*ಗೋಣಿಕೊಪ್ಪ, ಜು. ೧: ರೋಟರಿ ಸಂಸ್ಥಾಪನೆ ದಿನಾಚರಣೆಯ ಅಂಗವಾಗಿ ಗೋಣಿಕೊಪ್ಪ ರೋಟರಿ ಸಂಸ್ಥೆ ಆಯೋಜಿಸಿದ್ದ ಲಸಿಕೆ ಅಭಿಯಾನದ ಜಾಗೃತಿ ಬಿತ್ತಿಪತ್ರವನ್ನು ಶಾಸಕ ಕೆ.ಜಿ. ಬೋಪಯ್ಯ ಬಿಡುಗಡೆಗೊಳಿಸಿದರು.
ಕೈಕೇರಿ ರೋಟರಿ ಸಂಸ್ಥೆಯ ಕಟ್ಟಡದಲ್ಲಿ ರೋಟರಿ ರಾಜ್ಯಪಾಲ ಆದಿತ್ಯ ಹಾಗೂ ಉಪರಾಜ್ಯಪಾಲ ಹೆಚ್.ಟಿ. ಅನೀಲ್ ಅವರ ಉಪಸ್ಥಿತಿ ಯಲ್ಲಿ ಕಾರ್ಯಕ್ರಮ ಜರುಗಿತು.
ರೋಟರಿ ಸಂಸ್ಥೆಯ ಲಸಿಕೆ ಅಭಿಯಾನದ ಬಗ್ಗೆ ಶಾಸಕರು ಶ್ಲಾಘಿಸಿ ಪ್ರತಿಯೊಬ್ಬರು ವ್ಯಾಕ್ಸಿನ್ ಪಡೆದುಕೊಳ್ಳಲು ಸ್ವಯಂ ಪ್ರೇರಿತರಾಗಿ ಮುಂದೆ ಬರಬೇಕು. ತಿಳುವಳಿಕೆಯ ಕೊರತೆಯಿಂದಾಗಿ ಹಾಡಿಗಳಲ್ಲಿಯೂ ಬುಡಕಟ್ಟು ಸಮುದಾಯದವರು ಲಸಿಕೆ ಪಡೆಯಲು ಹಿಂದೇಟು ಹಾಕುತ್ತಿದ್ದಾರೆ. ಇಂತಹ ಸಮುದಾಯದವರ ಮನಪರಿವರ್ತಿಸಿ ಲಸಿಕೆ ಪಡೆದುಕೊಳ್ಳಲು ಪ್ರೇರೇಪಿಸಬೇಕಾಗಿ ಎಂದು ತಿಳಿಸಿದರು.
ಲಸಿಕೆಯಿಂದ ಯಾವುದೇ ಅಡ್ಡಪರಿಣಾಮಗಳು ಉಂಟಾಗುವು ದಿಲ್ಲ. ಪ್ರಧಾನಿ ಮೋದಿಯವರು ಲಸಿಕೆ ಪಡೆದುಕೊಳ್ಳುವಂತೆ ಕರೆ ನೀಡಿದಾಗ ಊಹಾಪೋಹಗಳಿಗೆ ಕಿವಿಗೊಟ್ಟು ಬಹಳಷ್ಟು ಜನ ಹಿಂದೇಟು ಹಾಕಿದರು. ಅದರ ಪರಿಣಾಮ ಲಸಿಕೆ ವಿತರಣಾ ಕಂಪೆನಿಗಳು ವಿದೇಶಗಳಿಗೆ ಲಸಿಕೆ ರಫುö್ತ ಮಾಡುವಲ್ಲಿ ಕ್ರಮಕೈಗೊಂಡಿತು. ಇದರ ಫಲದಿಂದ ದೇಶದಲ್ಲಿ ಲಸಿಕೆ ಕೊರತೆ ಎದುರಾಗಲು ಕಾರಣವಾಗಿದೆ ಎಂದು ಅಭಿಪ್ರಾಯಪಟ್ಟರು. ರಾಜ್ಯದಲ್ಲಿ ಪಾಸಿಟಿವ್ ರೇಟ್ ಕುಂಠಿತಗೊAಡಿ ದ್ದರೂ, ಕೊಡಗಿನಲ್ಲಿ ಹೆಚ್ಚಾಗುತ್ತಿದೆ. ಇದಕ್ಕೆ ಜಿಲ್ಲೆಯಲ್ಲಿ ಬಹಳಷ್ಟು ಜನ ನಿಯಮಪಾಲನೆಯನ್ನು ಮರೆತ್ತಿರು ವುದು ಜೊತೆಗೆ ನಿಯಮ ಮೀರಿ ಹೋಂಸ್ಟೇಗಳ ಕಾರ್ಯನಿರ್ವಹಣೆ, ಅಸ್ಸಾಂ ಕಾರ್ಮಿಕರ ಪ್ರವೇಶದಿಂದ ಪರಿಸ್ಥಿತಿ ಬಿಕ್ಕಟಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಕಾರ್ಯಾಂಗ, ನ್ಯಾಯಾಂಗದಷ್ಟೇ ಪತ್ರಿಕಾ ರಂಗವೂ ಕಾರ್ಯನಿರ್ವಹಿಸು ತ್ತಿದೆ. ಕೊರೊನಾ ಕಾಲಘಟ್ಟದಲ್ಲಿಯೂ ಮುಂಚೂಣಿ ಸೇವೆಯನ್ನು ಸಲ್ಲಿಸಿರುವುದು ಹೆಮ್ಮೆ ತಂದಿದೆ ಎಂದು ಪತ್ರಕರ್ತರ ಕಾರ್ಯವನ್ನು ಶ್ಲಾಘಿಸಿದರು.
