ಕಣಿವೆ, ಜು. ೧: ಕೊರೊನಾ ಮಹಾಮಾರಿಯನ್ನು ಮಣಿಸಲು ಸರ್ಕಾರ ಜಾರಿಗೊಳಿಸಿದ ಲಾಕ್‌ಡೌನ್ ಬಿಗಿನಿಯಮಗಳು ಕಾಡಾನೆಗಳು ಹಾಗೂ ಇತರೆ ವನ್ಯ ಜೀವಿಗಳಿಗೆ ಪೂರಕವಾಗಿ ಮಾರ್ಪಟ್ಟಿವೆ...!

ಕಾಡಾನೆಗಳ ಕಾಟ ವಿಪರೀತ ವಾಗಿರುವ ಕಾಡಂಚಿನ ಪ್ರದೇಶಗಳಾದ ವಾಲ್ನೂರು, ತ್ಯಾಗತ್ತೂರು, ಅಭ್ಯತ್ ಮಂಗಲ, ಕಲ್ಲೂರು, ನಾಕೂರು ಶಿರಂಗಾಲ, ಬಾಣಾವರ, ಸಿದ್ದಾಪುರ ಸೇರಿದಂತೆ ಕಾಡಂಚಿನ ಆಸುಪಾಸಿನ ಗ್ರಾಮಗಳ ವ್ಯಾಪ್ತಿಯಲ್ಲಿ ಸಂಜೆಯಾಗು ತ್ತಿದ್ದಂತೆಯೇ ಜನ ಹಾಗೂ ವಾಹನಗಳ ಸಂಚಾರ ಸ್ತಬ್ಧವಾ ದ್ದರಿಂದ ಇದರ ಲಾಭ ಪಡೆಯುತ್ತಿರುವ ಕಾಡಾನೆಗಳು ತಮ್ಮನ್ನು ಸ್ವಚ್ಛಂದದ ವಿಹಾರಕ್ಕೆ ತೆರೆದು ಕೊಂಡAತೆ ಗೋಚರಿಸುತ್ತಿದೆ. ಏಕೆಂದರೆ ಇದುವರೆಗೂ ಕಾಫಿ ತೋಟಗಳಿಗೆ, ಕೃಷಿ ಭೂಮಿಗೆ ಬಂದು ಅಲ್ಲಿನ ಫಸಲು ತಿಂದು - ತುಳಿದು ನಾಶಪಡಿಸಿ ತೆರಳುತ್ತಿದ್ದ ಕಾಡಾನೆಗಳು ಇದೀಗ ಮನೆಗಳ ಮೇಲೆ ದಾಳಿ ಮಾಡುವಂತಹ ಹೊಸ ಪ್ರಹಾರಕ್ಕೆ ಮುಂದಾಗಿವೆ. ವಾಲ್ನೂರು ಗ್ರಾಮದ ರಾಮಪ್ಪ ಎಂಬವರ ಮನೆಗೆ ದಾಳಿ ಇಟ್ಟು ಮನೆ ಮುಂಬದಿ ಇದ್ದ ದ್ವಿಚಕ್ರ ವಾಹನವನ್ನು ಸೊಂಡಿಲಿನಿAದ ಎತ್ತಿ ಹೂಕುಂಡಗಳ ಮೇಲೆ ಎಸೆದು ರೌದ್ರಾವತಾರ ತಾಳಿ ಮತ್ತೆ ಚೆನ್ನಂಗಿಯ ಬಸವನಹಳ್ಳಿಯ ಹಾಡಿಯ ಮನೆಯೊಂದರ ಮೇಲೆ ದಾಳಿ ನಡೆಸಿರುವುದು ಜಿಲ್ಲೆಯ ಕಾಡಂಚಿನ ನಿವಾಸಿಗಳಲ್ಲಿ ಆತಂಕ ಮೂಡಿಸಿದೆ. ಕಾಡಾನೆಗಳ ಹಾವಳಿ ಮಿತಿ ಮೀರಿರುವ ವಾಲ್ನೂರು ತ್ಯಾಗತ್ತೂರು ವ್ಯಾಪ್ತಿಯಲ್ಲಿ ಕಾಡಾನೆಗಳ ನಿಗ್ರಹಕ್ಕೆಂದು ಇಲಾಖೆ ಜಿಲ್ಲೆಯಲ್ಲೇ ಮೊದಲೆಂಬAತೆ ರೈಲ್ವೆ ಕಂಬಿಯನ್ನೂ ಕೂಡ ಅಳವಡಿಸಿತ್ತು. ಆದರೆ ಮಾನವ ನಿಗಿಂತಲೂ ಹೆಚ್ಚಾಗಿ ಒಂದು ಹೆಜ್ಜೆ ಮುಂದೆ ಸಾಗಿ ಬುದ್ಧಿವಂತಿಕೆ ಪ್ರದರ್ಶಿಸುತ್ತಿರುವ ಕಾಡಾನೆಗಳು ರೈಲ್ವೆ ಕಂಬಿಯ ಒಳಗೆ ನೀಳ ಹಾಗೂ ದಪ್ಪ ಕಾಯದ ಶರೀರವನ್ನು ಕಂಬಿಯೊಳಗೆ ತೂರಿಸಿ ದಾಟಿ ಹೊರ ಬರಲಾರಂಬಿಸಿವೆ ಎಂದರೆ ಮತ್ತಿನ್ನೇನು ಮಾಡಬೇಕು ಎಂಬ ಜಿಜ್ಞಾಸೆಯಲ್ಲಿ ಇಲಾಖೆಯ ಅಧಿಕಾರಿಗಳಿದ್ದಾರೆ.

