ಮಡಿಕೇರಿ, ಜು. ೧: ಗೋಣಿಕೊಪ್ಪಲುವಿನ ಲೋಪಾಮುದ್ರ ದೃಷ್ಟಿ ಸೂಪರ್ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆಯ ವೈದ್ಯರಾದ ಮುಕ್ಕಾಟಿರ ಡಾ. ಸೌಮ್ಯ ನಾಣಯ್ಯ ಅವರು ‘‘ಇಂಟರ್‌ನ್ಯಾಷನಲ್ ಆಪ್ತಾಲ್‌ಮಿಕ್ ಹೀರೋ’’ ಎಂದು ಆಲ್ ಇಂಡಿಯಾ ಆಪ್ತಲ್ ಮೊಲಾಜಿಕಲ್ ಸೊಸೈಟಿ ಮೂಲಕ ಗುರುತಿಸ ಲ್ಪಟ್ಟಿದ್ದು, ಪ್ರಶಸ್ತಿ ಪಡೆದುಕೊಂಡಿದ್ದಾರೆ. ವರ್ಲ್ಡ್ ಆಪ್ತಲ್ ಮೊಲಾಜಿ ಕಾಂಗ್ರೆಸ್ ಇವರಿಗೆ ಈ ಪ್ರಶಸ್ತಿಯನ್ನು ನೀಡಿದೆ. ಕಣ್ಣಿನ ಸಮಸ್ಯೆಯ ಬಗ್ಗೆ ಇವರು ಮಂಡಿಸಿದ್ದ ಪ್ರಬಂಧಕ್ಕೆ ಈ ಪ್ರಶಸ್ತಿ ಲಭ್ಯವಾಗಿದೆ. ಈ ಹಿಂದೆಯೂ ಡಾ. ಸೌಮ್ಯ ಅವರು ೩ ಅಂತರರಾಷ್ಟಿçÃಯ ಪ್ರಶಸ್ತಿಗಳನ್ನು ಕಣ್ಣಿನ ಕುರಿತಾದ ವಿಷಯದ ಬಗ್ಗೆ ವಿಚಾರ ಮಂಡಿಸುವ ಮೂಲಕ ಪಡೆದು ಕೊಂಡಿದ್ದಾರೆ. ಇದು ನಾಲ್ಕನೆಯ ಪ್ರಶಸ್ತಿಯಾಗಿದೆ. ಯುರೋಪಿಯನ್ ಸೊಸೈಟಿ ಆಫ್ ಕ್ಯಾರ‍್ಯಾಕ್ಟ್ ಅಂಡ್ ರಿಫ್ರೆಕ್ಟಿವ್ ಸರ್ಜನ್ಸ್ ಸಮ್ಮೇಳನ ೨೦೧೩ರಲ್ಲಿ ಆ್ಯಮ್ಸ÷್ಟರ್‌ಡೆಮ್‌ನಲ್ಲಿ ನಡೆದಿದ್ದು, ಈ ಸಂದರ್ಭ ಹಾಗೂ ಸಿಂಗಾಪುರದಲ್ಲಿ ನಡೆದ

(ಮೊದಲ ಪುಟದಿಂದ) ಏಷ್ಯಾ ಫೆಸಿಫಿಕ್ ಸೊಸೈಟಿ ಸಮ್ಮೇಳನದಲ್ಲಿ ಇವರಿಗೆ ಪ್ರಶಸ್ತಿ ಬಂದಿತ್ತು. ಇವರು ಗೋಣಿಕೊಪ್ಪ ಲೋಪಾಮುದ್ರ ಆಸ್ಪತ್ರೆಯ ಮುಕ್ಕಾಟಿರ ಡಾ|| ಅಮೃತ್ ನಾಣಯ್ಯ ಅವರ ಪತ್ನಿ ಹಾಗೂ ಕರ್ತಚ್ಚಿರ ಗಣೇಶ್ ಹಾಗೂ ಜೂಬಾ ದಂಪತಿಯ ಪುತ್ರಿ.