ಕುಶಾಲನಗರ,ಜು.೧: ಕೊಡಗು ಜಿಲ್ಲೆಯಲ್ಲಿ ಲಾಕ್ ಡೌನ್ ಸಡಿಲಗೊಳ್ಳದಿದ್ದರೂ, ದೇಶದ ಹಲವು ರಾಜ್ಯಗಳ ವಲಸೆ ಕಾರ್ಮಿಕರ ತಂಡ ಜಿಲ್ಲೆಗೆ ಪ್ರವೇಶಿಸುತ್ತಿರುವುದು ಕಳೆದ ಕೆಲವು ದಿನಗಳ ಬೆಳವಣಿಗೆಯಾಗಿದೆ. ಉತ್ತರ ಭಾರತದ ೫೦ ಕ್ಕೂ ಅಧಿಕ ಕಾರ್ಮಿಕ ಕುಟುಂಬಗಳು ಜಿಲ್ಲೆಗೆ ಬುಧವಾರ ರಾತ್ರಿ ಬಸ್ ಮೂಲಕ ಆಗಮಿಸಿದ ಸಂದರ್ಭ ಗಡಿಭಾಗದ ತಪಾಸಣಾ ಅಧಿಕಾರಿಗಳು ತಡೆಯೊಡ್ಡಿದ ಪ್ರಕರಣ ಬೆಳಕಿಗೆ ಬಂದಿದೆ. ಇನ್ನೊಂದೆಡೆ ಕುಶಾಲನಗರ ವಾಹನ ತಪಾಸಣಾ ಕೇಂದ್ರದ ಮೂಲಕ ದಾಖಲೆ ಅಧಿಕಾರಿಗಳು ತಡೆಯೊಡ್ಡಿದ ಪ್ರಕರಣ ಬೆಳಕಿಗೆ ಬಂದಿದೆ. ಇನ್ನೊಂದೆಡೆ ಕುಶಾಲನಗರ ವಾಹನ ತಪಾಸಣಾ ಕೇಂದ್ರದ ಮೂಲಕ ದಾಖಲೆ ಬಂದರೆ, ದಕ್ಷಿಣ ಕೊಡಗಿನ ಆನೆ ಚೌಕೂರು ಮೂಲಕ ಬಂದವರನ್ನು ವಾಪಾಸ್ ಕಳುಹಿಸಿದ ಪ್ರಸಂಗವೂ ನಡೆಯಿತು.(ಮೊದಲ ಪುಟದಿಂದ) ಬುಧವಾರ ರಾತ್ರಿ ಅಸ್ಸಾಂ ರಾಜ್ಯದ ಸದಸ್ಯರು ಮಹಿಳೆಯರು , ಪುಟ್ಟ ಮಕ್ಕಳು ಸೇರಿದಂತೆ ೫೦ ಕ್ಕೂ ಅಧಿಕ ಮಂದಿಯ ಕುಟುಂಬ ಬಸ್ ಮೂಲಕ ಕೊಡಗು ಜಿಲ್ಲೆಗೆ ಪ್ರವೇಶಿಸುವ ಸಂದರ್ಭ ಕೊಪ್ಪ ಗಡಿಯಲ್ಲಿ ಪೊಲೀಸರು ಪರಿಶೀಲನೆ ನಡೆಸಿ ತಡೆದಿದ್ದಾರೆ. ಈ ಸಂದರ್ಭ ಕೆಲವರು ಕೊಪ್ಪ ಸೇತುವೆ ಮೂಲಕ ನಡೆದುಕೊಂಡು ಕುಶಾಲನಗರದತ್ತ ತೆರಳಿರುವ ಮಾಹಿತಿ ಲಭಿಸಿದೆ. ಈ ನಡುವೆ ಬಸ್ ಚಾಲಕ ಪರಾರಿಯಾಗಿದ್ದು, ಬಸ್ಸನ್ನು ಸ್ಥಳೀಯರು ಬೈಲುಕೊಪ್ಪ ಪೊಲೀಸರ ವಶಕ್ಕೆ ನೀಡಿದ ಘಟನೆ ನಡೆದಿದೆ.