ಇನ್ನೊಂದೆಡೆ ಕಾಡಿನೊಳಗೆ ಕಾಡಾನೆಗಳು ಹಸಿವು ನೀಗಿಸಿಕೊಳ್ಳುವ ಯಾವುದೇ ವಿಧದ ಆಹಾರದ ಸೊಪ್ಪು ಸೆದೆಗಳಿಲ್ಲದ ಪರಿಣಾಮ ಹಸಿವು ತಾಳಲಾರದ ಕಾಡಾನೆಗಳು ಹೀಗೆ ರೈತರು ಬೆಳೆಸಿರುವ ಕಾಫಿ ತೋಟದ ಒಳಗಿನ ಹಲಸು, ಮಾವು, ಬಾಳೆ, ತೆಂಗು ಮತ್ತಿತರೆ ಫಸಲನ್ನು ತಿನ್ನಲು ಧಾವಿಸುತ್ತಿವೆ. ಹಾಗೆಯೇ ದಾಹ ತೀರಿಸಿಕೊಳ್ಳಲು ಕಾವೇರಿ ನದಿಯನ್ನು ಅವಲಂಬಿಸಿವೆ. ಅವುಗಳು ತೆರಳುವ ಮಾರ್ಗ ಮಧ್ಯೆ ಸಿಗುವ ವಾಸದ ಮನೆಗಳ ಶ್ವಾನಗಳು ಈ ಕಾಡಾನೆಗಳ ಇರುವಿಕೆಯನ್ನು ವಾಸನೆಯಿಂದ ಗ್ರಹಿಸಿ ಬೊಗಳಿ ಬೊಬ್ಬೆ ಇಡುವ ಸಂದರ್ಭ ಸವಿಯಾದ ಸುಖ ನಿದ್ರೆಯಲ್ಲಿ ಜಾರಿದ್ದ ಮನೆ ಮಂದಿ ತಮ್ಮ ತೋಟಗಳ ನಿತ್ಯದ ನೆಂಟರಾದ ಈ ಕಾಡಾನೆಗಳನ್ನು ಓಡಿಸಲು ಜೋರಾಗಿ ಸದ್ದು ಮಾಡಿದರೆ ಅಥವಾ ಪಟಾಕಿ ಇಟ್ಟರೆ ಅರೆ ಕ್ಷಣ ವಿಚಲಿತ ವಾಗುವ ಒಂಟಿಯಾನೆ ತನ್ನ ಕೋಪ ವನ್ನು ಹೀಗೆ ಮನೆಯ ಚಾವಡಿಯನ್ನು ಎಳೆದು ಎಸೆಯುವ ವಸ್ತು ಅಥವಾ ವಾಹನಗಳನ್ನು ಜಖಂ ಗೊಳಿಸುವ ಮೂಲಕವೂ ಮನುಷ್ಯರಿಗೆ ತಮ್ಮ ಅಳಲು ಹೇಳಿ ಹೊರಟು ಹೋಗುತ್ತಿರಬಹುದು...!

ಅರಣ್ಯ ಇಲಾಖೆ ಇಂತಹ ಪುಂಡಾಟ ಮಾಡುವ ಆನೆಗಳನ್ನು ಇಲಾಖೆಯ ಹಣ ವ್ಯಯಿಸಿ ಹಿಡಿಯುವ ದುಸ್ಸಾಹಸ ಮಾಡುವ ಬದಲು ಕಾಡಿನೊಳಗೆ ಕಾಡಾನೆಗಳಿಗೆ ಬೇಕಾದಂತಹ ಆಹಾರದ ಗಿಡ ಮರ ಗಳನ್ನು ನೆಟ್ಟು ಬೆಳೆಸುವ ಪ್ರಾಮಾಣಿಕ ಯೋಜನೆಗೆ ಮುಂದಾಗಬೇಕಿದೆ.