ನಾಪೋಕ್ಲು, ಜು. ೧: ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯನ್ವಯ ಭಾಗಮಂಡಲದ ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ಸ್ವಸಹಾಯ ಸಂಘಗಳಿಗೆ ಲಾಭಾಂಶದ ಹಣವನ್ನು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸಿ.ಎಸ್. ಪೇಮಿತ ಮತ್ತು ಉಪಾಧ್ಯಕ್ಷ ಹೊಸೂರು ಸತೀಶ್ ಕುಮಾರ್ ಜೋಯಪ್ಪ ವಿತರಿಸಿದರು. ಈ ಸಂದರ್ಭ ಧರ್ಮಸ್ಥಳ ಸಂಘದ ಮೇಲ್ವಿಚಾರಕ ಸಂತೋಷ್, ಆಂತರಿಕ ಲೆಕ್ಕ ಪರಿಶೋಧಕ ಶ್ರೀನಿವಾಸ ಗೌಡ, ತಣ್ಣಿಮಾನಿ ಒಕ್ಕೂಟದ ಅಧ್ಯಕ್ಷ ಜಯಂತ, ಭಾಗಮಂಡಲ ಸೇವಾ ಪ್ರತಿನಿಧಿ ವೆಂಕಟರಮಣ, ಮತ್ತು ತಂಡದ ಸದಸ್ಯರು ಇದ್ದರು.