟಿರ ದೇಚು ಮುದ್ದಯ್ಯ ಒಟ್ಟುಸೇರಿ ಕೊರೊನಾ ನಿಯಂತ್ರಣಕ್ಕೆ ಬೇಕಾದ ಸ್ಯಾನಿಟೈಸರ್, ಮಾಸ್ಕ್, ಪಿಪಿಇ ಕಿಟ್‌ಗಳನ್ನು ಸ್ವಂತ ಖರ್ಚಿನಿಂದ ಖರೀದಿಸಿ ಚೆಟ್ಟಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ನೀಡಿದರು. ಕೊಂಗೇಟಿರ ದೇಚು ಮುದ್ದಯ್ಯ ೫೦೦ ಮಾಸ್ಕ್ಗಳನ್ನು ನೀಡಿದರು.
ಈ ಸಂದರ್ಭ ಚೆಟ್ಟಳ್ಳಿ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಗೌತಮ್, ಶುಶ್ರೂಷಕಿಯರು ಹಾಗೂ ಆಶಾ ಕಾರ್ಯಕರ್ತೆಯರು ಹಾಜರಿದ್ದರು.ಕುಶಾಲನಗರ ರೋಟರಿ ಸಂಸ್ಥೆ
ಗುಡ್ಡೆಹೊಸೂರು: ಕುಶಾಲನಗರದ ರೋಟರಿ ಸಂಸ್ಥೆ ವತಿಯಿಂದ ಸುಂಟಿಕೊಪ್ಪದ ವಿಕಾಸ್ ಜನಸೇವಾ ಟ್ರಸ್ಟ್ನ ವೃದ್ಧಾಶ್ರಮಕ್ಕೆ ದಿನಸಿ ವಸ್ತುಗಳನ್ನು ನೀಡಲಾಯಿತು.
ಈ ಸಂದರ್ಭ ರೋಟರಿ ಅಧ್ಯಕ್ಷ ಚಂದ್ರಶೇಖರ್, ಖಜಾಂಚಿ ಪ್ರೇಮ್‌ಚಂದನ್, ಕಾರ್ಯದರ್ಶಿ ಉಲ್ಲಾಸ್ ಕೃಷ್ಣ ಹಾಜರಿದ್ದು ದಿನಸಿ ವಸ್ತುಗಳನ್ನು ನೀಡಿದರು.ಮರಂದೋಡ ಸ.ಕಿ.ಪ್ರಾ. ಶಾಲಾ ವಿದ್ಯಾರ್ಥಿಗಳ ಪೋಷಕರಿಗೆ
ನಾಪೋಕ್ಲು: ಮರಂದೋಡ ಸರಕಾರಿ ಕಿರಿಯ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳ ಪೋಷಕರಿಗೆ ಆಹಾರ ಧಾನ್ಯ ವಿತರಿಸಲಾಯಿತು. ಈ ಸಂದರ್ಭ ಶಾಲಾ ಮುಖ್ಯೋಪಾಧ್ಯಾಯರು, ಎಸ್‌ಡಿಎಂಸಿ ಅಧ್ಯಕ್ಷರು, ಗ್ರಾಮ ಪಂಚಾಯಿತಿ ಸದಸ್ಯರು ಇದ್ದರು.ಚೆಟ್ಟಳ್ಳಿ: ಗರ್ವಾಲೆ, ಕಿರಗಂದೂರು, ಐಗೂರು, ಬೇಳೂರು, ಚೌಡ್ಲು, ಹಾನಗಲ್ಲು, ಬೆಟ್ಟದಳ್ಳಿ, ಶಾಂತಳ್ಳಿ, ತೋಳೂರು ಶೆಟ್ಟಳ್ಳಿ ಗ್ರಾಮ ಪಂಚಾಯಿತಿಯ ವ್ಯಾಪ್ತಿಯಲ್ಲಿ ಕೊರೊನಾದಿಂದ ಹೋಂಕ್ವಾರAಟೈನ್‌ಗೆ ಒಳಗಾಗಿದ್ದ ರೋಗಿಗಳಿಗೆ ಹಾಗೂ ಅಂಗನವಾಡಿ ಕಾರ್ಯಕರ್ತೆಯರಿಗೆ, ಪಂಚಾಯಿತಿ ವ್ಯಾಪ್ತಿಯಲ್ಲಿ ನೀರು ಬಿಡುವ ಸಿಬ್ಬಂದಿಗೆ ಹಾಗೂ ಆಶಾ ಕಾರ್ಯಕರ್ತೆಯರಿಗೆ ಮಡಿಕೇರಿ ಕ್ಷೇತ್ರದ ಶಾಸಕ ಅಪ್ಪಚ್ಚು ರಂಜನ್ ಸ್ವಂತ ಖರ್ಚಿನಲ್ಲಿ ಆಹಾರದ ಕಿಟ್ ವಿತರಿಸಿದರು.