ಇದರಿಂದ ಸಮಸ್ಯೆಗೊಳಗಾದ ವಲಸಿಗ ಕಾರ್ಮಿಕರ ಕುಟುಂಬದ ಮಕ್ಕಳು ಮಹಿಳೆಯರು ರಸ್ತೆ ಬದಿಯಲ್ಲಿ ಕಂಡುಬAದ ಸಂದರ್ಭ ಬೈಲುಕೊಪ್ಪೆಯ ಹೊಟೇಲ್ ಉದ್ಯಮಿ, ಹೊಟೇಲ್ ಮಾಲೀಕ ಅಣ್ಣಪ್ಪ ಎಂಬುವವರು ಈ ತಂಡದ ಸದಸ್ಯರಿಗೆ ರಾತ್ರಿ ವೇಳೆ ಆಸರೆ ನೀಡಿ ಊಟ ತಿಂಡಿ ಕಲ್ಪಿಸುವಲ್ಲಿ ನೆರವಾಗಿದ್ದಾರೆ.ಅಸ್ಸಾಂ ರಾಜ್ಯದ ಗುವಾಹಟಿಯಿಂದ ಬೆಂಗಳೂರಿಗೆ ರೈಲು ಮೂಲಕ ಬಂದ ಕಾರ್ಮಿಕರನ್ನು ಕೊಡಗು ಜಿಲ್ಲೆಯ ಸುಂಟಿಕೊಪ್ಪ, ಸಿದ್ದಾಪುರ, ಮಡಿಕೇರಿ ಕಡೆಯ ಕಾಫಿ ತೋಟಗಳಿಗೆ ಹಾಗೂ ನೆಲ್ಲಿಹುದಿಕೇರಿಯ ಇಟ್ಟಿಗೆ ಕಾರ್ಖಾನೆಗೆ ನಿಯೋಜಿಸಲು ಅಲ್ಲಿನ ಮಾಲೀಕರು ತಿಳಿಸಿದ್ದರು ಎಂದು ಕಾರ್ಮಿಕರ ಮೇಸ್ತಿçಗಳು ಪತ್ರಿಕೆಯೊಂದಿಗೆ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.ಪ್ರಕರಣಕ್ಕೆ ಸಂಬAಧಿಸಿದAತೆ ಪಿರಿಯಾಪಟ್ಟಣ ತಾಲೂಕು ಆಡಳಿತದ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದು, ಕಾರ್ಮಿಕರನ್ನು ವಾಪಸ್ ಅವರ ಸ್ವಂತ ಸ್ಥಳಕ್ಕೆ ತೆರಳುವಂತೆ ಸೂಚಿಸಿದ್ದಾರೆ.ತೆಪ್ಪದಕಂಡಿಯ ಮೂಲಕ ಲಗ್ಗೆ ಕಣಿವೆ : ಕೂಲಿ ಕಾರ್ಮಿಕರ ಕೊರತೆಯನ್ನು ಎದುರಿಸುತ್ತಿರುವ ಕೊಡಗು ಜಿಲ್ಲೆಯ ವಿವಿಧೆಡೆಗಳ ಕಾಫಿ ತೋಟಗಳ ಮಾಲೀಕರಿಗೆ ಕಳೆದ ಹಲವು ವರ್ಷಗಳಿಂದಲೂ ಅಸ್ಸಾಂ ಮೂಲದ ಕಾರ್ಮಿಕರೇ ಪ್ರಮುಖ ಆಧಾರ.
ಆದರೆ ಲಾಕ್ ಡೌನ್ ನಂತಹ ಸಂಕಷ್ಟದಲ್ಲಿ ಕೂಲಿ ಕಾರ್ಮಿಕರಿಲ್ಲದೇ ಬಣಗುಡುತ್ತಿರುವ ಕಾಫಿ ತೋಟಗಳ ನಿರ್ವಹಣೆಗೆ ಕೆಲವೊಂದು ಬೆಳೆಗಾರರು ಕೋವಿಡ್ ನಿಯಮಾವಳಿಗಳನ್ನು ಮೀರಿ ಅಸ್ಸಾಂ ಕಾರ್ಮಿಕರನ್ನು ಕರೆತರುತ್ತಿದ್ದಾರೆ.
