ಕುಶಾಲನಗರ, ಜು. ೧: ಗ್ಯಾಂಗ್ರಿನ್‌ನಿAದ ಒಂದು ಕಾಲನ್ನು ಕಳೆದುಕೊಂಡು ನಂತರ ಕೋವಿಡ್‌ನಿಂದ ಚೇತರಿಸಿಕೊಳ್ಳುತ್ತಿರುವ ಬಣ್ಣಾರಿಯವರ ಮನೆಗೆ ಭೇಟಿ ನೀಡಿ ಅವರ ಆರೋಗ್ಯ ವಿಚಾರಿಸಿದ ರೋಟರಿ ಕುಶಾಲನಗರದ ಅಧ್ಯಕ್ಷ ಚಂದ್ರಶೇಖರ್, ನಿಯೋಜಿತ ಅಧ್ಯಕ್ಷ ಎಂ.ಡಿ. ರಂಗಸ್ವಾಮಿ, ಅಶೋಕ, ಕಾರ್ಯದರ್ಶಿ ಉಲ್ಲಾಸ್ ಕೃಷ್ಣ, ಖಜಾಂಚಿ ಪ್ರೇಮ್ ಚಂದ್ರನ್ ಹಾಗೂ ಕುಮಾರ್ ಅವರು ಆಸ್ಪತ್ರೆ ಖರ್ಚಿಗಾಗಿ ಧನ ಸಹಾಯ ಮಾಡಿದರು.