ಮಡಿಕೇರಿ, ಜು. ೧: ನಗರದ ಜನರಲ್ ತಿಮ್ಮಯ್ಯ ಕ್ರೀಡಾಂಗಣಕ್ಕೆ ಕಾಯಕಲ್ಪ ನೀಡುವ ಸಲುವಾಗಿ ಅಗತ್ಯ ಕ್ರಮವಹಿಸುತ್ತೇನೆ. ಜೊತೆಗೆ ಮೈದಾನ ಸ್ವಚ್ಛತೆಗೆ ಸ್ಪೆಷಲ್ ಹೌಸ್ ಕೀಪಿಂಗ್ ಟೀಂ ರವಾನಿಸುತ್ತೇನೆ ಎಂದು ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಚಿವÀರಾದ ಡಾ. ನಾರಾಯಣ ಗೌಡ ಭರವಸೆ ನೀಡಿದರು.

ಜಿಲ್ಲಾ ಪಂಚಾಯ್ತಿ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ವಿಧಾನ ಪರಿಷತ್ ಸದಸ್ಯರಾದ ಎಂ.ಪಿ.ಸುನಿಲ್ ಸುಬ್ರಮಣಿ ಹಾಗೂ ಶಾಂತೆಯAಡ ವೀಣಾ ಅಚ್ಚಯ್ಯ ಮಡಿಕೇರಿ, ಜು. ೧: ನಗರದ ಜನರಲ್ ತಿಮ್ಮಯ್ಯ ಕ್ರೀಡಾಂಗಣಕ್ಕೆ ಕಾಯಕಲ್ಪ ನೀಡುವ ಸಲುವಾಗಿ ಅಗತ್ಯ ಕ್ರಮವಹಿಸುತ್ತೇನೆ. ಜೊತೆಗೆ ಮೈದಾನ ಸ್ವಚ್ಛತೆಗೆ ಸ್ಪೆಷಲ್ ಹೌಸ್ ಕೀಪಿಂಗ್ ಟೀಂ ರವಾನಿಸುತ್ತೇನೆ ಎಂದು ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಚಿವÀರಾದ ಡಾ. ನಾರಾಯಣ ಗೌಡ ಭರವಸೆ ನೀಡಿದರು.

ಜಿಲ್ಲಾ ಪಂಚಾಯ್ತಿ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ವಿಧಾನ ಪರಿಷತ್ ಸದಸ್ಯರಾದ ಎಂ.ಪಿ.ಸುನಿಲ್ ಸುಬ್ರಮಣಿ ಹಾಗೂ ಶಾಂತೆಯAಡ ವೀಣಾ ಅಚ್ಚಯ್ಯ ಬೆಂಗಳೂರಿನಿAದ ‘ಸ್ಪೆಷಲ್ ಹೌಸ್ ಕೀಪಿಂಗ್ ಟೀಂ’ ಅನ್ನು ಕೊಡಗಿಗೆ ಕಳುಹಿಸುತ್ತೇನೆ. ಅವರು ಮೈದಾನವನ್ನು ಶುಚಿಗೊಳಿಸುತ್ತಾರೆ. ಇದನ್ನು ಇಲಾಖೆಯ ಆಯುಕ್ತರು ಮೇಲ್ವಿಚಾರಣೆ ನಡೆಸುತ್ತಾರೆ. ಮೈದಾನಕ್ಕೆ ಸಿಂಥೇಟಿಕ್ ಟ್ರಾö್ಯಕ್ ಅಳವಡಿಕೆ ಸಂಬAಧ ಚರ್ಚಿಸುತ್ತೇನೆ ಎಂದು ಆಶ್ವಾಸನೆ ನೀಡಿದರು. ಕೊಡವ ಕೌಟುಂಬಿಕ ಹಾಕಿ ನಮ್ಮೆಗೆ ಶಾಶ್ವತ ಯೋಜನೆ ರೂಪಿಸುವ ನಿಟ್ಟಿನಲ್ಲಿ ಕ್ರಮಕೈಗೊಳ್ಳುತ್ತೇನೆ ಎಂದು ಸಚಿವರು ತಿಳಿಸಿದರು. ಇದೇ ಸಂದರ್ಭ ಸೋಮವಾರ ಪೇಟೆ ಟರ್ಫ್ ಮೈದಾನ

(ಮೊದಲ ಪುಟದಿಂದ) ತ್ವರಿತವಾಗಿ ಪೂರ್ಣಗೊಳ್ಳಬೇಕೆಂದು ಸುನಿಲ್ ಸುಬ್ರಮಣಿ ಗಮನ ಸೆಳೆದರು. ತಡೆಗೋಡೆ ನಿರ್ಮಾಣವಾಗ ಬೇಕಾಗಿದ್ದು, ರೂ. ೬೦ ಲಕ್ಷ ಪ್ರಸ್ತಾವನೆ ಇದೆ ಎಂದು ಸಚಿವರಿಗೆ ಮಾಹಿತಿ ನೀಡಿದರು. ಈ ಸಂಬAಧ ಕೇಂದ್ರ ಕಚೇರಿಯೊಂದಿಗೆ ಚರ್ಚಿಸಿ ಕ್ರಮದ ಭರವಸೆ ನೀಡಿದರು.

