ಮಡಿಕೇರಿ, ಜು. ೧: ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ ಏಪ್ರಿಲ್ ೧ ರಿಂದ ಅನ್ವಯವಾಗುವಂತೆ ವಿದ್ಯುತ್ ದರವನ್ನು ಪ್ರತಿ ಯೂನಿಟಿಗೆ ೩೦ ಪೈಸೆ ಏರಿಸಿರುವುದು ಅವೈಜ್ಞಾನಿಕವಾದ ನಿರ್ಧಾರವಾಗಿದೆ. ಕಳೆದ ಒಂದು ವರ್ಷದ ಅವಧಿಯಲ್ಲಿ ಸರಕಾರ ವಿದ್ಯುತ್ ದರವನ್ನು ಮೂರು ಬಾರಿ ಏರಿಕೆ ಮಾಡಿದೆ. ವಿದ್ಯುತ್ ಖರೀದಿ ದರ ತೀರಾ ಇಳಿಮುಖವಾಗಿರುವ ಸಂದರ್ಭದಲ್ಲಿ ವಿದ್ಯುತ್ ದರವನ್ನು ಆಯೋಗ ಏರಿಸಿರುವುದು ಜನತೆಯ ಮೇಲೆ ಹೇರಿದ ಇನ್ನೊಂದು ಹೊರೆಯಾಗಿದೆಯೆಂದೂ ಕರ್ನಾಟಕ ಪ್ರದೇಶ ಕಾಂಗ್ರೆಸ್‌ನ ಮಾದ್ಯಮ ಸಂವಹನ ವಕ್ತಾರರಾದ ಟಿ.ಪಿ. ರಮೇಶ್ ಆರೋಪಿಸಿದ್ದಾರೆ.

ಕೊರೊನಾ ಸಂದರ್ಭದಲ್ಲಿ ಕೆಲಸವಿಲ್ಲದೆ ಜನರು ದಿನ ಕಳೆಯುವುದೇ ಕಷ್ಟಕರವಾಗಿದೆ. ಪಡಿತರ ಅಕ್ಕಿ ಬಿಟ್ಟಂತೆ ಬೇರೆ ಯಾವುದೇ ಸಾಮಗ್ರಿಗಳನ್ನು ಖರೀದಿಸಲು ಜನಸಾಮಾನ್ಯರಿಗೆ ಆಗುತ್ತಿಲ್ಲ. ಪೆಟ್ರೋಲ್, ಡೀಸೆಲ್ ಹಾಗೂ ಅಡಿಗೆ ಅನಿಲ ದರ ದಿನದಿಂದ ದಿನಕ್ಕೆ ಏರಿಕೆಯಿಂದಾಗಿ ಜನ ಕಂಗಾಲಾಗಿದ್ದಾರೆ. ಬಿ.ಜೆ.ಪಿ. ಸರಕಾರ ಬೆಲೆ ಏರಿಸಿ ಜನರ ತಾಳ್ಮೆಯನ್ನು ಕೆದಕಲು ಪ್ರಾರಂಭಿಸಿದೆ. ಕೊರೊನಾ ಸಂದರ್ಭದಲ್ಲಿ ವಿರೋಧ ಪಕ್ಷಗಳು ಬೆಲೆ ಏರಿಕೆಯ ವಿರುದ್ಧ ಹೋರಾಡಲು ಅವಕಾಶವಿಲ್ಲದಾಗಿದೆ. ಇದನ್ನು ದುರುಪಯೋಗ ಪಡಿಸಿಕೊಂಡು ಸರಕಾರ ಅಗತ್ಯ ವಸ್ತುಗಳ ಬೆಲೆ ಏರಿಸುತ್ತಿರುವುದು ಖಂಡನೀಯವೆAದು ರಮೇಶ್ ಹೇಳಿದ್ದಾರೆ.

ರಾಜ್ಯದಲ್ಲಿ ಹಾಗೂ ನಮ್ಮ ದೇಶದಲ್ಲಿ ವಿದ್ಯುತ್ ಉತ್ಪಾದನಾ ವಲಯಗಳಾದ ಸಕ್ಕರೆ ಕಾರ್ಖಾನೆಗಳಲ್ಲಿ ಉತ್ಪಾದಿಸುತ್ತಿರುವ ವಿದ್ಯುತ್ ಅನ್ನು ಆಯೋಗ ೨೦೧೦-೧೧ನೇ ಸಾಲಿನಲ್ಲಿ ಯೂನಿಟಿಗೆ ರೂ.೫.೫೦ ರಂತೆ ಖರೀದಿಸುತ್ತಿತ್ತು. ಈಗ ಖರೀದಿ ದರ ಯೂನಿಟಿಗೆ ರೂ.೩.೧೦ಕ್ಕೆ ಇಳಿದಿದೆ. ಸೋಲಾರ್ ವಿದ್ಯುತ್ತನ್ನು ಯೂನಿಟಿಗೆ ರೂ. ೧೭ ಕ್ಕೆ ಖರೀದಿಸುತ್ತಿದ್ದುದ್ದನ್ನು ಈಗ ಯೂನಿಟಿಗೆ ರೂ.೨ ರಂತೆ ಖರೀದಿಸಲಾಗುತ್ತಿದೆ. ವಿದ್ಯುತ್ ಮಾರಾಟದ ಬೆಲೆ ಕಡಿಮೆ ಆದಾಗ ಪ್ರಸರಣ ಅಯೋಗ ವಿದ್ಯುತ್ ದರ ಇಳಿಸಬೇಕು. ಇದು ವ್ಯಾಪಾರದ ನ್ಯಾಯ ಕೂಡ. ಗ್ರಾಹಕರ ಮೇಲೆ ವಿಧಿಸಿರುವ ವಿದ್ಯುತ್ ದರವನ್ನು ಸರಕಾರ ಹಿಂದಕ್ಕೆ ಪಡೆಯಲು ಮುಂದಾಗಬೇಕೆAದೂ ರಮೇಶ್ ಒತ್ತಾಯಿಸಿದ್ದಾರೆ.

ರೈತರ ೧೦ ಹೆಚ್.ಪಿ. ಪಂಪ್‌ಸೆಟ್‌ಗೆ, ಭಾಗ್ಯಜ್ಯೋತಿ ಹಾಗೂ ಕುಟೀರ ಜ್ಯೋತಿ ಯೋಜನೆಗಳಿಗೆ ಉಚಿತವಾಗಿ ಸರಬರಾಜು ಮಾಡುತ್ತಿರುವ ವಿದ್ಯುತ್ ದರವನ್ನು ಸರಕಾರ ಪ್ರಸರಣ ಆಯೋಗಕ್ಕೆ ನೀಡುತ್ತಿಲ್ಲವೇ? ಎಂದು ರಮೇಶ್ ಹೇಳಿದ್ದಾರೆ.