ಕೊಡಗಿನ ಗಡಿ ಕೊಪ್ಪ ಬಳಿ ಪೊಲೀಸರು ಈ ಅಸ್ಸಾಮಿಗಳನ್ನು ತಡೆದ ಪರಿಣಾಮ ವಾಮಮಾರ್ಗದಿಂದ ಆದರೂ ಸರಿಯೇ ಇವರನ್ನು ಹೇಗಾದರೂ ಮೇಸ್ತಿçಗಳು ಪತ್ರಿಕೆಯೊಂದಿಗೆ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.
ಪ್ರಕರಣಕ್ಕೆ ಸಂಬAಧಿಸಿದAತೆ ಪಿರಿಯಾಪಟ್ಟಣ ತಾಲೂಕು ಆಡಳಿತದ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದು, ಕಾರ್ಮಿಕರನ್ನು ವಾಪಸ್ ಅವರ ಸ್ವಂತ ಸ್ಥಳಕ್ಕೆ ತೆರಳುವಂತೆ ಸೂಚಿಸಿದ್ದಾರೆ.
ತೆಪ್ಪದಕಂಡಿಯ ಮೂಲಕ ಲಗ್ಗೆ
ಕಣಿವೆ : ಕೂಲಿ ಕಾರ್ಮಿಕರ ಕೊರತೆಯನ್ನು ಎದುರಿಸುತ್ತಿರುವ ಕೊಡಗು ಜಿಲ್ಲೆಯ ವಿವಿಧೆಡೆಗಳ ಕಾಫಿ ತೋಟಗಳ ಮಾಲೀಕರಿಗೆ ಕಳೆದ ಹಲವು ವರ್ಷಗಳಿಂದಲೂ ಅಸ್ಸಾಂ ಮೂಲದ ಕಾರ್ಮಿಕರೇ ಪ್ರಮುಖ ಆಧಾರ.
ಆದರೆ ಲಾಕ್ ಡೌನ್ ನಂತಹ ಸಂಕಷ್ಟದಲ್ಲಿ ಕೂಲಿ ಕಾರ್ಮಿಕರಿಲ್ಲದೇ ಬಣಗುಡುತ್ತಿರುವ ಕಾಫಿ ತೋಟಗಳ ನಿರ್ವಹಣೆಗೆ ಕೆಲವೊಂದು ಬೆಳೆಗಾರರು ಕೋವಿಡ್ ನಿಯಮಾವಳಿಗಳನ್ನು ಮೀರಿ ಅಸ್ಸಾಂ ಕಾರ್ಮಿಕರನ್ನು ಕರೆತರುತ್ತಿದ್ದಾರೆ.
ಕೊಡಗಿನ ಗಡಿ ಕೊಪ್ಪ ಬಳಿ ಪೊಲೀಸರು ಈ ಅಸ್ಸಾಮಿಗಳನ್ನು ತಡೆದ ಪರಿಣಾಮ ವಾಮಮಾರ್ಗದಿಂದ ಆದರೂ ಸರಿಯೇ ಇವರನ್ನು ಹೇಗಾದರೂ ಕೈಗಳಿಗೆ ಮುದ್ರೆ ಹಾಕಿ ಅವರುಗಳನ್ನು ಕಾಫಿ ತೋಟದ ಲೈನ್‌ಗಳಲ್ಲಿ ಹೋಂ ಕ್ವಾರಂಟೈನ್ ಮಾಡುವಂತೆ ಆದೇಶಿಸಿ ಅವರನ್ನು ಮಡಿಕೇರಿಯತ್ತ ಕಳುಹಿಸಲಾಯಿತು.