ರೋಟರಿ ಸಂಸ್ಥೆಯ ರಾಜ್ಯ ಉಪರಾಜ್ಯಪಾಲ ಎಚ್.ಟಿ. ಅನಿಲ್ ಮಾತನಾಡಿ ಜುಲೈ ೧ ರಂದು ರೋಟರಿ ಸಂಸ್ಥಾಪನಾ ದಿನಾಚರಣೆಯನ್ನು ಆಚರಿಸಲಾಗುತ್ತಿದೆ. ಸುಮಾರು ೩೫ ಸಾವಿರ ಸಂಸ್ಥೆಯ ಅಧ್ಯಕ್ಷರು, ಕಾರ್ಯದರ್ಶಿಗಳು ೧ ಲಕ್ಷ ಪದಾಧಿಕಾರಿಗಳ ನೂತನ ಅಧಿಕಾರಕ್ಕೆ ಚಾಲನೆ ದೊರೆಯುತ್ತದೆ ಎಂದು ಹೇಳಿದರು. ರೋಟರಿ ಸಂಸ್ಥೆಯಿAದ ಹಸಿರುಕರಣ ಯೋಜನೆಯಡಿಯಲ್ಲಿ ಹಿರಿಯ ನಾಗರೀಕರು ಮತ್ತು ಮಹಿಳೆ ಮತ್ತು ಮಕ್ಕಳಿಗಾಗಿ ಗೋಣಿಕೊಪ್ಪ, ಪೊನ್ನಂಪೇಟೆ ವ್ಯಾಪ್ತಿಯಲ್ಲಿ ಉದ್ಯಾನವನ ನಿರ್ಮಿಸುವ ಯೋಜನೆ ಜಿಲ್ಲೆಯಾದ್ಯಂತ ರುದ್ರಭೂಮಿ ಅಭಿವೃದ್ಧಿ ಸೇರಿದಂತೆ ಹಲವು ಯೋಜನೆಗಳನ್ನು ಪ್ರಸ್ತುತ ವರ್ಷದಲ್ಲಿ ಕಾರ್ಯಗತಗೊಳಿಸುವ ಯೋಜನೆ ರೂಪಿಸಿಕೊಂಡಿದೆ ಎಂದು ಮಾಹಿತಿ ನೀಡಿದರು.
ಇದೇ ಸಂದರ್ಭ ಗೋಣಿಕೊಪ್ಪ ರೋಟರಿ ಸಂಸ್ಥೆಯ ಅಧ್ಯಕ್ಷೆ ನೀತಾ ಕಾವೇರಮ್ಮ ನೇತೃತ್ವದಲ್ಲಿ ತಾಲೂಕು ವೈದ್ಯಾಧಿಕಾರಿ ಡಾ. ಯತಿರಾಜ್, ಹಿರಿಯ ಪತ್ರಕರ್ತ ಅನಿಲ್ ಹೆಚ್.ಟಿ, ಸುದ್ದಿಸಂಸ್ಥೆಯ ಮುಖ್ಯಸ್ಥ ಹಾಗೂ ಹಿರಿಯ ಪತ್ರಕರ್ತ ಟಿ.ಎಲ್. ಶ್ರೀನಿವಾಸ್, ವಿಜಯಕರ್ನಾಟಕ ವರದಿಗಾರ ಜಗದೀಶ್ ಜೋಡುಬೀಟಿ, ‘ಶಕ್ತಿ’ ವರದಿಗಾರ ಎನ್.ಎನ್. ದಿನೇಶ್, ಹೆಚ್.ಕೆ. ಜಗದೀಶ್, ವಿಜಯವಾಣಿ ಕಿಶೋರ್‌ನಾಚಪ್ಪ, ಹೊಸದಿಂಗತ ವರದಿಗಾರ ಕುಪ್ಪಂಡ ದತ್ತಾತ್ರಿ, ಪ್ರಜಾಸತ್ಯ ವರದಿಗಾರ ಮನೋಜ್ ಇವರುಗಳನ್ನು ಸನ್ಮಾನಿಸಲಾಯಿತು. ಗೋಣಿಕೊಪ್ಪ ರೋಟರಿ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಜಪ್ಪೆಕೊಡಿ ಸುಭಾಷಿಣಿ, ರಾಜ್ಯಪಾಲ ಆದಿತ್ಯ, ತಾಲೂಕು ವೈದ್ಯಾಧೀಕಾರಿ ಡಾ. ಯತಿರಾಜ್, ಪೊನ್ನಂಪೇಟೆ ಎ.ಪಿ.ಸಿ.ಎಂ. ಅಧ್ಯಕ್ಷೆ ಮುದ್ದಿಯಡ ಡಿ. ಮಂಜುಗಣಪತಿ, ಡಾ. ಚಂದ್ರಶೇಖರ್, ರೋಟರಿ ಸಂಸ್ಥೆಯ ಪದಾಧಿಕಾರಿಗಳು ಹಾಜರಿದ್ದರು.
-ಎನ್.ಎನ್. ದಿನೇಶ್