ಸಿದ್ದಾಪುರ, ಜು. ೧: ಗಂಡನ ನಿಧನದ ಮರು ದಿನ ಹೆಂಡತಿ ಮೃತಪಟ್ಟ ಘಟನೆ ಸಿದ್ದಾಪುರದಲ್ಲಿ ನಡೆದಿದೆ. ಕಳೆದ ಕೆಲವು ಸಮಯಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ದಂಪತಿ ಒಂದೇ ದಿನದ ಅಂತರದಲ್ಲಿ ನಿಧನರಾಗಿದ್ದಾರೆ. ಸಿದ್ದಾಪುರ ಮಡಿಕೇರಿ ರಸ್ತೆಯ ನಿವಾಸಿ ಗುಜರಿ ವ್ಯಾಪಾರಿ ಕೆ. ನಝೀರ್ (೮೪) ಅನಾರೋಗ್ಯದಿಂದ ಜೂನ್ ೩೦ ರಂದು ನಿಧನರಾಗಿದ್ದರು. ನಝೀರ್ ಅವರ ಪತ್ನಿ ಜಮಾಲ್ಬೀ (೭೫) ಜುಲೈ ೧ ರಂದು ನಿಧನರಾಗಿದ್ದಾರೆ. ಮೃತ ದಂಪತಿ ಆರು ಪುತ್ರಿಯರು ಹಾಗೂ ಓರ್ವ ಪುತ್ರನನ್ನು ಅಗಲಿದ್ದಾರೆ.