ಆನೆ ಚೌಕೂರು ಬಳಿಯಿಂದ ವಾಪಸ್
*ಗೋಣಿಕೊಪ್ಪಲು: ಇತ್ತ ಆನೆಚೌಕೂರು ಗೇಟ್ ಮೂಲಕ ದಕ್ಷಿಣ ಕೊಡಗಿಗೆ ನುಸುಳಲು ಆಗಮಿಸಿದ್ದ ಕಾರ್ಮಿಕರನ್ನು ಗೇಟ್‌ನಲ್ಲಿಯೇ ತಡೆದು ವಾಪಸ್ ಕಳುಹಿಸಿದ ಘÀಟನೆ ನಡೆಯಿತು.
ಆನೆಚೌಕೂರು ಗೇಟ್ ಮೂಲಕ ಕಾರ್ಮಿಕರು ಬರುತ್ತಿರುವ ಬಗ್ಗೆ ಮಾಹಿತಿ ದೊರೆತ ಮೇರೆಗೆ ಶಾಸಕ ಕೆ.ಜಿ.ಬೋಪಯ್ಯ ಅವರು ಕಾರ್ಮಿಕರನ್ನು ಜಿಲ್ಲೆಯ ಒಳಗೆ ಬರದಂತೆ ತಡೆಯಲು ತಹಶೀಲ್ದಾರರಿಗೆ ಸೂಚನೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ತಹಶೀಲ್ದಾರ್ ಯೋಗಾನಂದ್ ಅವರು, ಗಡಿ ಗೇಟ್‌ನಲ್ಲಿ ಕರ್ತವ್ಯದಲ್ಲಿರುವ ಪೊಲೀಸರು ಹಾಗೂ ಅಧಿಕಾರಿಗಳಿಗೆ ಕಾರ್ಮಿಕರನ್ನು ತಡೆ ಹಿಡಿಯುವಂತೆ ಸೂಚಿಸಿದ್ದಲ್ಲದೆ, ಸ್ಥಳಕ್ಕೆ ಭೇಟಿ ನೀಡಿದರು. ಜಿಲ್ಲೆಗೆ ಆಗಮಿಸುತ್ತಿದ್ದ ಮೂರು ಬಸ್ ಹಾಗೂ ಎರಡು ಟಿ.ಟಿ. ವಾಹನಗಳಲ್ಲಿದ್ದ ಕಾರ್ಮಿಕರನ್ನು ತಡೆದು ವಾಪಸ್ ಕಳುಹಿಸಲಾಯಿತು. ಕಾರ್ಮಿಕರ ಬಳಿ ಅಸ್ಸಾಂನಿAದ ಹೊರಡುವಾಗ ಕೋವಿಡ್ ಪರೀಕ್ಷೆ ಮಾಡಿಸಿದ ಪತ್ರಗಳಿದ್ದರೂ ಅದು ೫ರಿಂದ ೬ದಿನಗಳ ಹಿಂದಿನದ್ದಾಗಿರುವದರಿAದ ಅದನ್ನು ನಿರಾಕರಿಸಿ ವಾಪಸ್ ಕಳುಹಿಸಲಾಯಿತು.
ಕಾಯುತ್ತಿದ್ದ ಮಾಲೀಕರು
ಇತ್ತ ಗೇಟ್‌ನಿಂದ ಕೊಡಗಿನ ಒಳಭಾಗದಲ್ಲಿ ಕಾರ್ಮಿಕರಿಗಾಗಿ ಕೆಲವು ತೋಟದ ಮಾಲೀಕರು ತಮ್ಮ ವಾಹನಗಳಲ್ಲಿ ಕಾಯುತ್ತಿದ್ದ ದೃಶ್ಯವೂ ಗೋಚರಿಸಿತು. ಒಂದು ವೇಳೆ ಕಾರ್ಮಿಕರನ್ನು ಬಿಟ್ಟರೆ ಕರೆದೊಯ್ಯಲು ತಯಾರಾಗಿದ್ದರು. ಆದರೆ, ಅಧಿಕಾರಿಗಳು ಯಾರನ್ನೂ ಬಿಡದ್ದರಿಂದ ನಿರಾಶೆಯೊಂದಿಗೆ ವಾಪಸ್ ಮರಳುವಂತಾಯಿತು.
- ಚಂದ್ರಮೋಹನ್, ಮೂರ್ತಿ, ಗಣೇಶ್, ದಿನೇಶ್