ಕ್ರೀಡಾ ಇಲಾಖೆಗೆ ಜಿ.ಪಂನಿAದ ಬರುವ ಅನುದಾನ ಚರ್ಚಿಸಿ ಸಮರ್ಪಕವಾಗಿ ಬಳಸಿ ಎಂದು ಸಚಿವರು ಸಲಹೆ ನೀಡಿದರು.

ಹೊದ್ದೂರುವಿನಲ್ಲಿ ಉದ್ದೇಶಿಸಿರುವ ಕ್ರಿಕೆಟ್ ಸ್ಟೇಡಿಯಂ ನಿರ್ಮಾಣ ಕೆಲವೊಂದು ವಿವಾದದಲ್ಲಿದ್ದು, ಈ ನಿಟ್ಟಿನಲ್ಲಿ ಸ್ಥಳದ ಸರ್ವೆ ಮಾಡುವಂತೆ ಜಿಲ್ಲಾಧಿಕಾರಿಗೆ ಸಚಿವರು ಸೂಚನೆ ನೀಡಿದರು.

ವೀಣಾ ಅಚ್ಚಯ್ಯ ಅವರು, ಬಾಳುಗೋಡುವಿನಲ್ಲಿ ಹಾಕಿ ಕ್ರೀಡಾಂಗಣಕ್ಕೆ ಸಮ್ಮಿಶ್ರ ಸರಕಾರದ ಅವಧಿಯಲ್ಲಿ ಅನುದಾನ ಬಿಡುಗಡೆಯಾಗಿತ್ತು. ಆದರೆ, ಅದನ್ನು ಇದೀಗ ಹಿಂಪಡೆದುಕೊಳ್ಳಲಾಗಿದೆ ಎಂದು ತಿಳಿಸಿದರು.

ಸಚಿವರ ಭೇಟಿ

ಜನರಲ್ ತಿಮ್ಮಯ್ಯ ಕ್ರೀಡಾಂಗಣ ಹಾಗೂ ಕ್ರೀಡಾ ವಸತಿ ನಿಲಯಕ್ಕೆ ಸಚಿವರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ವಸತಿ ನಿಲಯದ ವ್ಯವಸ್ಥೆಯ ಬಗ್ಗೆ ಬೇಸರ ವ್ಯಕ್ತಪಡಿಸಿದರು.

ವಸತಿನಿಲಯದ ನಿರ್ವಹಣೆ ಸರಿಯಾದ ರೀತಿಯಲ್ಲಿ ಆಗುತ್ತಿಲ್ಲ ಎಂದು ಮೇಲ್ನೋಟಕ್ಕೆ ಕಂಡುಬAದಿದೆ. ಜಿಲ್ಲಾ ಮಟ್ಟದ ಅಧಿಕಾರಿಗಳು ಈ ಬಗ್ಗೆ ಕ್ರಮಕೈಗೊಳ್ಳಬೇಕೆಂದು ಸೂಚಿಸಿದರು. ಮುಂದಿನ ತಿಂಗಳು ಮತ್ತೊಮ್ಮೆ ದಿಡೀರ್ ಭೇಟಿ ನೀಡುತ್ತೇನೆ. ಅಷ್ಟರಲ್ಲಿ ಎಲ್ಲವೂ ಸರಿಯಾಗಿರಬೇಕು ಎಂದು ತಿಳಿಸಿದರು.

ಇದೇ ಸಂದರ್ಭ ಮಾಜಿ ನಗರಸಭಾ ಸದಸ್ಯ ಚುಮ್ಮಿ ದೇವಯ್ಯ, ಕ್ರೀಡಾಂಗಣ ಮೇಲ್ವಿಚಾರಣೆ ಹಾಗೂ ನಿರ್ವಹಣಾ ಸಮಿತಿಯನ್ನು ರಚಿಸಬೇಕು ಎಂದು ಮನವಿ ಮಾಡಿದರು. ಇದಕ್ಕೆ ಸಚಿವರು ಸಕರಾತ್ಮಕವಾಗಿ ಸ್ಪಂದಿಸಿ ಸಮಿತಿಯಿಂದ ಉತ್ತಮ ಕೆಲಸ ಸಾಧ್ಯ. ಈ ನಿಟ್ಟಿನಲ್ಲಿ ಸಮಿತಿ ರಚನೆಗೆ ಕ್ರಮವಹಿಸುವಂತೆ ಜಿಲ್ಲಾಧಿಕಾರಿಗೆ ನಿರ್ದೇಶಿಸಿದರು.

ಭೇಟಿ ಸಂದರ್ಭ ವಿಧಾನ ಪರಿಷತ್ ಸದಸ್ಯ ಎಂ.ಪಿ. ಸುನಿಲ್ ಸುಬ್ರಮಣಿ, ಕ್ರೀಡಾ ಇಲಾಖೆಯ ರಾಜ್ಯ ಆಯುಕ್ತ ಗೋಪಾಲಕೃಷ್ಣ, ಉಪನಿರ್ದೇಶಕ ಪುಟ್ಟರಾಜು ಸೇರಿದಂತೆ ಇನ್ನಿತರರು ಹಾಜರಿದ್ದರು.