ಸೋಮವಾರಪೇಟೆ, ಜು. ೧: ಇಲ್ಲಿನ ಚೌಡೇಶ್ವರಿ ಬ್ಲಾಕ್‌ನಲ್ಲಿ ಸಾರ್ವಜನಿಕ ರಸ್ತೆಯ ಚರಂಡಿಯನ್ನು ಒತ್ತುವರಿ ಮಾಡಿಕೊಂಡು ಮನೆಯ ಕಾಂಪೌAಡ್ ನಿರ್ಮಿಸಲಾಗಿದ್ದು, ಇದರಿಂದ ಪಾದಚಾರಿಗಳಿಗೆ ಸಮಸ್ಯೆ ಯಾಗಿದೆ. ತಕ್ಷಣ ಒತ್ತುವರಿ ತೆರವು ಗೊಳಿಸಬೇಕೆಂದು ಸ್ಥಳೀಯರು ಜಿಲ್ಲಾಧಿಕಾರಿಗೆ ದೂರು ನೀಡಿದ್ದಾರೆ. ಚೌಡೇಶ್ವರಿ ಬಡಾ ವಣೆಯ ನಿವಾಸಿಯೋರ್ವರು ಪ.ಪಂ. ರಸ್ತೆಗೆ ಹೊಂದಿ ಕೊಂಡAತೆ ಮನೆ ನಿರ್ಮಾಣ ಮಾಡಿದ್ದು, ಪಂಚಾಯಿತಿ ವತಿಯಿಂದ ಚರಂಡಿಗೆ ಒತ್ತಿಕೊಂಡAತೆ ನಿರ್ಮಾಣ ಮಾಡಿದ್ದ ತಡೆಗೋಡೆಯನ್ನು ಕೆಡವಿ ಅದರ ಮೇಲೆ ಕಾಂಪೌAಡ್ ನಿರ್ಮಾಣ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ಬಡಾವಣೆಯ ಪ್ರಮುಖ ರಸ್ತೆಯಾಗಿದ್ದು, ಇದರಲ್ಲಿ ಹಲವು ವಾಹನಗಳು ಸಂಚರಿಸುತ್ತಿರುವುದರಿAದ ಕಾಲ್ನಡಿಗೆಯಲ್ಲಿ ಸಂಚರಿಸುವ ವಯೋವೃದ್ಧರು ಹಾಗೂ ಮಕ್ಕಳಿಗೆ ತೊಂದರೆ ಯಾಗಿದೆ. ಈಗಾಗಲೇ ಹಲವು ಅಪಘಾತಗಳು ನಡೆದಿದ್ದು, ಕೂಡಲೇ ತೆರವು ಗೊಳಿಸುವಂತೆ ಜಿಲ್ಲಾಧಿಕಾರಿಗಳಿಗೆ ಸ್ಥಳೀಯರಾದ ಸುಧಾ, ಪ್ರೀತಮ್, ಬಿ.ಟಿ. ಕುಮಾರ, ನಂದ, ರೇವಣ್ಣ, ಸತೀಶ್ ಸೇರಿದಂತೆ ಇತರರು ದೂರು ನೀಡಿದ್ದಾರೆ.